23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಸಹ ಸಂಸ್ಥೆ ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ನಲ್ಲಿ ವೈದ್ಯರ ದಿನಾಚರಣೆ: ಹಿರಿಯ ವೈದ್ಯ ಡಾ. ಅನಂತ ಕೃಷ್ಣ ಉಪಾಧ್ಯಾಯ ಪಾದೂರು ಅವರಿಗೆ ಸನ್ಮಾನ

ಬಣಕಲ್ : ವೈದ್ಯರ ದಿನಾಚರಣೆಯ ಅಂಗವಾಗಿ ಸಾಯಿ ಕೃಷ್ಣ ಹೆಲ್ತ್ ಸೆಂಟರ್, ಬಣಕಲ್ ವತಿಯಿಂದ ಹಿರಿಯ ವೈದ್ಯರಾದ ಡಾ. ಅನಂತ ಕೃಷ್ಣ ಉಪಾಧ್ಯಾಯ ಪಾದೂರು ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

1964ರಲ್ಲಿ ಬಣಕಲ್‌ನ ಕೃಷ್ಣ ಕ್ಲಿನಿಕ್‌ನಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿದ ಡಾ.ಅನಂತಕೃಷ್ಣ ಪಾದೂರು ಅವರು ಕಳೆದ ಆರು ದಶಕಗಳಿಗೂ ಅಧಿಕ ಕಾಲ ಬಣಕಲ್ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರಿಗೆ ನಿಸ್ವಾರ್ಥ,ಆರೋಗ್ಯ ಸೇವೆಯನ್ನು ಸಲ್ಲಿಸಿ ಸಾವಿರಾರು ಕುಟುಂಬಗಳ ವಿಶ್ವಾಸಾರ್ಹ ವೈದ್ಯರಾಗಿ ಗುರುತಿಸಿಕೊಂಡಿದದ್ದರು.ಸಾರಿಗೆ ಹಾಗೂ ಆರೋಗ್ಯ ಸೌಲಭ್ಯಗಳು ಅತ್ಯಂತ ಸೀಮಿತವಾಗಿದ್ದ ಕಾಲದಲ್ಲಿ ಸೈಕಲ್‌ನಲ್ಲಿ, ನಂತರದ ವರ್ಷಗಳಲ್ಲಿ ಮೋಟಾರ್ ಬೈಕ್‌ನಲ್ಲಿ ದೂರದ ಗ್ರಾಮಗಳಿಗೆ ತೆರಳಿ, ಮನೆ ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ ಅವರ ಸೇವೆ ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿ ಮಾದರಿಯಾಗಿದೆ.ಹಗಲು-ರಾತ್ರಿ ಎನ್ನದೆ ಸಲ್ಲಿಸಿದ ಅವರ ವೈದ್ಯಕೀಯ ಸೇವೆ ಸಮರ್ಪಣೆ, ಸೇವಾಭಾವ ಮತ್ತು ಮಾನವೀಯತೆಯ ಪ್ರತೀಕವಾಗಿದೆ.

ತಮ್ಮ ಸುದೀರ್ಘ ವೈದ್ಯಕೀಯ ಬದುಕಿನಲ್ಲಿ ಅಸಂಖ್ಯಾತ ರೋಗಿಗಳ ನೋವನ್ನು ನಿವಾರಿಸಿ, ಅನೇಕ ಕುಟುಂಬಗಳಿಗೆ ಆರೋಗ್ಯ, ಆಶಾಭಾವನೆ ಮತ್ತು ನೆಮ್ಮದಿಯನ್ನು ನೀಡಿರುವ ಅವರ ಅಮೋಘ ಸೇವೆಯನ್ನು ಸ್ಮರಿಸಿ, ವೈದ್ಯರ ದಿನಾಚರಣೆಯ ಅಂಗವಾಗಿ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಇದರ ಸಹಸಂಸ್ಥೆ ಸಾಯಿ ಕೃಷ್ಣ ಹೆಲ್ತ್ ಸೆಂಟರ್ ವತಿಯಿಂದ ಗೌರವ ಸನ್ಮಾನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಹೆಲ್ತ್ ಸೆಂಟರ್‌ ಹಾಗೂ ಸಹಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಅವರು ಮಾತನಾಡಿ “ಡಾ. ಅನಂತ ಕೃಷ್ಣ ಉಪಾಧ್ಯಾಯ ಪಾದೂರು ಅವರಂತಹ ಸೇವಾನಿಷ್ಠ ವೈದ್ಯರು ಸಮಾಜಕ್ಕೆ ಮಾದರಿಯಾಗಿದ್ದು, ಅವರು ಇಂದಿನ ಯುವ ವೈದ್ಯರಿಗೆ ಆದರ್ಶಪ್ರಾಯರಾಗಿದ್ದಾರೆ”ಎಂದರು.
ಕಾರ್ಯಕ್ರಮದಲ್ಲಿ ಸಾಯಿ ಕೃಷ್ಣ ಹೆಲ್ತ್ ಸೆಂಟರ್,ಬಣಕಲ್ ಇದರ ಮುಖ್ಯ ವೈದ್ಯಾಧಿಕಾರಿ ಡಾ. ಚೈತನ್ಯ ನಾಯಕ್,ವೈದ್ಯರಾದ ಡಾ. ಶ್ರೀಲಕ್ಷ್ಮಿ , ಡಾ. ಸುಮಂತ್, ವ್ಯವಸ್ಥಾಪಕರಾದ ಅನಂತ ಪ್ರಸಾದ್, ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಡಾ. ಅನಂತ ಕೃಷ್ಣ ಉಪಾಧ್ಯಾಯ ಪಾದೂರು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

Related posts

ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತುವಿನಲ್ಲಿ ಜುಮ್ರಾ ಜುಮಾದಿ ದೈವಗಳ ಪುನರ್‌ಪ್ರತಿಷ್ಠಾಪನೆ

Suddi Udaya

ಉಜಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೆಯರ್ ವಿತರಣೆ

Suddi Udaya

ಉಜಿರೆ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ಆಸ್ಪತ್ರೆ, ಬೆಳ್ತಂಗಡಿ ಲಯನ್ಸ್ ಸೇವಾ ಸಂಸ್ಥೆ, ಲಿಯೋ ಕ್ಲಬ್ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ತ್ರೋಬಾಲ್ ಪಂದ್ಯಾಟದಲ್ಲಿ ವಾಣಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಗುರುವಾಯನಕೆರೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಅಧ್ಯಕ್ಷರಾಗಿ ಸತ್ಯಪಾಲನ್ ನಾಯರ್, ಕಾರ್ಯದರ್ಶಿಯಾಗಿ ಮಾನ್ಯ ಆಯ್ಕೆ

Suddi Udaya

ಕನ್ನಾಜೆ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೋತ್ಸವ – ಉದ್ಯಮಿ ಶಶಿಧರ್ ಶೆಟ್ಟಿ ಅವರ ಮಾತೃಶ್ರೀ ಕಾಶಿ ಶೆಟ್ಟಿಯವರ ಸ್ಮರಣಾರ್ಥ ಮಹಿಳೆಯರಿಗೆ ವಸ್ತ್ರದಾನ

Suddi Udaya
error: Content is protected !!