23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರೋಟರಿ ಕ್ಲಬ್ ಯಲಹಂಕ ವತಿಯಿಂದ ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ಜೂ.29 ರಂದು ರೋಟರಿ ಕ್ಲಬ್, ಯಲಹಂಕ, ಬೆಂಗಳೂರು ಇವರ ವತಿಯಿಂದ ಹತ್ತು ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣಾ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್, ಯಲಹಂಕ, ಬೆಂಗಳೂರು ಇದರ ಅಧ್ಯಕ್ಷರು ಮತ್ತು ಬೆಳಾಲು ಶಾಲೆಯ ಹಿರಿಯ ವಿದ್ಯಾರ್ಥಿಯಾದ ರೋಟೇರಿಯನ್ ಅಶೋಕ್ ಹೆಬ್ಬಾರ್ ಮಾತನಾಡಿ ಜೀವನದಲ್ಲಿ ಹಣ ಗಳಿಕೆಯೇ ಮುಖ್ಯವಲ್ಲ ಸಮಾಜಕ್ಕೆ ಸಹಾಯವಾಗುವ ಕನಸುಗಳನ್ನು ಕಟ್ಟಿಕೊಳ್ಳಬೇಕು ಇಂತಹ ಸೌಲಭ್ಯಗಳನ್ನು ಪಡೆದವರು ಸಮಾಜಕ್ಕೆ ಮರಳಿ ನೀಡುವ ಮನಸ್ಸು ಮತ್ತು ಅವಕಾಶಗಳು ಲಭ್ಯವಾಗಲಿ ಎಂದು ಬೈಸಿಕಲ್ ವಿತರಿಸಿ ಶುಭ ಹಾರೈಸಿದರು.

ಮುಖ್ಯೋಪಾಧ್ಯಾಯರಾದ ಜಯರಾಮ ಮಯ್ಯ ಮಾತನಾಡಿ ತನ್ನತನಕ್ಕಿಂತ ಮಿಗಿಲಾಗಿ ಸೇವೆಯನ್ನು ಮಾಡುವ ಮನಸ್ಸು ಎಲ್ಲರಿಗೂ ಒದಗಲಿ ಎಂದು ತಿಳಿಸಿ, ಬೈಸಿಕಲ್ ನೀಡಿದ ರೋಟರಿ ಕ್ಲಬ್ ಯಲಹಂಕದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಕಾರ್ಯದರ್ಶಿ ರೋಟೇರಿಯನ್ ಭಾಸ್ಕರ್ ಬಿ.ಎಂ, ಸದಸ್ಯರಾದ ರೋಟೇರಿಯನ್ ಸತೀಶ್ ಶೆಟ್ಟಿ, ರೋಟೇರಿಯನ್ ಜಯರಾಮ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಶಿಧರ, ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಕನಿಕ್ಕಿಲ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೇಶ್ ಗೌಡ ಕುರ್ಕಿಲ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶಿಕ್ಷಕ ಸುಮನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Related posts

ಧರ್ಮಸ್ಥಳದಲ್ಲಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್‌ರವರ 135ನೇ ಜನ್ಮದಿನದ ಸಂಭ್ರಮಾಚರಣೆ

Suddi Udaya

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿಯಾಗಿ ರೋಹಿನಿ ಸಿ.ಕೆ ಅಧಿಕಾರ ಸ್ವೀಕಾರ

Suddi Udaya

ಬೆಳ್ತಂಗಡಿ: ಧ.ಮಂ.ಆಂಗ್ಲ ಮಾಧ್ಯಮ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಬ್ ಬುಲ್ ಬುಲ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರಶಸ್ತಿ

Suddi Udaya

ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ವತಿಯಿಂದ ನಡೆಯುವ ಯೋಗ ರತ್ನ ಪ್ರಶಸ್ತಿಗೆ ಕು| ಚಿನ್ಮಯಿ. ಹೆಚ್, ಆಯ್ಕೆ

Suddi Udaya

ಡಿಸಿ ಮನ್ನಾ ಜಮೀನು ಹಂಚಿಕೆ ರಾಜ್ಯ ಸರ್ಕಾರ ನಿರ್ಲಕ್ಷ್ಯ, ಬೆಳ್ತಂಗಡಿ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ತುರ್ತು ಸಭೆ

Suddi Udaya

ನಾರಾವಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ಪೂಜಾ ವಿಧಾನ ಮತ್ತು ಉದ್ಯಾಪನಾ ಪೂಜಾ ವಿಧಾನ

Suddi Udaya
error: Content is protected !!