23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿ

ಉಜಿರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಭಾಸ್ಕರ ಆಚಾರ್ಯ ವಿಧಿವಶ

ಉಜಿರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಭಾಸ್ಕರ ಆಚಾರ್ಯ( 80ವರ್ಷ) ಉಜಿರೆ ಅವರು ಅಲ್ಪಕಾಲದ ಅಸೌಖ್ಯದಿಂದ ಜು.6 ರಂದು ಬೆಳಿಗ್ಗೆ ನಿಧನರಾದರು.

ವೃತ್ತಿಯಲ್ಲಿ ವಾಹನ ಮತ್ತು ಪಂಪ್ ಸೆಟ್ ಮೆಕ್ಯಾನಿಕ್ ಆಗಿ ಸ್ಥಳೀಯವಾಗಿ ಹೆಸರುವಾಸಿಯಾಗಿದ್ದ ಇವರು ಅಯೋಧ್ಯಾ ಶ್ರೀ ರಾಮ ಮಂದಿರ ಹೋರಾಟದ ಸಂದರ್ಭದಲ್ಲಿ ಕರ್ನಾಟಕದಿಂದ ಹೋದ ರಾಮಶಿಲಾಪೂಜನ ರಥದೊಂದಿಗೆ ಅಯೋಧ್ಯೆ ತಲುಪಿದ್ದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕರಾಗಿದ್ದರು. ಸಂಘದ ಶಾಖೆಯಲ್ಲಿ ಸುಶ್ರಾವ್ಯವಾಗಿ ಹಾಡು ಹೇಳಿ ಕೊಡುತ್ತಿದ್ದ, ಪಥ ಸಂಚಲನದಲ್ಲಿ ಶಂಖವಾದಕರಾಗಿ ಭಾಗವಹಿಸುತ್ತಿದ್ದ, ರಾಷ್ಟ್ರವಾದಿಯಾಗಿ, ತನ್ನ ಜೀವಿತಾವಧಿ ಪೂರ್ತಿ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ಪಾಲ್ಗೊಂಡಿದ್ದರು.

ಮೃತರು ಪತ್ನಿ ಶಾರದಾ, ಓರ್ವೆ ಪುತ್ರಿ, ಈರ್ವರೂ ಪುತ್ರರಾದ ಲವ ಕುಮಾರ್ ಮತ್ತು ಕುಶ ಕುಮಾರ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಸೇನೆಗೆ ಆಯ್ಕೆಯಾದ ರಂಜಿತ್ ಪೂಜಾರಿಯವರಿಗೆ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯಿಂದ ಸನ್ಮಾನ

Suddi Udaya

ಕಲಾ ಪ್ರತಿಭೆಗಳು ಸಂಸ್ಥೆಯ 5ನೇ ವರ್ಷದ ಸಂಭ್ರಮ: ಆಮಂತ್ರಣ ವಿಜಯ ಕುಮಾರ್ ಜೈನ್ ಅಳದಂಗಡಿ ರವರಿಗೆ ಸನ್ಮಾನ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ದುರ್ಗಾ ಹೋಮ ಹಾಗೂ ವಿದ್ಯಾಸರಸ್ವತಿ ಪೂಜೆ ಮತ್ತು ನೂತನ ತರಗತಿ ಕೊಠಡಿ ಹಾಗೂ ಕಂಪ್ಯೂಟರ್ ಪ್ರಯೋಗಾಲಯ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಕದಿರು (ತೆನೆ) ಹಬ್ಬ 

Suddi Udaya

ಅರಸಿನಮಕ್ಕಿ ಸರಕಾರಿ ಪ್ರೌಢ ಶಾಲೆಗೆ ಶೇ. 86.84 ಫಲಿತಾಂಶ

Suddi Udaya

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಸಂಭ್ರಮಾಚರಣೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya
error: Content is protected !!