23.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಪುಚಿನ್ ಕೃಷಿಕಾ ಸೇವಾ ಕೇಂದ್ರ ಮತ್ತು ವಿಮುಕ್ತಿ ಸ್ವ ಸಹಾಯ ಸಂಘಗಳ ವತಿಯಿಂದ ವಿದ್ಯಾಸ್ನೇಹಿ ಬಡ್ಡಿರಹಿತ ಶಿಕ್ಷಣ ಸಾಲ ವಿತರಣೆ

ಲಾಯಿಲ: ಕಪುಚಿನ್ ಕೃಷಿಕಾ ಸೇವಾ ಕೇಂದ್ರ ಮತ್ತು ವಿಮುಕ್ತಿ ಸ್ವ ಸಹಾಯ ಸಂಘಗಳ ವತಿಯಿಂದ 7ನೇ ವರ್ಷದ ವಿದ್ಯಾಸ್ನೇಹಿ ಬಡ್ಡಿರಹಿತ ಶಿಕ್ಷಣ ಸಾಲ ವಿತರಣಾ ಕಾರ್ಯಕ್ರಮವು ಜು.5 ರಂದು ವಿಮುಕ್ತಿ ಸಭಾಭವನದಲ್ಲಿ ನಡೆಯಿತು.

ಸಂಸ್ಥೆಯ ನಿರ್ದೇಶಕರಾದ ಫಾ.ವಿನೋದ್ ಮಸ್ಕರೇನಸ್‌ರವರು ಸಂವಿಧಾನದ ಪುಸ್ತಕಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಳೆದ 7 ವರ್ಷಗಳ ವಿದ್ಯಾಸ್ನೇಹಿಯ ಪಯಣದ ಹಾದಿಯನ್ನು ಸಹ ನಿರ್ದೇಶಕರಾದ ಫಾ ರೋಹನ್ ಲೋಬೋರವರು ವಿವರಿಸಿದರು. ಸಂಸ್ಥೆಯ ನಿರ್ದೇಶಕರು ವಿದ್ಯಾರ್ಥಿಗಳಿಗೆ ಸಮುದಾಯದ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮುದಾಯದಲ್ಲಿರುವ ಅಸಹಾಯಕ ಹಾಗೂ ಬಡ ಜನರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸುತ್ತಾ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಾಲಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ತಮ್ಮ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು ಹಾಗೂ ಉಪಾಧ್ಯಕ್ಷೆ ಶಶಿಕಲಾ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಒಟ್ಟು 31 ವಿದ್ಯಾರ್ಥಿಗಳಿಗೆ ಸುಮಾರು 8,91,000 ರೂಪಾಯಿಗಳ ಶೈಕ್ಷಣಿಕ ಬಡ್ಡಿರಹಿತ ಸಾಲದ ಮೊತ್ತವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ನಿರ್ದೇಶಕರಾದ ಫಾ ರೋಹನ್ ಲೋಬೋ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯಕರ್ತೆ ಶ್ರೀಮತಿ ಮೋಹಿನಿಯವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಸಂಸ್ಕೃತೋತ್ಸವ’, ‘ಸಂಸ್ಕೃತ ಸಂಧ್ಯಾ’

Suddi Udaya

ಶಿಶಿಲ: ಶಿಶಿಲ ಒಟ್ಲದಲ್ಲಿ ಕಾಡಾನೆಗಳ ದಾಳಿ; ಅಪಾರ ಕೃಷಿ ನಾಶ

Suddi Udaya

ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಿಂದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಬೇಟಿ

Suddi Udaya

ಗುರುವಾಯನಕರೆ: ಕಾವ್ಯಶ್ರೀ ಆಜೇರು ಹಾಡಿರುವ “ಮಲೆನಾಡ ಮಡಿಲಿನಲ್ಲಿ” ಜಿನಭಕ್ತಿಗೀತೆ ಲೋಕಾರ್ಪಣೆ

Suddi Udaya

ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ರಕ್ಷಾಬಂಧನ ಆಚರಿಸಿದ ರಾಜಕೇಸರಿ ಸೇವಾ ಟ್ರಸ್ಟ್

Suddi Udaya

ವೇಣೂರು ಸಿಎ ಬ್ಯಾಂಕ್ ನ ಮಾಜಿ ನಿರ್ದೇಶಕ ರತ್ನವರ್ಮ ಮುದ್ಯ ನಿಧನ

Suddi Udaya
error: Content is protected !!