24.9 C
ಪುತ್ತೂರು, ಬೆಳ್ತಂಗಡಿ
October 9, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಳ್ತಂಗಡಿ : ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಆರೋಪಿ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಮಂಗಳೂರು ಪೋಕ್ಸೋ ನ್ಯಾಯಾಲಯ ಆದೇಶ ಮಾಡಿದೆ.

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ ಬಗ್ಗೆ 3-11-2025 ರಂದು ಕಲಂ 376(2)(n) 506 IPC ಹಾಗೂ 6 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ಮಂಗಳೂರು ನಗರ ಗುರುಪುರದ ಅಡ್ಡೂರು ನಿವಾಸಿ ಆಫ್ರಿದ್ @ ಅಪ್ಪಿ(21) ಎಂಬಾತನನ್ನು ಪುಂಜಾಲಕಟ್ಟೆ ಸಬ್‌ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಬಳಿಕ ಆರೋಪಿ 5-7-2025 ರಿಂದ 23-2-2026 ವರೆಗೆ ನ್ಯಾಯಾಂಗ ಬಂಧನಲ್ಲಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಪ್ರಾಥಮಿಕ ತನಿಖೆಯನ್ನು ಬೆಳ್ತಂಗಡಿ ಇನ್ಸ್‌ಪೆಕ್ಟರ್ ಅಗಿದ್ದ ಬಿ.ಜಿ.ಸುಬ್ಬಪುರ ಮಠ ನಡೆಸಿ ಬಳಿಕ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ಸಂಪೂರ್ಣ ಪ್ರಕರಣದ ತನಿಖೆ ನಡೆಸಿ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಫ್.ಟಿ.ಎಸ್.ಸಿ-2 ಗೆ ದೋಷರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಆಫ್ರಿಸ್ @ ಅಪ್ಪಿ ಎಂಬಾತ ಅಪರಾಧಿ ಎಂದು 4-7-2026 ರಂದು ತೀರ್ಮಾನಿಸಿ 8-7-2026 ರಂದು ಪೋಕ್ಸೋ ಕಲಂ 6 ಹಾಗೂ IPC 376(2)(n) ಅಡಿಯಲ್ಲಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 4 ತಿಂಗಳ ಸರಳ ಶಿಕ್ಷೆ, IPC ಕಲಂ 506 ಅಡಿಯಲ್ಲಿ 3 ತಿಂಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ದಂಡ, ದಂಡ ಪಾವತಿಸದಿದ್ದಲ್ಲಿ 15 ದಿನಗಳ ಹೆಚ್ಚುವರಿ ಸರಳ ಕಾರಾಗೃಹ ಶಿಕ್ಷೆ, ಎರಡು ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗುತ್ತದೆ ಎಂದು ನ್ಯಾಯಾಧೀಶರಾದ ಮಾನು.ಕೆ ರವರು ಆದೇಶ ಮಾಡಿದ್ದಾರೆ. ಸರಕಾರಿ ಅಭಿಯೋಜಕರು(ಪಿಪಿ) ಸಹಾನ ದೇವಿ, ತನಿಖಾಧಿಕಾರಿ ಬಿ.ಜಿ.ಸುಬ್ಬಪುರ ಮಠ ಮತ್ತು ವೃತ್ತ ನಿರೀಕ್ಷಕ ರವಿ.ಬಿ.ಎಸ್ ಜೊತೆಯಲ್ಲಿ ತನಿಖಾ ಸಹಾಯಕರಾಗಿ ವಿಜಯ ಕುಮಾರ್ ರೈ, ಪ್ರಕಾಶ್ ಪೂಜಾರಿ, ರಮ್ಯ ಸಹಕರಿಸಿರುತ್ತಾರೆ.

Related posts

ಪಡ್ಡಂದಡ್ಕ ಸಾಧನಾಶ್ರೀ ಮಹಿಳಾ ಮಂಡಲ ಉದ್ಘಾಟನೆ

Suddi Udaya

ವೈಯಕ್ತಿಕ ತೇಜೋವಧೆ ಸರಿಯಲ್ಲ: ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ

Suddi Udaya

ವೇಣೂರು ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಉಜಿರೆ: ಸುರ್ಯ ರಸ್ತೆಯ ಪಡುವೆಟ್ಟು ಜನವಸತಿ ಪ್ರದೇಶಕ್ಕೆ ‘ಕೃಷ್ಣನಗರ’ ನಾಮಫಲಕ ಅನಾವರಣ

Suddi Udaya

ಕುಸಿಯುವ ಮೊದಲು ಹೊಸ ಸೇತುವೆ ನಿರ್ಮಾಣವಾಗುವುದೇ…? ಚುನಾವಣೆ ಬಹಿಷ್ಕಾರ ಹಾಕಿದರೂ ಕ್ಯಾರೇ ಅನ್ನದ ಅಧಿಕಾರಿಗಳು…!!!

Suddi Udaya

ಕೊಕ್ಕಡ ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕದ ನೂತನ ಪದಾಧಿಕಾರಿಗಳ ರಚನೆ

Suddi Udaya
error: Content is protected !!