33.7 C
ಪುತ್ತೂರು, ಬೆಳ್ತಂಗಡಿ
October 9, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜು: ವ್ಯುತ್ಪತ್ತಿ ಸಂಘದ ಉದ್ಘಾಟನೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಉಜಿರೆ :ಇಲ್ಲಿನ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಮಾನವಿಕ ವಿಭಾಗಗಳ ಸಂಘ ವ್ಯೂತ್ಪತ್ತಿ ಇದರ ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಅಧಿಕೃತ ವಾಗಿ ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ನಿವೃತ್ತ ಮುಖ್ಯ್ಯೊಪಾಧ್ಯಯರಾದ ಪದ್ಮರಾಜ್ ಜೈನ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಸಂಘಗಳು ನಾಯಕತ್ವಗುಣಗಳನ್ನು ಬೆಳೆಸುವುದರ ಜೊತೆಗೆ ಜಾವಾಬ್ದಾರಿಗಳನ್ನು ಕಲಿಸುತ್ತದೆ. ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುಗಳ ಮಾರ್ಗದರ್ಶನದೊಂದಿಗೆ ಪೋಷಿಸಿದಾಗ ಜೀವನಕ್ಕೆ ಸೂಕ್ತ ದಾರಿ ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಕೀಳರಿಮೆ ಬೆಳೆಸಿಕೊಳ್ಳದೆ ತಮ್ಮದೇ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎಂದರು.

ಸಾಧಕ ಹಿರಿಯ ವಿದ್ಯಾರ್ಥಿನಿ ಶ್ರೀಪೂರ್ಣ ಮಾತನಾಡಿ ಕನಸು ಕಾಣುವ ಮನಸ್ಸಿದ್ದರೆ ಕನಸಿಗೆ ಬಣ್ಣ ತುಂಬುವ ಕೆಲಸವನ್ನು ಕಾಲೇಜು ಮಾಡುತ್ತದೆ. ಗುರಿ ಸ್ಪಷ್ಟವಿದ್ದರೆ ಯಶಸ್ಸು ಲಭಿಸುತ್ತದೆ. ಅವಕಾಶಗಳನ್ನು ಹುಡುಕುವ ಛಲ ನಮ್ಮದಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಮೋದ್ ಕುಮಾರ್ ಮಾತನಾಡಿ ವ್ಯುತ್ಪತ್ತಿ ಸಂಘವು ಕಳೆದ ಶೈಕ್ಷಣಿಕ ವರ್ಷದಲ್ಲಿ ವಿವಿಧ ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಈ ಭಾರಿಯೂ ಸಂಘದ ಮೂಲಕ ಹಲವಾರು ಕಾರ್ಯಕ್ರಮಗಳು ಮೂಡಿ ಬರಲಿ ಆ ಮೂಲಕ ಪದವಿಪೂರ್ವ ಹಂತದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವ್ಯೂತ್ಪತ್ತಿಸಂಘದ ನೂತನ ಪದಾಧಿಕಾರಿಗಳುಗಳ ಪದಗ್ರಹಣ ಹಾಗೂ ಪ್ರತಿಜ್ಞಾ ವಿಧಿ ಭೋದನೆಯನ್ನೂ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಂಪಾದಕತ್ವದ ವ್ಯುತ್ಪತ್ತಿ ಮಾಸ ಪತ್ರಿಕೆಯ ಈ ಶೈಕ್ಷಣಿಕ ವರ್ಷದ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಹಾಗೂ ರಾಜ್ಯಮಟ್ಟದಲ್ಲಿ 9 ನೆಯ ರಾಂಕ್ ಗಳಿಸಿದ್ದ ವಿದ್ಯಾರ್ಥಿನಿ ಶ್ರೀಪೂರ್ಣ ಜಿ ಏಲ್ ರನ್ನು ಅಭಿನಂದಿಸಲಾಯಿತು.

ಸಂಘದ ಅಧ್ಯಕ್ಷರಾದ ಮನೋಜ್ ಎಂ ಸ್ವಾಗತಿಸಿ,ತುಳಸಿ ಅಥಿತಿ ಪರಿಚಯ ಮಾಡಿದರು ಲಿಪಿಕಾ ಕಳೆದ ಶೈಕ್ಷಣಿಕ ವರ್ಷದ ಕಾರ್ಯಚಟುವಟಿಕೆಗಳ ವರದಿ ವಾಚಿಸಿದರು ಸ್ಮೃತಿ ವಂದಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಧರೇಶ್ ತಮ್ಮ ಅಧಿಕಾರವನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಉಪನ್ಯಾಸಕರಾದ ದಿವ್ಯಾ ಕುಮಾರಿ ಹಾಗೂ ಶ್ಯಾಮಿಲಾ ಸಹಕರಿಸಿದರು.

Related posts

ಮೇ 21: ಉತ್ಕೃಷ್ಠ ಸೇವೆಯೊಂದಿಗೆ ಮುನ್ನಡೆಯುತ್ತಿರುವ ಗುರುದೇವ ಸಹಕಾರ ಸಂಘದ ಮೂಡಬಿದಿರೆ ಶಾಖೆ ಶುಭಾರಂಭ

Suddi Udaya

ಚಾರ್ಮಾಡಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ನಡ: ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶ್ಯಾಮಸುಂದರ ಗೌಡ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆಯ ನೇತೃತ್ವದಲ್ಲಿ 4 ನೇ ವರ್ಷದ ವರಮಹಾಲಕ್ಷ್ಮೀ ವ್ರತ ಪೂಜೆ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಧ್ಯಾನದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ರವರಿಗೆ ಗುರುವಾಯನಕೆರೆ ಅರಮಲೆಬೆಟ್ಟ ಶ್ರೀ ಕ್ಷೇತ್ರದ ವತಿಯಿಂದ ಅಭಿನಂದನೆ

Suddi Udaya
error: Content is protected !!