32.5 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಕೀಲರ ಸಂಘಕ್ಕೆ ರಾಜ್ಯ ವಕೀಲರ ಪರಿಷತ್ತಿನ ನೂತನ ಸದಸ್ಯರಾಗಿ ಆಯ್ಕೆಯಾದ ನಾರಾಯಣ ಸ್ವಾಮಿ ಭೇಟಿ

ಬೆಳ್ತಂಗಡಿ ವಕೀಲರ ಸಂಘಕ್ಕೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನೂತನ ಸದಸ್ಯರಾಗಿ ಆಯ್ಕೆಯಾದ ನಾರಾಯಣ ಸ್ವಾಮಿ ಭೇಟಿ ನೀಡಿದರು. ಈ ವೇಳೆ ಬೆಳ್ತಂಗಡಿ ವಕೀಲರ ಸಂಘದಿಂದ ನಾರಾಯಣಸ್ವಾಮಿ ಇವರನ್ನು ಅಭಿನಂದಿಸಿ ಗೌರವಿಸಲಾಯಿತು.

ನಂತರ ಮಾತನಾಡಿದ ನಾರಾಯಣ ಸ್ವಾಮಿ ರವರು ರಾಜ್ಯದಲ್ಲಿ ಇರುವ ಯುವ ವಕೀಲರ ಕುಂದುಕೊರತೆಗಳನ್ನು ಸರಿಪಡಿಸಲು ನಾನು ಶ್ರಮಿಸುದಾಗಿ ಹೇಳಿದರು. ನಾನು ಎಲ್ಲಾ ಯುವ ವಕೀಲರ ಪ್ರತಿನಿಧಿಯಾಗಿ ಧ್ವನಿ ಆಗಲಿದ್ದೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.


ವಕೀಲರ ಸಂಘದ ಅಧ್ಯಕ್ಷ ಅಲೋಸಿಯಸ್ ಎಸ್ ಲೋಬೊ ಅಭಿನಂದಿಸಿ ವಕೀಲರ ಕುಂದು ಕೊರತೆಗಳಿಗೆ ಧ್ವನಿಯಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪರ ಸರ್ಕಾರಿ ವಕೀಲರಾದ ಮನೋಹರ್ ಕುಮಾರ್ ಎ ಸ್ವಾಗತಿಸಿ, ಜೊತೆ ಕಾರ್ಯದರ್ಶಿಯಾದ ಹರ್ಷಿತ್ ಕುಮಾರ್ ಹೆಚ್ ಧನ್ಯವಾದ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ, ಹಿರಿಯ ಸಮಿತಿಯ ಅಧ್ಯಕ್ಷ ಶಿವ ಕುಮಾರ್ ಎಸ್ ಎಂ, ನಿಕಟಪೂರ್ವ ಕಾರ್ಯದರ್ಶಿ ನವೀನ್ ಬಿ ಕೆ, ಹಿರಿಯ ಕಿರಿಯ ವಕೀಲರಾದ ಅಜಿತ್ ಎನ್, ಶಾಮ ಭಟ್, ಶಿವಯ್ಯ ಎಸ್ ಎಲ್, ಪದಾಧಿಕಾರಿಗಳು ಹಾಗೂ ಯುವ ವಕೀಲರುಗಳು ಹಾಜರಿದ್ದರು.

Related posts

ಆ.15-16: ಗುರುವಾಯನಕೆರೆ ಎಕ್ಸೆಲ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಕ್ಷಕ ನಮನ 2025, ಶೈಕ್ಷಣಿಕ ಸಾಧಕರಿಗೆ ಅಭಿನಂದನೆ ಹಾಗೂ ವಿದ್ಯಾರ್ಥಿವೇತನ ವಿತರಣೆ

Suddi Udaya

ಪರಸ್ಪರ ಸೇವಾ ಬ್ರಿಗೇಡ್ ಸಂಸ್ಥೆಯಿಂದ ಧನಸಹಾಯ ವಿತರಣೆ

Suddi Udaya

ನ್ಯಾಯತರ್ಪು: ಪಲ್ಲಾದೆ ಕೃಷಿಕ ನಾರಾಯಣ ಗೌಡ ನಿಧನ

Suddi Udaya

ಗುರುವಾಯನಕೆರೆ: ಎಕ್ಸೆಲ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಂದ ಶುಚಿತ್ವ ಅಭಿಯಾನ

Suddi Udaya

ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ: ಮುಂಡಾಜೆ ಬ್ರಿಟಿಷರ ಕಾಲದ ಹಳೆ ಸೇತುವೆ ತೆರವು ಕಾರ್ಯಾಚರಣೆ ಆರಂಭ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಕುಂಭಶ್ರೀ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya
error: Content is protected !!