26.2 C
ಪುತ್ತೂರು, ಬೆಳ್ತಂಗಡಿ
October 16, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಕಲಿ ನೋಟು ಅಡ್ಡೆ ಮೇಲೆ ಪೊಲೀಸರ ದಾಳಿ : ಪ್ರಿಂಟಿಂಗ್‌ ಮೆಷಿನ್‌ ಜಪ್ತಿ, 7 ಮಂದಿ ವಶಕ್ಕೆ

ಬೆಳ್ತಂಗಡಿ: ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿರುವ ಮಹಮ್ಮದ್ ಇದ್ರೀಸ್ ಎಂಬವರ ನೂತನ ಕಟ್ಟಡದಲ್ಲಿ ನಡೆಯುತ್ತಿದ್ದ ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ಕೇಂದ್ರವೊಂದಕ್ಕೆ ಜು.15 ರಂದು ರಾತ್ರಿ ಸುಮಾರು ಮಧ್ಯರಾತ್ರಿ 1 ಗಂಟೆಗೆ ಉಪ್ಪಿನಂಗಡಿ ಪೊಲೀಸರ ನೇತೃತ್ವದ ತಂಡ ದಾಳಿ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಟ್ಟಡದೊಳಗೆ 500 ಮುಖಬೆಲೆಯ ನೋಟು -1 ಮತ್ತು A-4 ಸೈಜ್ ಹಾಳೆಯಲ್ಲಿ ಪ್ರಿಂಟ್ ಮಾಡಲಾದ 500 ರೂ ಮುಖ ಬೆಲೆಯ ನೋಟುಗಳಂತೆ ಕಾಣುವ A-4 ಸೈಜ್ ಹಾಳೆಗಳು-21, 1) BENQ ಕಂಪನಿಯ ಮಾನಿಟರ್ ಒಂದು, 2) LAPCARE ಕಂಪನಿಯ ಸಿಪಿಯು ಮತ್ತು ಮೌಸ್, ಕೀ ಬೋರ್ಡ್, 3) ಪೇಪರ್ ಬ್ಲಡ್ ថ -2, 4) -2, 5) SKY LAMP 380 SECURITY THREAD MIMIC MACHINE – 6) KYOCERA ಕಂಪನಿಯ ಕಲರ್ ಝರಾಕ್ಸ್/ಪ್ರೀಂಟರ್ / ಸ್ಕ್ಯಾನ‌ರ್ -ಒಂದು, 7) ಗಾಂಧೀಜಿರವರ ಮುಖ ಚಹರೆ ಸೀಲ್ -1, RBI ಹೆಸರಿನ SECURITY THREAD ಹೊಂದಿರುವ 5 ಬಾಕ್ಸ್ ಪೇಪರಗಳು, (RBI) ಭದ್ರತಾ ದಾರವನ್ನು ಹೋಲುವ ವಿಶೇಷ ಹಸಿರು ಪ್ಲಾಸ್ಟಿಕ್‌ ರೋಲ್ ಗಳು, 920 PVC ಗ್ಲಾಸ್ ವೈಟ್-1, REFINIX RC 55 HARDNER -1, ໙໖ ಹಾಗೂ ಇತರೇ ವಸ್ತಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದು. ಈ ದಂಧೆಯಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಶಂಕೆ ಇದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಜು.16 ರಂದು BNS-2023 ಕಲಂ 178 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.
ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನಿನ್ನಿಕಲ್ಲು ನಿವಾಸಿ ಅಬ್ದುಲ್ ಖಾದ‌ರ್ ಮಗ ಸಿರಾಜುದ್ದೀನ್(34), ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಉಸ್ಮಾನ್ ಪಿಎ ಮಗ ಇರ್ಷಾದ್(31), ಪುತ್ತೂರು ಕಸಬ ಗ್ರಾಮದ ಬಪ್ಪಳಿಗೆ ನಿವಾಸಿ ಹಸನ್ ಕುಂಜ ಮಗ ಇಬ್ರಾಹಿಂ(60), ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಎಂ.ಎ. ಆರ್ಕೇಡ್ ಬಿಲ್ಡಿಂಗ್ ನಿವಾಸಿ ಮಹಮ್ಮದ್ ಮಗ ಸಲ್ಮಾನ್ ಪಾರೀಸ್(25), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಚೆನ್ನಡ್ ಕ್ವಾಟ್ರಸ್‌ ನಿವಾಸಿ ಮಹಮ್ಮದ್ ಮಗ ಶರೀಫ್(51), ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮರಕವಾಡ ಗ್ರಾಮದ ಪುಂಡಲೀಕ ಮಗ ಸಂದೀಪ್‌ ಪುಂಡಲೀಕ ಶೋಳಂಬಿ(30), ಕಾಸರಗೋಡು ಜಿಲ್ಲೆಯ ಆಮೂರು ಗ್ರಾಮದ ಪೊರ್ಕಡ ನಿವಾಸಿ ಅಬ್ದುಲ ಮಗ ಮಹಮ್ಮದ್ ನಬಾಸ್(37) ಬಂಧಿತ ಆರೋಪಿಗಳಾಗಿದ್ದಾರೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಇನ್ಸ್‌ಪೆಕ್ಟರ್ ನಾಗರಾಜ್‌. ಟಿ.ಡಿ ಮತ್ತು ಸಬ್ ಇನ್ಸ್‌ಪೆಕ್ಟರ್ ಸುತೇಶ್.ಕೆ.ಪಿ ನೇತೃತ್ವದ ತಂಡದ ಎಎಸ್‌ಐ ದಮೋದರ,ಚರಣ್ ರಾಜ್ ನಾಯ್ಕ, ಗಾಜೇಂದ್ರ, ಮೋಹನ, ನಂಜುಂಡ,ಸಂಗಪ್ಪ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

.

Related posts

ಧರ್ಮಸ್ಥಳ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಮುಳುಗುತಜ್ಞ ಕಾಂಜ ಧರ್ಮಸ್ಥಳ ನಿಧನ: ಧರ್ಮಸ್ಥಳ ಗ್ರಾಮ ಪಂಚಾಯತು ಸಂತಾಪ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಚಿಂತನಾ ದಿನಾಚರಣೆ

Suddi Udaya

ಬೆಳ್ತಂಗಡಿ: ಕೆಲ್ಲಗುತ್ತು ಪರಿಸರದಲ್ಲಿ ಚಿರತೆ ಓಡಾಟ : ಎಚ್ಚರಿಕೆ ವಹಿಸುವಂತೆ ಪ.ಪಂ ನಿಂದ ಸೂಚನೆ

Suddi Udaya

ಧರ್ಮಸ್ಥಳ : ಮುಂಡ್ರುಪ್ಪಾಡಿ ನಿವಾಸಿ ಹರೀಶ್ ಎಮ್.ಎಲ್. ನಿಧನ

Suddi Udaya

ಮಲೆಕುಡಿಯ ಕಾಲನಿ ರಸ್ತೆಯ ಅವ್ಯವಸ್ಥೆಗೆ ತೀವ್ರ ಆಕ್ರೋಶ: ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಚುನಾವಣಾ ಬಹಿಷ್ಕಾರದ ಕೂಗು…

Suddi Udaya
error: Content is protected !!