25.1 C
ಪುತ್ತೂರು, ಬೆಳ್ತಂಗಡಿ
October 17, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ: ಪ್ರಸನ್ನ ಆಯುರ್ವೇದ ಆಸ್ಪತ್ರೆಯಲ್ಲಿ ಸುಶ್ರುತ ಜಯಂತಿ ಅಂಗವಾಗಿ ಅಗ್ನಿಕರ್ಮ ನೋವು ನಿವಾರಕ ಕಾರ್ಯಾಗಾರ

ಲಾಯಿಲ: ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಲಾಯಿಲ ವತಿಯಿಂದ ಹಾಗೂ ವಡೋದರದ ವಾಸು ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸುಶ್ರುತ ಜಯಂತಿಯ ಅಂಗವಾಗಿ ಅಗ್ನಿಕರ್ಮ ಆಧಾರಿತ ನೋವು ನಿವಾರಕ ಕಾರ್ಯಾಗಾರವನ್ನು ಜು.17ರಂದು ಆಯೋಜಿಸಲಾಯಿತು.

ಆಯುರ್ವೇದದ ವಿಶಿಷ್ಟ ಅನುಶಸ್ತ್ರ ಚಿಕಿತ್ಸೆಗಳಲ್ಲೊಂದಾದ ಅಗ್ನಿಕರ್ಮದ ಮೂಲಕ ವಿವಿಧ ರೀತಿಯ ಕೀಲುನೋವು, ಸ್ನಾಯುನೋವು, ಕುತ್ತಿಗೆ ಹಾಗೂ ಬೆನ್ನುನೋವು ಸೇರಿದಂತೆ ದೀರ್ಘಕಾಲದ ನೋವಿನ ಸಮಸ್ಯೆಗಳಿಗೆ ಚಿಕಿತ್ಸೆ ಹಾಗೂ ತಜ್ಞರ ಸಲಹೆಯನ್ನು ಕಾರ್ಯಾಗಾರದಲ್ಲಿ ನೀಡಲಾಯಿತು. ನೂರಕ್ಕೂ ಹೆಚ್ಚು ರೋಗಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದು ಇದರ ಸದುಪಯೋಗವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಪ್ರಸನ್ನ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಬಿ.ಕೆ., ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಡಾ. ರವಿಶಂಕರ್, ಶಲ್ಯತಂತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಸುಪ್ರೀತ್ ಲೋಬೊ, ಡಾ. ವೀಣಾ ಹಾಗೂ ಡಾ. ಲಿಯಾ ಉಪಸ್ಥಿತರಿದ್ದು, ರೋಗಿಗಳಿಗೆ ಅಗ್ನಿಕರ್ಮ ಚಿಕಿತ್ಸೆಯ ಮಹತ್ವ, ಅದರ ಉಪಯೋಗಗಳು ಹಾಗೂ ಆಯುರ್ವೇದದಲ್ಲಿ ನೋವು ನಿವಾರಣೆಯಲ್ಲಿ ಅದರ ಪರಿಣಾಮಕಾರಿತ್ವದ ಕುರಿತು ಮಾಹಿತಿ ನೀಡಿದರು.

ವಾಸು ಕಂಪನಿಯ ಪ್ರತಿನಿಧಿ ಗಣೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ ನೀಡಿದರು. ಸುಮಾರು 120ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಚಿಕಿತ್ಸೆಯನ್ನು ಪಡೆದರು.

Related posts

ಬೆಳ್ತಂಗಡಿ: ಅಚ್ಚಿನಡ್ಕದಲ್ಲಿ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಅಕ್ರಮ ಇಸ್ಪೀಟ್ ಅಡ್ಡೆಗೆ ಪೊಲೀಸ್ ದಾಳಿ : ರೂ. 54 ಸಾವಿರ ನಗದು ಸಹಿತ 37 ಮಂದಿ ವಶ

Suddi Udaya

ಕಣಿಯೂರು ಬಿಜೆಪಿ ಬೂತ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಕಾಂಗ್ರೇಸ್ ಸೇರ್ಪಡೆ

Suddi Udaya

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಮಡಂತ್ಯಾರು ಸಿಎ ಬ್ಯಾಂಕಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಫೆ.24: ಗುರುವಾಯನಕೆರೆಯಲ್ಲಿ ನಿಸರ್ಗ ಆರ್ಕೇಡ್ ಲೋಕಾರ್ಪಣೆ

Suddi Udaya
error: Content is protected !!