July 18, 2026
Uncategorized

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಪೋಸ್ಟ್ ಪ್ರಸಾರ ಮಾಡಿದವರ ವಿರುದ್ದ ಪ್ರಕರಣ ದಾಖಲು

ಬೆಳ್ತಂಗಡಿ: ನಿನ್ನೆ ಬಿ.ಸಿ. ರೋಡಿನಲ್ಲಿ ನಡೆದ ಘಟನೆ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ 95/2026 U/S 78 126,103 ಬಿ.ಎನ್.ಎಸ್, 2023 ಮತ್ತು ಕಲಂ: 25,27,ಆರ್ಮ್ಸ್ ಆಕ್ಟ್ ಗೆ ಸಂಬಂದಿಸಿದಂತೆ ದಾಖಲಾದ ಪ್ರಕರಣ ಕುರಿತು ವಿವಿಧ ವಾಟ್ಸ್ ಆಪ್ ಗ್ರೂಪ್ ಗಳು ಹಾಗೂ ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ಆರೋಪಿಯ ಭಾವಚಿತ್ರಕ್ಕೆ ಕೇಸರಿ ಶಾಲು ಹಾಗೂ ಕುಂಕುಮವನ್ನು ಅಳವಡಿಸಿ, ಭಜರಂಗದಳದ ಕಾರ್ಯಕರ್ತ ಎಂದು ಎಡಿಟ್ ಮಾಡಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ಬರಹಗಳನ್ನು ಹಾಕಿರುವುದಕ್ಕೆ ಸಂಬಂದಿಸಿದಂತೆ. ವಿವಿಧ ಸಾಮಾಜಿಕ ಜಾಲತಾಣಗಳ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1)troll_master.__Instagram Account 2) Yuva Belthangady Whatsappgroup 3) PPadmaraj Padmarajpari Whatsapp group. 4) Padmaraj Padmaraj pariWhatsapp group. 5)Yuva Congress Belthangady Whatsappgroup 6) Facts and Justice Whatsappgroup ಗಳ ವಿರುದ್ದ ಅ.ಕ್ರ: 96/2026 ಕಲಂ: 196, 353(2) BNS-2023, ಫೇಸ್ಬುಕ್ನಲ್ಲಿ Shailaja Amarnath ಎಂಬವರ ಖಾತೆಯಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಫೋಸ್ಟ್ ಹಾಕಿರುವ ಬಗ್ಗೆ ಅ.ಕ್ರ: 97/2026 ಕಲಂ: 353(2) BNS-2023
Chethan Belchada ಎಂಬ ಪೇಸ್ ಬುಕ್ ಖಾತೆಯಲ್ಲಿ ಪ್ರಕರಣದ ಆರೋಪಿಯ ಪೋಟೋವನ್ನು ಕಾಂಗ್ರೆಸ್ ಪಾರ್ಟಿಯ ಕಾರ್ಯಕರ್ತೆನೆಂದು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣಾ 98/2026 ಕಲಂ: 353(2) BNS-2023 ರಂತೆ ಪ್ರಕರಣ ದಾಖಲಾಗಿರುತ್ತದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಮೇಲಿನ 3 ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಪ್ರಕಟಿಸಿದೆ.

Related posts

ಗುರುವಾಯನಕೆರೆ : ಗೆಳೆಯರ ಬಳಗದ ಶಾರದಾ ಕಲಾ ಮಂಟಪದಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಜೂ5: ಸಿರಿಕನ್ನಡ ವಾಹಿನಿಯಲ್ಲಿ ‘ಸಖತ್ ಜೋಡಿ’ ರಿಯಾಲಿಟಿ ಶೋ ನಿರೂಪಕನಾಗಿ ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್ ಸೆಲೂನ್ ಉದ್ಯಮಿ ತರಬೇತಿ ಸಮಾರೋಪ

Suddi Udaya

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಭೆ. ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್ ನರಿಕೊಂಬು ಆಯ್ಕೆ

Suddi Udaya

ಕರಾಟೆ ಸ್ಪರ್ಧೆ: ಬೆಳ್ತಂಗಡಿ ಶ್ರೀ ಧ.ಮಂ. ಆಂ. ಮಾ. ಶಾಲೆಯ ವಿದ್ಯಾರ್ಥಿ ಯಶಸ್ವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ನಾಳೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!