September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತುಳುನಾಡಿನ ಸಂಸ್ಕೃತಿಗೆ ಮೆರಗು: ಬೆಳ್ತಂಗಡಿ ಮಹಿಳಾ ವೃಂದದಿಂದ ಸಂಭ್ರಮದ ಆಟಿಡೊಂಜಿ ದಿನ ಆಚರಣೆ

ಬೆಳ್ತಂಗಡಿ: ಮಹಿಳಾ ವೃಂದ ಬೆಳ್ತಂಗಡಿ ವತಿಯಿಂದ ಜು 19ರಂದು ಸಾಂಪ್ರದಾಯಿಕ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷೆ ರಜನಿ ಎ., ಕಾರ್ಯದರ್ಶಿ ಲಾವಣ್ಯ ಹೊಳ್ಳ ಹಾಗೂ ಖಜಾಂಜಿ ಸುಮತಿ ಪ್ರಮೋದ್ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯೆಯರು ಆಟಿ ತಿಂಗಳ ಮಹತ್ವ, ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳ ಕುರಿತು ಮಾಹಿತಿ ಹಂಚಿಕೊಂಡರು. ಆಟಿ ತಿಂಗಳಲ್ಲಿ ತಯಾರಿಸುವ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದು ಸಂಭ್ರಮಿಸಿದರು. ಅಲ್ಲದೆ, ತುಳುನಾಡಿನ ಶ್ರೀಮಂತ ಪರಂಪರೆಯನ್ನು ಸ್ಮರಿಸುತ್ತಾ, ಮುಂದಿನ ಪೀಳಿಗೆಗೆ ಈ ಸಂಸ್ಕೃತಿಯನ್ನು ಪರಿಚಯಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಹಿಳಾ ವೃಂದದ ಸದಸ್ಯೆಯರು ಉತ್ಸಾಹದಿಂದ ಪಾಲ್ಗೊಂಡು, ಆಟಿಡೊಂಜಿ ದಿನವನ್ನು ಸಡಗರ-ಸಂಭ್ರಮದಿಂದ ಆಚರಿಸಿದರು.

Related posts

ನಾವರ ಪ್ರಗತಿ ಬಂಧು ಒಕ್ಕೂಟದ ತ್ರೈಮಾಸಿಕ ಸಭೆ

Suddi Udaya

ತನ್ನ ವಿರುದ್ಧ ಯಾರೂ ಮಾತನಾಡುವವರು ಇಲ್ಲ ಎಂಬ ದುರಾಂಕಾರ ಮಹೇಶ್ ಶೆಟ್ಟಿಯವರಲ್ಲಿದೆ ಅವರದು ಶೇ 20 ಮಾತ್ರ ಹಿಂದುತ್ವ ಶೇ 80 ರೌಡಿಸಂ ಆಗಿದೆ: ಶಶಿರಾಜ್ ಶೆಟ್ಟಿ ಗುರುವಾಯನಕೆರೆ

Suddi Udaya

ಅಳದಂಗಡಿಯಲ್ಲಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆಯಿಂದ ಅಂಗಾಂಗ ದಾನ ನೋಂದಣಿ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಾಗೂ ಕಾರ್ಗಿಲ್ ವೀರ ಯೋಧರಿಗೆ ಗೌರವ ಸಮರ್ಪಣೆ

Suddi Udaya

ಮುಳಿಯ ಜ್ಯುವೆಲ್ಲರ್ಸ್ ವತಿಯಿಂದ ಪಡ್ಲಾಡಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

Suddi Udaya

ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ನಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಕಳೆಂಜ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್ ಅನುದಾನದಿಂದ ಅಳವಡಿಸಿದ ಸೋಲಾರ್ ಲೈಟ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!