32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ಮಡಂತ್ಯಾರಿನ ಜೇಸಿ ಸಪ್ತಾಹದ ಮೂರನೇ ದಿನ ಮಹಿಳಾ‌ ಸಂಭ್ರಮ

ಮಡಂತ್ಯಾರು: ಜೆಸಿಐ ಮಡಂತ್ಯಾರಿನ ಜೇಸಿ ಸಪ್ತಾಹದ ಮೂರನೇ ದಿನವನ್ನು ಮಹಿಳಾ ದಿನವನ್ನಾಗಿ ಆಚರಿಸಲಾಯಿತು. ಈ ದಿನ ಮಹಿಳೆಯರಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜೆಸಿಐ ಮಡಂತ್ಯಾರಿನ ಕಾರ್ಯದರ್ಶಿ ಜೇಸಿ ಯತೀಶ್ ರೈ ವೇದಿಕೆಗೆ ಆಹ್ವಾನ ಮಾಡಿದರು. ಜೇಸಿ ಶ್ವೇತಾ ಹರೀಶ್ ಜೇಸಿ ವಾಣಿ ವಾಚಿಸಿದರು. ಮಹಿಳಾ ಜೇಸಿ ಸಂಯೋಜಕಿ ಜೇಸಿ ಭವ್ಯ ಟಿ ಪೈ ಮಹಿಳಾ ದಿನದ ಅಧ್ಯಕ್ಷತೆ ವಹಿಸಿದ್ದರು.

ಜೆಸಿಐ ಭಾರತ ವಲಯ 15 ರ ವಲಯ ಸಂಯೋಜಕಿ ಜೆಸಿಐ ಸೆನೆಟರ್ ಸೌಮ್ಯ ಚಂದ್ರಹಾಸ್ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜೆಸಿಐ ಮಡಂತ್ಯಾರಿನ ನಿಕಟಪೂರ್ವ ಅಧ್ಯಕ್ಷರು, ವಲಯ ಸಂಯೋಜಕರಾದ ಜೇಸಿ ಅಮಿತಾ ಅಶೋಕ್, ಮಡಂತ್ಯಾರು ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಜೇಸಿ ರೂಪಾ ನವೀನ್, ಬಂಟರ ಸಂಘ ಬೆಳ್ತಂಗಡಿಯ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ವಸುಧಾ ಪ್ರಶಾಂತ್ ಶೆಟ್ಟಿ, ಮಡಂತ್ಯಾರಿನ ಪ್ರಸಿದ್ಧ ದಂತವೈದ್ಯರಾದ ಡಾ. ಶಮೀಮ, ಮಡಂತ್ಯಾರಿನ ವಿಜಯ ಸ್ವೀಟ್ಸ್ ಮಾಲಕರಾದ ಶ್ರೀಮತಿ ವಿಜಯ ಸಾಲ್ಯಾನ್, ರೊ। ಸೆಲೆಸ್ತಿನ್ ಡಿ’ಸೋಜಾ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಶ್ರೀಮತಿ ಲೂಸಿ ಕಾರ್ಲೊ, ಅಧ್ಯಕ್ಷರು, ಮಹಿಳಾ ಮಂಡಲ, ಮಡಂತ್ಯಾರು, ಶ್ರೀಮತಿ ಗ್ಲಾನ್ಸಿ ಜೋಯಲ್ ಮೆಂಡೋನ್ಸಾ, ಉದ್ಯಮಿಗಳು, ಮಡಂತ್ಯಾರು ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿ ಶ್ರೀಮತಿ ಶಮೀರಾ ಸಿದ್ದಿಕ್ ಇವರಿಗೆ ಉದ್ಯಮರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಹಿಳಾ‌ ಸಂಭ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜೇಸಿ ಹಾಗೂ ಜೇಸಿಯೇತರ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜೆಸಿಐ ಮಡಂತ್ಯಾರಿನ ಅಧ್ಯಕ್ಷರಾದ ಜೇಸಿ ಸಾಯಿಸುಮಾ ಎಂ ನಾವಡ ಸ್ವಾಗತಿಸಿದರು. ಜೇಸಿ ಸಪ್ತಾಹದ ಸಹಸಂಯೋಜಕರಾದ ಜೇಸಿ ಅಶ್ವಿನಿ ಧನ್ಯವಾದವಿತ್ತರು.

Related posts

ಉಜಿರೆ ಎಸ್.ಡಿ.ಎಂ ಆಂ.ಮಾ. ಶಾಲೆಯಲ್ಲಿ ಕರಾಟೆ ಬೆಲ್ಟ್ ವಿತರಣೆ

Suddi Udaya

ಬೆಳ್ತಂಗಡಿ ನಿವಾಸಿ ಪದ್ಮಲತಾ ನಿಧನ

Suddi Udaya

ಬೆಳ್ತಂಗಡಿ: ಶ್ರೀ ಧರ್ಮಸ್ಥಳ “ಶೌರ್ಯ” ವಿಪತ್ತು ಘಟಕದ ಕೋರ್ ಕಮಿಟಿಯ ಸಭೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಬಿಲ್ಲು ಇಲ್ಲದೆ ಅಡಿಕೆ ಸಾಗಾಟ ವಾಹನ ವಶಕ್ಕೆ: ವಾಣಿಜ್ಯ ತೆರಿಗೆ ಇಲಾಖೆಯಿಂದ ದಂಡ

Suddi Udaya

ಜೈನ ವಿದ್ಯಾರ್ಥಿ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

Suddi Udaya
error: Content is protected !!