September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹಿರಿಯ ದಲಿತ ಮುಖಂಡ ಎಂ.ದೇವದಾಸ್ ನಿಧನಕ್ಕೆ ಬೆಳ್ತಂಗಡಿ ದಲಿತ ಸಂಘರ್ಷ ಸಮಿತಿಯಿಂದ ಸಂತಾಪ

ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕ ಎಂ ದೇವದಾಸ್ ಅವರ ನಿಧನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಚಳವಳಿಗೆ ತುಂಬಲಾಗದ ನಷ್ಟ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಳ್ತಂಗಡಿ ತಾಲೂಕು ಸಮಿತಿ ಸಂತಾಪ ಸೂಚಿಸಿದೆ.

ರಾಜ್ಯದ ದಲಿತ ಚಳವಳಿಯ ಹಿರಿಯ ಕೊಂಡಿಯಾಗಿರುವ ದೇವದಾಸ್ ರವರ ನಿಧನ ಇಡೀ ಚಳವಳಿಗೆ ದುಃಖವನ್ನು ತಂದಿದೆ. ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರು ಪ್ರಗತಿಪರ ಚಳವಳಿಗೂ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕುಟುಂಬದ ದುಃಖದಲ್ಲಿ ದಲಿತ ಸಂಘರ್ಷ ಸಮಿತಿಯ ಎಲ್ಲಾ ಕಾರ್ಯಕರ್ತರು , ಪದಾಧಿಕಾರಿಗಳು ಭಾಗಿಯಾಗಿದ್ದೇವೆ ಎಂದು ದಸಂಸ(ಅಂಬೇಡ್ಕರ್ ವಾದ) ದ ಮೈಸೂರು ವಿಭಾಗ ಸಂ ಸಂಚಾಲಕ ಬಿ.ಕೆ ವಸಂತ , ತಾಲೂಕು ಸಂಚಾಲಕ ರಮೇಶ್ ಆರ್ , ಪದಾಧಿಕಾರಿಗಳಾದ ಶೇಖರ್ ಕುಕ್ಕೇಡಿ , ವೆಂಕಣ್ಣ ಕೊಯ್ಯೂರು , ಶ್ರೀಧರ್ ಕಳೆಂಜ , ನೇಮಿರಾಜ್ , ನಾರಾಯಣ ಪುದುವೆಟ್ಟು ಕೆ.ನೇಮಿರಾಜ್ ಕಿಲ್ಲೂರು , ಶೇಖರ್ ಕಣಿಯೂರು , ದಲಿತ ನಾಯಕರುಗಳಾದ ಸಂಜೀವ ಆರ್ , ಪ್ರಭಾಕರ್ ಶಾಂತಿಗೋಡು , ಚೆನ್ನಕೇಶವ , ಅಚುಶ್ರೀ ಬಾಂಗೇರು , ಶೇಖರ್ ಲಾಯಿಲ ಮಲೆಕುಡಿಯ ಸಂಘದ ಮುಖಂಡ ಜಯಾನಂದ ಪಿಲಿಕಲ ಸಂತಾಪ ಸೂಚಿಸಿದ್ದಾರೆ ‌.

Related posts

ಗುರುಪೂರ್ಣಿಮೆ ಅಂಗವಾಗಿ ಪಾರೆಂಕಿ ವಿದ್ಯಾಸರಸ್ವತಿ ಭಜನಾ ಮಂಡಳಿಯ ತರಬೇತುದಾರ ಸತೀಶ್ ಪೂಂಜಾರವರಿಗೆ ಗುರು ವಂದನೆ

Suddi Udaya

ಕಾರುಗಳ ನಡುವೆ ಅಪಘಾತ:

Suddi Udaya

ಪಾಂಗಾಳ ಕು. ಸೌಜನ್ಯ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ: ಆ.27 ರಂದು ಹೋರಾಟದಲ್ಲಿ ಭಾಗಿಯಾಗುವಂತೆ ಸೌಜನ್ಯ ತಾಯಿ ಕುಸುಮಾವತಿಯವರಿಗೆ ಆಹ್ವಾನ

Suddi Udaya

ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕರ ಸಬಲೀಕರಣ ತರಬೇತಿ ದ.ಕ ಜಿಲ್ಲೆಯಿಂದ ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷೆ ಅನಿತಾ ಕೆ. ಆಯ್ಕೆ

Suddi Udaya

‍ಚಂದ್ರಯಾನ -3 ಯಶಸ್ಸಿನಲ್ಲಿ ಹಿರಿಯ ವಿಜ್ಞಾನಿ ಧರ್ಮಸ್ಥಳದ ಪಿ. ವಾಸುದೇವ ರಾವ್ ಸೇವೆ

Suddi Udaya

ಕುತ್ಲೂರು ಉ.ಸ.ಹಿ. ಪ್ರಾಥಮಿಕ ಶಾಲೆಯಲ್ಲಿ “ಚಿಣ್ಣರ ಅಂಗಳ” ಉದ್ಘಾಟನೆ

Suddi Udaya
error: Content is protected !!