September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹಿರಿಯರ ಚಿಂತನ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಆ.9ರಂದು ಪಾಣೆಮಂಗಳೂರು ಹಳೆ ಸೇತುವೆ ನದಿ ತೀರದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಆಯೋಜಿಸಿರುವ ಹಿರಿಯರ ಚಿಂತನ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೇಟ್ನಾಯರು ಬಿಡುಗಡೆಗೊಳಿಸಿದರು.

ಧರ್ಮಸ್ಥಳ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಬಿ.ಭುಜಬಲಿ ಸಂಗ್ರಹಿಸಿ ಪ್ರಕಟಿಸಿದ ಹಿರಿಯ ನಾಗರಿಕರ ಅಭಿಯಾನ ಸಂದೇಶ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಚಿಂತನ ಸಮಾವೇಶ ಮತ್ತು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳ 6ನೇ ಚಾತುರ್ಮಾಸ್ಯದ ಬಗ್ಗೆ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾಹಿತಿ ನೀಡಿದರು.ಈ ಬಗ್ಗೆ ವಿಸ್ತೃತ ಸಭೆ ನಡೆಸಿ ಸಹಕಾರ ನೀಡುವುದಾಗಿ ಶರತ್ ಕೃಷ್ಣ ಅವರು ತಿಳಿಸಿದರು.

ಉಭಯ ಕಾರ್ಯಕ್ರಮಗಳಿಗೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಘಟಕದ ಪದಾಧಿಕಾರಿಗಳು ಪ್ರಯತ್ನಿಸಬೇಕೆಂದು ಭುಜಬಲಿ ಧರ್ಮಸ್ಥಳ ತಿಳಿಸಿದರು.

ಬೆಳ್ತಂಗಡಿ ಘಟಕದ ಅಧ್ಯಕ್ಷ ಸೀತಾರಾಮ ಶೆಟ್ಟಿ , ಉಜಿರೆ, ಪ್ರತಿಷ್ಠಾನದ ಉಪಾಧ್ಯಕ್ಷ ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಖಜಾಂಜಿ ಅನಾರು ಕೃಷ್ಣಶರ್ಮ, ವಿಶ್ವಾಸ ರಾವ್, ಕುಸುಮಾವತಿ ಬೆಳ್ತಂಗಡಿ, ಶಾಂತ ಶೆಟ್ಟಿ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಗಣೇಶ್ ಭಟ್ ಕುತ್ರೋಟ್ಟು ವಂದಿಸಿದರು.

Related posts

ತೆಕ್ಕಾರು: ಸರಳಿಕಟ್ಟೆ ಜಂಕ್ಷನ್ ನಲ್ಲಿ ಮೋರಿ ಕುಸಿತ

Suddi Udaya

ಉಜಿರೆ ಗ್ರಾ.ಪಂ. ನಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಪ್ರಯುಕ್ತ “ ಸ್ವಚ್ಛ ಭಾರತ ದಿನ ” ವಿಶೇಷ ಗ್ರಾಮ ಸಭೆ

Suddi Udaya

ಮಲವಂತಿಗೆ: ದಿಡುಪೆಯಲ್ಲಿ ಕೃಷಿ ತೋಟಗಳಿಗೆ ಕಾಡಾನೆಗಳ ದಾಳಿ : ಅಪಾರ ಕೃಷಿ ಹಾನಿ

Suddi Udaya

ಶಿರ್ಲಾಲು: “ಭವತಿ ಭಿಕ್ಷಾಂದೇಹಿ” ನಿಧಿ ಸಂಗ್ರಹ ಅಭಿಯಾನದ ಧನಸಹಾಯ ಹಸ್ತಾಂತರ

Suddi Udaya

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಮುಖ್ಯ ಕಾರ್ಯಾಚರಣಾ ಅಧಿಕಾರಿ ರುಡ್ ಸೆಟ್ ಸಂಸ್ಥೆಗೆ ಭೇಟಿ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲಾ ವಾರ್ಷಿಕೋತ್ಸವ “ಮನೋಲ್ಲಾಸ ಸಾಂಸ್ಕೃತಿಕ ಸಂಭ್ರಮ -2025”

Suddi Udaya
error: Content is protected !!