September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಿಶಿಲ: ಬೈಕ್ ಮೇಲೆ ಬಿದ್ದ ಮರ: ಬೈಕ್ ಸವಾರ ಪ್ರಾಣಾಪಾಯಾದಿಂದ ಪಾರು

ಶಿಶಿಲ : ಅರಸಿನಮಕ್ಕಿ-ಶಿಶಿಲ ರಸ್ತೆಯ ಬರ್ಗುಳ ಸಮೀಪ ಇಂದು(ಜು.24) ಮಧ್ಯಾಹ್ನ ವೇಳೆಗೆ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಮರ ಬಿದ್ದ ಘಟನೆ ನಡೆದಿದೆ.

ಶಿಶಿಲ ದೇನೋಡಿ ನಿವಾಸಿ ರತೀಶ್ ಪೂಜಾರಿ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯ ಮರ ಬೈಕ್ ಮೇಲೆ ಬಿದ್ದ ಪರಿಣಾಮ ಬೈಕ್‌ಗೆ ಹಾನಿಯಾಗಿದ್ದು, ರತೀಶ್ ಪೂಜಾರಿ ಅವರು ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಅರಸಿನಮಕ್ಕಿ -ಶಿಶಿಲ ಘಟಕದ ಸದಸ್ಯರಾದ ಅವಿನಾಶ್ ಭಿಡೆ ,ರಮೇಶ್ ಬಿ, ರಾಧಾಕೃಷ್ಣ , ಕುಶಾಲಪ್ಪ ಗೌಡ, ಸ್ಥಳೀಯರಾದ ಮೋಹನ್ ಗೌಡ, ಮಾಧವ ನಾಯ್ಕ, ಲಕ್ಷ್ಮಣ ಆಚಾರ್, ಕೃಷ್ಣ ನಾಯ್ಕ ಮುಂತಾದವರು ಮರವನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲಾಯಿತು.


ಸ್ಥಳಕ್ಕೆ ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಮೆಸ್ಕಾಂ ಸಿಬ್ಬಂದಿ ಸಂತೋಷ್ ಭೇಟಿ ನೀಡಿ ಕಂಬಗಳ ಹಾನಿ ಬಗ್ಗೆ ಪರಿಶೀಲನೆ ನಡೆಸಿದರು.

Related posts

ಪುಂಜಾಲಕಟ್ಟೆ ಎಸ್.ಡಿ.ಪಿ.ಐ ಪಕ್ಷದ ಸಂಸ್ಥಾಪಣಾ ದಿನಾಚರಣೆ

Suddi Udaya

ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ಇದರ 8 ನೇ ವಾರ್ಷಿಕ ಹಾಗೂ 3 ನೇ ಸನದುದಾನ ಮಹಾ ಸಮ್ಮೇಳನ

Suddi Udaya

ಕಜಕೆ ಶಾಲೆಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಉರುವಾಲು ಭಾರತೀ ವಿದ್ಯಾಸಂಸ್ಥೆಯಲ್ಲಿ ವಿಜೃಂಭಣೆಯ ಗಣರಾಜ್ಯೋತ್ಸವ: ಶಾಲಾ ವಿದ್ಯಾರ್ಥಿಗಳಿಂದ ಹೆತ್ತವರಿಗಾಗಿ ಮಾತಾ ಪಿತೃ ಪೂಜೆ

Suddi Udaya

ಕರಾಟೆ ಪಂದ್ಯಾಟ: ವಾಣಿ ಆಂ.ಮಾ. ಪ್ರೌಢ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಇಮ್ತಿಯಾಜ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಖರೀದಿಯ ಮೇಲೆ ಶೇ.20 ಸ್ಪೆಷಲ್ ಡಿಸ್ಕೌಂಟ್ ಆಫರ್

Suddi Udaya
error: Content is protected !!