26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜು

ನಾರಾವಿ: ಸಂತ ಅಂತೋನಿ ಶಿಕ್ಷಣ ‘ಸಂಸ್ಥೆಗಳ ದಿನಾಚರಣೆ’

ನಾರಾವಿ: ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳು ನಾರಾವಿ ಇಲ್ಲಿನ ಶಿಕ್ಷಣ ಸಂಸ್ಥೆಗಳ ದಿನಾಚರಣೆಯು ಇತ್ತೀಚೆಗೆ ನಡೆಯಿತು.

ಬೆಳಿಗ್ಗೆ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆಯನ್ನು ನೀಡಲಾಯಿತು. ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಜೆ.ಆರ್ ಲೋಬೋ ನಾರಾವಿ ಎಂಬ ಗ್ರಾಮೀಣ ಪರಿಸರದಲ್ಲಿ ಶಿಕ್ಷಣದ ಕೊರತೆಯನ್ನು ನೀಗಿಸಿದ ಸಂತ ಅಂತೋನಿ ಶಿಕ್ಷಣ ಸಂಸ್ಥೆಯನ್ನು ಕೊಂಡಾಡಿದರು.

ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಶ್ರೀಮತಿ ಫಿಲೋಮಿನಾ ಲೋಬೊ ವೇದಿಕೆಯಲ್ಲಿದ್ದರು. ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ.ಸ್ವಾಮಿ ಜೆರೋಮ್ ಡಿ’ಸೋಜಾ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಮಿರಾಂದ, ಕಾರ್ಯದರ್ಶಿ ಶ್ರೀಮತಿ ಎವ್ಜಿನ್ ರೋಡ್ರಿಗಸ್, ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು ಸಂತ ಅಂತೋನಿ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕರು ಉಪಸ್ಥಿತರಿದ್ದರು.

ಪ್ರಾಂಶುಪಾಲರಾದ ವಂದನೀಯ ಡಾ. ಆಲ್ವಿನ್ ಸೆರಾವೋ ಸ್ವಾಗತಿಸಿದರು.ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜ್ಯೋತಿ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿ, ಪದವಿ ಕಾಲೇಜಿನ ಉಪ ಪ್ರಾoಶುಪಾಲ ಸಂತೋಷ್ ಸಲ್ದಾನ ಧನ್ಯವಾದವಿತ್ತರು.

Related posts

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಸಂತೋಷ್ ಪಿ ಕೋಟ್ಯಾನ್ ಬಳಂಜ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನದ ಮಂಜೂರಾತಿ ಪತ್ರ ವಿತರಣೆ

Suddi Udaya

ವಿ.ಹಿಂ.ಪ. ಮಾತೃಶಕ್ತಿ, ದುರ್ಗಾವಾಹಿನಿ, ಮುಂಡಾಜೆ ಗ್ರಾಮ ಸಮಿತಿ ವತಿಯಿಂದ ಕಳೆಂಜ ಗೋಶಾಲೆಗೆ ಗೋವಿಗಾಗಿ ಮೇವು

Suddi Udaya

ಪ್ರೌಢ ಶಾಲಾ ವಿಭಾಗದ ಅಥ್ಲೆಟಿಕ್ ಕ್ರೀಡಾಕೂಟ: ಸುಲ್ಕೇರಿ ಶ್ರೀರಾಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಲಾಯಿಲ ಕರ್ನೋಡಿ ಸ.ಹಿ.ಪ್ರಾ. ಶಾಲೆಯ ನವೀಕರಿಸಿದ ಶಾಲಾ ಕಟ್ಟಡ ಹಸ್ತಾಂತರ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಮಟ್ಟದ ಸಾಫ್ಟ್‌ಸ್ಕಿಲ್ ಟ್ರೈನರ್ ಡಾ. ಟಿ. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಟಿಒಟಿ ತರಬೇತಿ

Suddi Udaya
error: Content is protected !!