28.2 C
ಪುತ್ತೂರು, ಬೆಳ್ತಂಗಡಿ
September 9, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಶ್ರಮದಾನದ ಮೂಲಕ ಐತನಡ್ಕ ಸೇತುವೆ ಪರಿಸರ ಸ್ವಚ್ಛಗೊಳಿಸಿದ ಗ್ರಾಮಸ್ಥರು-ಪೊದೆಗಳಿಂದ ಸಂಚಾರಕ್ಕೆ ಉಂಟಾಗಿದ್ದ ತೊಂದರೆ ನಿವಾರಣೆ-ಸಾರ್ವಜನಿಕರಿಂದ ಮೆಚ್ಚುಗೆ

ಬಳಂಜ: ನಾಲ್ಕೂರು ಗ್ರಾಮದ ಐತನಡ್ಕ ಪಲ್ಗುಣಿ ನದಿಯ ಸೇತುವೆಯ ಎರಡೂ ಬದಿಗಳಲ್ಲಿ ಪೊದೆಗಳು ಬೆಳೆದು ನಿಂತ ಪರಿಣಾಮ ಸಾರ್ವಜನಿಕರು ನಡೆದುಕೊಂಡು ಹೋಗಲು ಹಾಗೂ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದರು.

ಈ ಸಮಸ್ಯೆಯನ್ನು ಮನಗಂಡ ನಾಲ್ಕೂರು ಹಾಗೂ ಗರ್ಡಾಡಿ ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ಶ್ರಮದಾನದ ಮೂಲಕ ಸೇತುವೆಯ ಎರಡೂ ಬದಿಯ ಪೊದೆಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಈ ಕಾರ್ಯದಲ್ಲಿ ಐತನಡ್ಕ ವಿಠ್ಠಲ, ದೈಹಿಕ ಶಿಕ್ಷಕ ರಾಜು, ಸಂದೇಶ್ ಶೆಟ್ಟಿ, ಸತೀಶ್ ಶೆಟ್ಟಿ ಪೊನ್ನೆದಕಲ, ಸಂತೋಷ್ ಶೆಟ್ಟಿ ಗುತ್ತು, ಮುಕೇಶ್, ಹರೀಶ್ ಮುದೆಲ್ತ್ಯಾರ್, ಡೆಂಜೋಳಿ ರಮೇಶ್ ಹಾಗೂ ಮರೆಕ್ಕಿನ ಅಂಝ ಸೇರಿದಂತೆ ಹಲವರು ಪಾಲ್ಗೊಂಡು ಸೇವಾ ಮನೋಭಾವ ಮೆರೆದರು.

ಗ್ರಾಮಸ್ಥರ ಈ ಸ್ವಯಂಪ್ರೇರಿತ ಶ್ರಮದಾನದಿಂದ ಸೇತುವೆ ಪರಿಸರ ಸ್ವಚ್ಛಗೊಂಡಿದ್ದು, ಇದೀಗ ಸಾರ್ವಜನಿಕರು ಹಾಗೂ ವಾಹನ ಸವಾರರು ಸುಗಮವಾಗಿ ಸಂಚರಿಸುವಂತಾಗಿದೆ. ಗ್ರಾಮಸ್ಥರ ಈ ಸಾಮಾಜಿಕ ಕಾಳಜಿ ಮತ್ತು ಸೇವಾ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Related posts

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ – ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ನೆರಿಯ: ಶ್ರೀ ಕ್ಷೇತ್ರ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಶಾಸಕ ಹರೀಶ್‌ ಪೂಂಜ ಭೇಟಿ

Suddi Udaya

ಜೂ.9: ಪಡಂಗಡಿಯಲ್ಲಿ ಉಚಿತ ವೈದ್ಯಕೀಯ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹಾಗೂ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

Suddi Udaya

ಸೌತಡ್ಕ: ಕಡೀರದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ ಕೃಷಿ ಹಾನಿ

Suddi Udaya

ಕೊಕ್ಕಡ: ಪೃಥ್ವಿ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ

Suddi Udaya

ಪಡಂಗಡಿ:ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆ, ಮನೆಗೆ ಗುಡ್ಡ ಕುಸಿತ, ಹಾನಿ

Suddi Udaya
error: Content is protected !!