28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಗ್ರಾ.ಪಂ. ನಲ್ಲಿ ಮಹಿಳೆಯರಿಗೆ ಆರೋಗ್ಯ ಅರಿವು ಮತ್ತು ಆಟಿದ ಕಮ್ಮೆನ ಕಾರ್ಯಕ್ರಮ

ಉಜಿರೆ : ಗ್ರಾಮ ಪಂಚಾಯತ್ ಉಜಿರೆ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ತಾಲೂಕು ಪಂಚಾಯತ್ ಬೆಳ್ತಂಗಡಿ, ಪ್ರೇರಣಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ ಆರೋಗ್ಯ ಅರಿವು ಮತ್ತು ಆಟಿದ ಕಮ್ಮೆನ ಉಜಿರೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕನಸಿನ ಮನೆ ಲಕ್ಷ್ಮಿ ಗ್ರೂಪ್ಸ್ ಮತ್ತು ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ಉದ್ಘಾಟಿಸಿ, ಹಿಂದಿನ ಸಂಪ್ರದಾಯಗಳ ಹಿಂದೆ ಮಹತ್ತರವಾದ ಆಶಯವಿದೆ. ಇಂದಿನ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಮುಂದಿನ ದಿನಗಳಲ್ಲಿ ನಾನು ಈ ತಾಲೂಕಿನಲ್ಲಿ ವಿಶೇಷ ಕಾರ್ಯಕ್ರಮವನ್ನು NRLM ಇಲಾಖೆ ಜೊತೆಗೆ ಹಮ್ಮಿಕೊಳ್ಳಲು ಇಷ್ಟಪಡುತ್ತೇನೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಆಟಿ ಕಾರ್ಯಕ್ರಮದ ಬಗ್ಗೆ ಸಂಪನ್ಮೂಲ ವ್ಯಕ್ತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪ ಪ್ರಜ್ವಲನೆಗೊಳಿಸಿ ಆಟಿ ಆಚರಣೆ ಅಂದು ಇಂದು ಬಗ್ಗೆ ಸಮಗ್ರವಾಗಿ ವಿಶ್ಲೇಷಣೆ ಮಾಡಿದರು .ಸ್ವಚ್ಛತೆಯ ಬಗ್ಗೆ ತಿಳಿಸುತ್ತಾ ಪ್ರತಿ ಮನೆಯವರ ತ್ಯಾಜ್ಯ ವಿಂಗಡಣೆ ಹೊಣೆಗಾರಿಕೆಯ ಬಗ್ಗೆ ವಿವರಿಸಿದರು.

ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಭವಾನಿ ಶಂಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಜಿಲ್ಲಾ ಪಂಚಾಯತ್ ಜಲ ಜೀವನ್ ಮಿಷನ್ ನ IEC ಕೊಆರ್ಡಿನೇಟರ್ ಶಿವರಾಮ್ ಇವರು ಜಲ ಸಂಪನ್ಮೂಲದ ಸಮರ್ಪಕ ಬಳಕೆ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ಆರೋಗ್ಯ ಅರಿವಿನ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವಿನೀತ ಇವರು ಮಹಿಳೆಯರನ್ನು ಸದ್ದಿಲ್ಲದೇ ಕಾಡುವ ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ, ವಿವಿಧ ಜ್ವರಗಳ ಬಗ್ಗೆ ಮತ್ತು ಜಾಂಡಿಸ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಾಟಿ ವೈದ್ಯರುಗಳು, ಸಂಜೀವಿನಿ ಸದಸ್ಯರಾದ ಸ್ವಚ್ಛತಾ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಈ ಸಂದರ್ಭ ತಾಲ್ಲೂಕು C. D. P. O ಪ್ರಿಯಾ ಆಗ್ನೇಸ್ ಮತ್ತು ಗ್ರಾಮ ಪಂಚಾಯತ್ ಮಮಾಜಿ ಅಧ್ಯಕ್ಷೆ ಪುಷ್ಪ ಆರ್ ಶೆಟ್ಟಿ, ಒಕ್ಕೂಟ ದ ಮಾಜಿ ಅಧ್ಯಕ್ಷೆ ಶೀಲಾವತಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಿನುತ ರಜತ್ ಗೌಡ ವಹಿಸಿ, ಪ್ರಸ್ತಾವನೆಯನ್ನು ತಾಲೂಕು NRLM ವಿಭಾಗದ ವ್ಯವಸ್ಥಾಪಕಿ ಪ್ರತಿಮಾ ಪ್ರಸ್ತಾವನೆಗೈದರು. ಮೇಲ್ವಿಚಾರಕರಾದ ಜಯಾನಂದ ಸ್ವಾಗತಿಸಿ, ಎಮ್.ಬಿ.ಕೆ ಸಂಧ್ಯಾ ಲಕ್ಷ್ಮಣ್ ಮತ್ತು ಭವ್ಯಾ ಕಾರ್ಯಕ್ರಮ ನಿರೂಪಿಸಿದರು.ಒಕ್ಕೂಟದ ಪದಾಧಿಕಾರಿಗಳು ಮತ್ತು ಪಶು ಸಖಿ ಏಕಲತ, LCRP ಶಾಶ್ವಿತ ಚಂದ್ರಿಕಾ ಅಶ್ವಿನಿ ಸಹಕರಿಸಿದರು. ಕೃಷಿ ಸಖಿ ಭಾಗೀರಥಿ ಧನ್ಯವಾದಗೈದರು.

Related posts

ಎಸ್‌ಡಿಯಂ ಇಂಜಿನಿಯರಿಂಗ್ ಕಾಲೇಜು: ಸ್ಟಾರ್ಟಅಪ್‌ಗಾಗಿ ಒಡಂಬಡಿಕೆ ಸಹಿ

Suddi Udaya

ಮದ್ದಡ್ಕ ರಾಮ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆ

Suddi Udaya

ಕಕ್ಯಪದವು ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಪಣಕಜೆ : ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ

Suddi Udaya

ಬಜಿರೆ ಪಿಎಂಶ್ರೀ ಸ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ

Suddi Udaya

ಆಟೋ ರಿಕ್ಷಾ ಮಗುಚಿಬಿದ್ದು ಮೃತಪಟ್ಟ ಬಾಲಕನ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಭೇಟಿ

Suddi Udaya
error: Content is protected !!