28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಸಿದ್ದವನ ಗುರುಕುಲದಲ್ಲಿ ಗುರುವಂದನಾ ವ್ಯಾಸಪೂರ್ಣಿಮೆ ಮತ್ತು ‘ವಂದೇ -ಗುರುಪರಂಪರಾಮ್’ ಕಾರ್ಯಕ್ರಮ

ಬೆಳ್ತಂಗಡಿ : ಪಶ್ಚಿಮ ಬಂಗಾಳದ ಪದಚಿಹ್ನದಿಂದ ಹೊರಟು ಇಡೀ ಅಖಂಡ ಭಾರತ ವ್ಯಾಪಿಸಿದ ವಂದೇ ಮಾತರಂ ನೂರೈವತ್ತು ವರ್ಷ ದಾಟಿದ ತರುವಾಯವೂ ಅಖಂಡ ಭಾರತದ ಸಾರ್ವಕಾಲಿಕ ರಣಮಂತ್ರ ಎಂದು ಬರಹಗಾರ ಶಿವಪ್ರಸಾದ್ ಸುರ್ಯ ಹೇಳಿದರು. ಶಸ್ತ್ರ ಮತ್ತು ಶಾಸ್ತ್ರಗಳ ಪ್ರತೀಕವಾಗಿ, ಅಧ್ಯಾತ್ಮದ ಅನುಭೂತಿಯಾಗಿ, ಗಿರಿ ಕಾನನಗಳ ವಸ್ತುಗಳನ್ನು ಒಳಗೊಂಡ ಭಾರತೀಯರ ಆರಾಧನಾ ಪದ್ದತಿಗಳ ಕಲಶಪ್ರಾಯವಾಗಿ ವಂದೇಮಾತರಂ ಹಾಡು ಮೈದಳೆದಿದ್ದು, ಆನಂದ ಮಠದಲ್ಲಿ ಬರುವ ಸಂತಾನ ಸನ್ಯಾಸಿಗಳ ಕಥಾವಸ್ತು ಭಾರತಕ್ಕಿರುವ ನಾನಾ ಸಾಧ್ಯತೆಗಳ ಪ್ರತೀಕ ಎಂದವರು ಬಣ್ಣಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಸಿದ್ದವನ ಗುರುಕುಲ ಉಜಿರೆಯಲ್ಲಿ ಆಯೋಜಿಸಿದ್ದ ಗುರುವಂದನಾ ವ್ಯಾಸಪೂರ್ಣಿಮೆ ಮತ್ತು ವಂದೇ ಮಾತರಂ ನೂರೈವತ್ತು ವರ್ಷಗಳ ಸಂಭ್ರಮಾಚರಣೆ ‘ವಂದೇ -ಗುರುಪರಂಪರಾಮ್’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಪ್ರೊ.ಗಣಪತಿ ಭಟ್ ಕುಳಮರ್ವ ವಹಿಸಿ ಪ್ರಾಸ್ತಾವನೆಗೈದರು. ಅಭಾಸಾಪ ವಿಭಾಗ ಸಂಯೋಜಕ್ ಸುಂದರ ಶೆಟ್ಟಿ ಇಳಂತಿಲ, ತಾಲೂಕು ಸಮಿತಿ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ , ಉಪಾಧ್ಯಕ್ಷ ರಾಮಕೃಷ್ಣ ಭಟ್, ಸಮಿತಿ ಸದಸ್ಯೆ ಶ್ರೀಮತಿ ಅಕ್ಷತಾ ಅಡೂರು, ಅಭಾಸಾಪ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ಪ್ರಕಾಶ್ ನಾರಾಯಣ್, ಸಿದ್ದವನ ಗುರುಕುಲ ಮುಖ್ಯ ಪಾಲಕರಾದ ಕೇಶವ್, ಮಹಿಳಾ ಪ್ರಕಾರ ಪ್ರಮುಖ್ ಶ್ರೀಮತಿ ವನಿತಾ ವಿ ಶೆಟ್ಟಿ, ಮಹಿಳಾ ಘಟಕ ಕಾರ್ಯದರ್ಶಿ ಶ್ರೀಮತಿ ಮೇಘನಾ ಪ್ರಶಾಂತ್, ಶ್ರೀಮತಿ ವಿದ್ಯಾ ಅಡೂರು,ಡಾllತಾರಕೇಶ್ವರಿ, ಶ್ರೀಮತಿ ವಿಜಯಲಕ್ಷ್ಮಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಮಿತಿ ಜತೆ ಕಾರ್ಯದರ್ಶಿ ಶ್ರೀಮತಿ ಸಂತೋಷಿಣಿ ಅವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಗೊಂಡು , ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ಆಶಾ ಅಡೂರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಮಿತಿ ಸ್ಥಾಪಕ ಅಧ್ಯಕ್ಷರಾದ ಡಾ.ಶ್ರೀಧರ್ ಭಟ್ ವಂದಿಸಿದರು. ಮಕ್ಕಳ ಪ್ರಕಾರ ಪ್ರಮುಖ್ ಶ್ರೀಮತಿ ಮೇಧಾ ಅವರ ವಂದೇ ಮಾತರಂ ನಿಂದ ಕಾರ್ಯಕ್ರಮ ಸಮಾಪನಗೊಂಡಿತು.

Related posts

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

Suddi Udaya

ತೆಕ್ಕಾರು ಗ್ರಾಮ ಪಂಚಾಯತ್ ನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಯುಎಇ 10 ವರ್ಷದ ಗೋಲ್ಡನ್ ವೀಸಾ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ನಡೆದ ಕಣಿಯೂರು ಮಹಾಶಕ್ತಿ ಕೇಂದ್ರ ಸಭೆ

Suddi Udaya

ಮೈರಲ್ಕೆ ಓಡಿಲ್ನಾಳ: ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ಬ್ರಹ್ಮಕಲಶ ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!