28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ- ರಕ್ಷಕ ಸಂಘದ ವಾರ್ಷಿಕ ಮಹಾಸಭೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯು ಜು. 25 ರಂದು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಸಮುದಾಯ ಭವನದಲ್ಲಿ ಶಿಕ್ಷಕ ವೃಂದದವರು ಪ್ರಾರ್ಥನಾ ಗೀತೆಯನ್ನು ಹಾಡುವುದರ ಮೂಲಕ ಪ್ರಾರಂಭವಾಯಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಸಂಚಾಲಕರಾದ ವಂ|ಸ್ವಾ| ಸ್ಟ್ಯಾನಿ ಗೋವಿಯಸ್ ರವರು ವಹಿಸಿದ್ದರು. ಶಾಲಾ ಸಹಶಿಕ್ಷಕಿಯರಾದ ಶ್ರೀಮತಿ ರಮ್ಯಾಲತಾ ಮತ್ತು ಶ್ರೀಮತಿ ಸವಿತಾ ರವರು 2025-26ನೇ ಶೈಕ್ಷಣಿಕ ವರ್ಷದ ಸಭೆಯ ವರದಿಯನ್ನು ಮಂಡಿಸಿದರು. ಸಹ ಶಿಕ್ಷಕಿಯಾದ ಎಲಿಜಾ ಶಾಂತಿರವರು ೨೦೨೫-೨೬ನೇ ಶೈಕ್ಷಣಿಕ ಸಾಲಿನ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು.

ಸಭೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಸೇಂಟ್ ಪೌಲ್ ಚರ್ಚ್ ನ ಧರ್ಮಗುರುಗಳು , SIGNIS ಕರ್ನಾಟಕ ಪ್ರದೇಶದ ಅಧ್ಯಕ್ಷರಾದ ವಂ|ಸ್ವಾ| ರಿಚರ್ಡ್ ಡಿಸೋಜ ರವರು ಆಗಮಿಸಿ “ಜನರೇಷನ್ Z ಮತ್ತು ಜನರೇಷನ್ ಆಲ್ಫಾ ಮಕ್ಕಳ ಪೋಷಣೆ: ಅವಕಾಶಗಳು ಮತ್ತು ಸವಾಲುಗಳು”ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು. ಸಹಶಿಕ್ಷಕಿಯಾದ ಶ್ರೀಮತಿ ಹರಿಣಾಕ್ಷಿ ರವರು ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ಸಭೆಗೆ ಮಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ|ಸ್ವಾ|ದೀಪಕ್ ಲಿಯೋ ಡೇಸರವರು ಶಾಲಾ ನಿಯಮಗಳು ಹಾಗೂ ಹೆತ್ತವರ ಸಲಹೆ ಸೂಚನೆಗಳಿಗೆ ಉತ್ತರವನ್ನು ನೀಡಿದರು. ಶಿಕ್ಷಕ-ರಕ್ಷಕ ಸಂಘದ ಎಲ್ಲಾ ಮಾಜಿ ಪದಾಧಿಕಾರಿಗಳಿಗೆ ಗಿಡವನ್ನು ನೀಡುವುದರ ಮೂಲಕ ಧನ್ಯವಾದಗಳನ್ನು ಅರ್ಪಿಸಲಾಯಿತು. 2026-27ನೇ ಶೈಕ್ಷಣಿಕ ಸಾಲಿನ ಪದಾಧಿಕಾರಿಗಳ ಚುನಾವಣೆಯನ್ನು ಮುಖ್ಯೋಪಾಧ್ಯಾಯರಾದ ವಂ|ಸ್ವಾ|ದೀಪಕ್ ಲಿಯೋ ಡೇಸರವರು ನೆರವೇರಿಸಿ ನಂತರ ದೀಪ ಬೆಳಗಿಸುವುದರ ಮೂಲಕ ೨೦೨೬-೨೭ನೇ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘವನ್ನು ಉದ್ಘಾಟಿಸಲಾಯಿತು.

ಮಾಜಿ ಉಪಾಧ್ಯಕ್ಷ ರವಿಂದ್ರ ರೈ ರವರು ಮಾತನಾಡಿ ನಾವು ನಮ್ಮ ಮಕ್ಕಳನ್ನು ಈ ಸಂಸ್ಥೆಗೆ ಕಳುಹಿಸುವುದು ನಮ್ಮ ಹೆಮ್ಮೆಯ ವಿಷಯ ಆಗಿರುತ್ತದೆ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ್ ಚಂದ್ರ ಶೆಟ್ಟಿ ಮಾತನಾಡಿ ಶಾಲೆಯ ಏಳಿಗೆಗೆ ಶ್ರಮಿಸುವುದಾಗಿ ಭರವಸೆಯನ್ನಿತ್ತರು. ನೂತನವಾಗಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳಿಗೆ ಹೂವನ್ನು ನೀಡುವುದರ ಮೂಲಕ ಅಭಿನಂದಿಸಲಾಯಿತು. ಸಹ ಶಿಕ್ಷಕಿಯರಾದ ಶ್ರೀಮತಿ ಸಿಸಿಲಿಯ ಡಿಸೋಜ ಮತ್ತು ಶ್ರೀಮತಿ ಆಶಾಲತಾ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ಮೇಘಶ್ರೀ ಸ್ವಾಗತಿಸಿ, ಶ್ರೀಮತಿ ಟ್ರೆಸಿ ಲೋಬೋ ಧನ್ಯವಾದವನ್ನು ಸಮರ್ಪಿಸಿದರು.

Related posts

ಧರ್ಮಸ್ಥಳ: ಪೊಸೊಳಿಕೆ ಅಂಗನವಾಡಿ ಕೇಂದ್ರದಲ್ಲಿ ಬಾಲ ಮೇಳ ಆಚರಣೆ

Suddi Udaya

ಪುಂಜಾಲಕಟ್ಟೆಯಲ್ಲಿ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಸಾಧಕ 10 ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

ಬೆಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಂ.ಆರ್. ಶೇಕ್ ಲತೀಫ್ ನೇಮಕ

Suddi Udaya

ಬೆಳಾಲು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ತಣ್ಣೀರುಪಂತ ವಲಯದ ತೆಕ್ಕಾರು ಕಾರ್ಯಕ್ಷೇತ್ರದ ಒಕ್ಕೂಟದ ಪದಗ್ರಹಣ ಸಮಾರಂಭ

Suddi Udaya

ಮೊಗ್ರು ಪರಿಸರದಲ್ಲಿ ಮಹಾಸಂಪರ್ಕ ಅಭಿಯಾನ ಮತ್ತು ಮತಯಾಚನೆ

Suddi Udaya
error: Content is protected !!