28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಿ.ಎ.ಓ ಪರೀಕ್ಷೆ : ವಿದ್ಯಾಮಾತಾದಿಂದ ಉಚಿತ ತರಬೇತಿ ಕಾರ್ಯಾಗಾರ

​ಪುತ್ತೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಪ್ರಸ್ತುತ 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕರಾವಳಿ ಭಾಗದ ಪ್ರತಿಷ್ಠಿತ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿ ಇದರ ಆಯೋಜನೆಯಲ್ಲಿ ಆ. 09 ರ ಬೆ. 10 ರಿಂದ ಸಂಜೆ 4 ರ ವರೆಗೆ ಉಚಿತ ಪೂರ್ವ ಸಿದ್ಧತಾ ತರಬೇತಿ ಕಾರ್ಯಾಗಾರ ನಡೆಯಲಿದೆ.

​ಕಾರ್ಯಾಗಾರದ ವೈಶಿಷ್ಟ್ಯಗಳು…

​ ಅಕಾಡೆಮಿ ಸಭಾಂಗಣದಲ್ಲಿ ನಡೆಯಲಿರುವ ಈ ಉಚಿತ ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಸರಳ -ಸುಲಭ ವಿಧಾನಗಳು, ಪಠ್ಯಕ್ರಮದ ಸಮಗ್ರ ವಿಶ್ಲೇಷಣೆ, ಸಮಯ ನಿರ್ವಹಣೆ ಹಾಗೂ ಯಶಸ್ಸಿನ ತಂತ್ರಗಳ ಕುರಿತು ವಿಷಯ ತಜ್ಞರು ನೇರ ಮಾರ್ಗದರ್ಶನ ನೀಡಲಿದ್ದಾರೆ.

​ ಉದ್ಯೋಗ ಜಾಗೃತಿ ಕ್ರಾಂತಿ – ವಿದ್ಯಾಮಾತಾ ಹೆಜ್ಜೆಯ ಗುರುತು :

​ಕರಾವಳಿ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವ ಪೀಳಿಗೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ವಿದ್ಯಾಮಾತಾ ಅಕಾಡೆಮಿ ವಹಿಸಿದ ಪಾತ್ರ ಅನನ್ಯವಾಗಿದೆ.
ಕೇವಲ ತರಬೇತಿಯನ್ನು ನೀಡುವುದಕ್ಕಷ್ಟೇ ಮಾತ್ರ ಅಕಾಡೆಮಿ ಸೀಮಿತವಾಗಿಲ್ಲ. ಸರ್ಕಾರಿ ಅಥವಾ ಖಾಸಗಿ ಉದ್ಯೋಗದ ಕನಸು ಕಾಣುವ ಪ್ರತಿಯೊಬ್ಬ ಅಭ್ಯರ್ಥಿಗೂ ಸರಿಯಾದ ಹಾದಿ ತೋರಿಸುವ , ಉದ್ಯೋಗ ಜಾಗೃತಿ ಅಭಿಯಾನವನ್ನು ಅಕಾಡೆಮಿ ನಿರಂತರವಾಗಿ ನಡೆಸಿಕೊಂಡು ಬಂದಿದೆ.
​ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆಗೆ ಯುವಜನರ ಉದ್ಯೋಗಾರ್ಹತೆ ಹೆಚ್ಚಿಸಲು ಖಾಸಗಿ ಉದ್ಯೋಗ ಕೌಶಲ್ಯ ತರಬೇತಿಯನ್ನು ಕೂಡ ಸಂಯೋಜಿಸಿ, ಕರಾವಳಿ ಭಾಗದಲ್ಲಿ ಅತ್ಯಂತ ವಿಭಿನ್ನ ಮತ್ತು ಮಾದರಿ ಶೈಲಿಯಲ್ಲಿ ಬೆಳೆದು ಬಂದಿರುವ ಹೆಗ್ಗಳಿಕೆ ವಿದ್ಯಾಮಾತಾ ಅಕಾಡೆಮಿಯದ್ದಾಗಿದೆ.

ಅಕಾಡೆಮಿಯ ​ಸಾಧನೆಯ ಹಾದಿ:

​ಕಳೆದ ಹಲವು ವರ್ಷಗಳಿಂದ ಬ್ಯಾಂಕಿಂಗ್, ಕೆಪಿಎಸ್‌ಸಿ, ಪೊಲೀಸ್, ರೈಲ್ವೇ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾಮಾತಾ ಇದರ ನೂರಾರು ವಿದ್ಯಾರ್ಥಿಗಳು ತರಬೇತಿ ಪಡೆದು ಸರ್ಕಾರಿ ಹಾಗೂ ಪ್ರತಿಷ್ಠಿತ ಖಾಸಗಿ ವಲಯಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಮೂಲಕ ಅಕಾಡೆಮಿ ಅಭೂತಪೂರ್ವ ಯಶಸ್ಸು ಕಂಡಿದೆ. ಗುಣಮಟ್ಟದ ಬೋಧನೆ, ನುರಿತ ಮಾರ್ಗದರ್ಶಕರು ಹಾಗೂ ನಿರಂತರ ಮಾದರಿ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಪ್ರಮುಖ ಆದ್ಯತೆಯಾಗಿದೆ.
​ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಯ ನಿರೀಕ್ಷೆಯಲ್ಲಿರುವ ಹಾಗೂ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳು ಈ ಉಚಿತ ತರಬೇತಿ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ನೋಂದಣಿ ಮಾಡಿಕೊಳ್ಳಲು ವಿದ್ಯಾಮಾತಾ ಅಕಾಡೆಮಿಯ ಕಚೇರಿ ಇಲ್ಲವೇ ದೂರವಾಣಿ ಸಂಖ್ಯೆ 8590773486 / 9448527606 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Related posts

ಮೈರೋಳ್ತಡ್ಕ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಮರದ ಕೊಂಬೆ ತೆರವು ಹಾಗೂ ಗಿಡ ಗಂಟಿಗಳ ತೆರವು ಕಾರ್ಯ

Suddi Udaya

ಕಡಿರುದ್ಯಾವರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು

Suddi Udaya

ಬೆಳ್ತಂಗಡಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರಖಂಡದಿಂದ ಷಷ್ಠಿ ಪೂರ್ತಿಯ ಸಮಾಲೋಚನಾ ಸಭೆ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಆಶ್ರಯ ಸಮಿತಿಗೆ ಸದಸ್ಯರ ನೇಮಕ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ಬೆಳ್ತಂಗಡಿ ತಾಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬಂಟರ ಸಂಘ ಉಜಿರೆ ವಲಯ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!