28.3 C
ಪುತ್ತೂರು, ಬೆಳ್ತಂಗಡಿ
September 11, 2026
ತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಧರ್ಮಸ್ಥಳದಲ್ಲಿ ಸಂಸ್ಕೃತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಧರ್ಮಸ್ಥಳ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ (ರಿ.),ದಕ್ಷಿಣ ಕನ್ನಡ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ, ಮಂಗಳೂರು ಸಂಸ್ಕೃತ ಸಂಘ (ರಿ.) ಇವುಗಳ ಸಹಯೋಗದೊಂದಿಗೆ ಎಸ್.ಎಸ್.ಎಲ್.ಸಿ ವಾರ್ಷಿಕ-ಪರೀಕ್ಷೆಯಲ್ಲಿ ಸಂಸ್ಕೃತ-ಭಾಷೆಯಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಸಮಾರಂಭಕ್ಕೆ ಉದ್ಘಾಟಕರಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಂಸ್ಕೃತ ಭಾಷೆಯ ಮಹತ್ವ ಹಾಗೂ ವಿದ್ಯಾರ್ಥಿಗಳು ಅದನ್ನು ತಿರಸ್ಕರಿಸದೆ ತಮ್ಮ ಜೀವಮಾನದ ಉದ್ದಕ್ಕೂ ಬಳಸಿಕೊಳ್ಳಬೇಕು, ಸಂಸ್ಕೃತ ಭಾಷೆಯ ಮಹತ್ವವನ್ನು ಅರಿತು ಬಾಳಬೇಕು ಎಂದು ಆಶೀರ್ವಚನವನ್ನು ನೀಡಿದರು. ಬಳಿಕ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸಾಂಕೇತಿಕವಾಗಿ ಸನ್ಮಾನಿಸಿ ಶುಭ ಹಾರೈಸಿದರು.

ಅನಂತರಾಮ ಐತಾಳರು ಪ್ರಸ್ತಾವಿಕ ನುಡಿಗಳನ್ನು ಆಡುತ್ತಾ ಈ ಕಾರ್ಯಕ್ರಮದ ಹಿಂದಿನ ಉದ್ದೇಶ ಹಾಗೂ ಇದರ ಹಿಂದೆ ಇರುವಂತಹ ಶ್ರಮದ ಕುರಿತಾಗಿ ಮಾತುಗಳನ್ನಾಡಿದರು.ಬಳಿಕ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯ ಉಜಿರೆ ಇಲ್ಲಿನ ಸಂಸ್ಕೃತ ಪ್ರಾಧ್ಯಾಪಕರಾಗಿರುವ ಶ್ರೀಧರ ಎನ್ ಭಟ್ ತನ್ನ ದಿಕ್ಸೂಚಿ ಭಾಷಣದಲ್ಲಿ ಸಂಸ್ಕೃತ ಭಾಷೆಯಲ್ಲಿ ಮಾತನಾಡುತ್ತಾ ಸಂಸ್ಕೃತ ಭಾಷೆಯ ಮಹತ್ವ ಸಂಸ್ಕೃತ ಭಾಷೆಯ ಅಗತ್ಯ ಹಾಗೂ ಸಂಸ್ಕೃತ ಭಾಷೆಯಲ್ಲಿರುವ ಪಾಂಡಿತ್ಯದ ಕುರಿತಾಗಿ ಮಾತನಾಡಿದರು, ಬಳಿಕ ಮಾತನಾಡಿರುವ ಮಾನ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡುತ್ತಾ ಸಂಸ್ಕೃತ ಭಾಷೆಯ ಉಳಿವಿಗಾಗಿ ನಾವು ಮಾಡುವ ಪ್ರಯತ್ನ ಹೇಗಿರಬೇಕು ಎಂಬುದನ್ನು ವಿವರಿಸಿದರು, ಧರ್ಮಸ್ಥಳ ಶಾಲೆಗಳ ಸಂಚಾಲಕರಾಗಿರುವ ಅನಂತಪದ್ಮನಾಭ ಭಟ್ ಕಾರ್ಯಕ್ರಮಕ್ಕೆ ತಮ್ಮ ಶುಭನುಡಿಯನ್ನು ನುಡಿದರು. ದಕ್ಷಿಣ ಕನ್ನಡ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ ಇದರ ಅಧ್ಯಕ್ಷ ಜಯರಾಮ ಭಟ್ ಈ ಕಾರ್ಯಕ್ರಮದ ಹಿಂದಿನ ಧೀಶಕ್ತಿ ಹಾಗೂ ಅದರ ಹಿಂದಿರುವ ಪ್ರಯತ್ನಗಳು ಅದರ ಉಳಿವಿನ ಕುರಿತಾದ ಅನೇಕ ವಿಚಾರಗಳನ್ನು ಮಾತನಾಡಿದರು.

ಬಳಿಕ ಪ್ರಥಮ ಭಾಷೆ ಸಂಸ್ಕೃತ ಇದರಲ್ಲಿ 125 ಹಾಗೂ 124 ಹಾಗೂ ತೃತೀಯ ಭಾಷೆಯಲ್ಲಿ 100 ಪೂರ್ಣ ಅಂಕಗಳನ್ನು, ಹಾಗೂ, 99 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಮಾಡಿ ಶುಭ ಹಾರೈಸಲಾಯಿತು. ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಧರ್ಮಸ್ಥಳ ಇಲ್ಲಿನ ಸಂಸ್ಕೃತ ಶಿಕ್ಷಕಿ ಶ್ರೀಮತಿ ಭವ್ಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಇಲ್ಲಿನ ಶಿಕ್ಷಕಿ ಸುಜನ ಸ್ವಾಗತಿಸಿ , ಮುರಾರಿ ತಂತ್ರಿ ಕಾರ್ಯಕ್ರಮದ ವಂದನಾರ್ಪಣೆಯನ್ನುಗೈದರು. ವಿವಿಧ ಶಾಲೆಗಳ ಸಂಸ್ಕೃತ ಉಪನ್ಯಾಸಕರು ಹೆತ್ತವರು ಹಾಗೂ 500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಗಳಾದರು.

Related posts

ಉಜಿರೆ: ಅನುಗ್ರಹ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಇಂದಬೆಟ್ಟು: ಮನ್ನಡ್ಕ ನಿವಾಸಿ ಮಿನ್ಕಿ ಗೌಡ ನಿಧನ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಪ್ರ.ದರ್ಜೆ ಕಾಲೇಜಿನ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ರಿಷಿಕಾ ಕುಂದೇಶ್ವರರಿಗೆ ಕುರಿಯ ವಿಠಲ ಶಾಸ್ತ್ರಿ ಪ್ರತಿಭಾ ಪುರಸ್ಕಾರ

Suddi Udaya

ಗಾಳಿ ಮಳೆಗೆ ಹಾರಿದ ಗುಡ್ಡೆತೋಟ ಹೊನ್ನಪ್ಪರವರ ಮನೆಯ ಸಿಮಂಟ್ ಶೀಟ್ ಶೌರ್ಯ ಘಟಕದಿಂದ ಶೀಟ್ ಅಳವಡಿಕೆ

Suddi Udaya

ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸ. ಹಿ. ಪ್ರಾ. ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

Suddi Udaya
error: Content is protected !!