27.8 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಬೆಳ್ತಂಗಡಿ ವಲಯದ ಭಜನಾ ಮಂಡಳಿಗಳ ವಲಯ ಸಭೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ಬೆಳ್ತಂಗಡಿ ವಲಯದ ಭಜನಾ ಮಂಡಳಿಗಳ ವಲಯ ಸಭೆ
ಜು.26ರಂದು ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಸಭಾಭವನದ ಪಿನಾಕಿ ಸಭಾಭವನದಲ್ಲಿ ನಡೆಯಿತು.

ಅತಿಥಿಗಳಾಗಿ ಬೆಳ್ತಂಗಡಿ ಕೇಂದ್ರ ಸಮಿತಿ ಪ್ರಗತಿ ಬಂಧು ಒಕ್ಕೂಟ ಅಧ್ಯಕ್ಷ ಸೀತಾರಾಮ್ ಆರ್., ಭಜನಾ ಪರಿಷತ್ ತಾಲೂಕು ಕಾರ್ಯದರ್ಶಿ ಇಂದಬೆಟ್ಟು ಚಂದ್ರಶೇಖರ್, ರಾಮ್ ಕುಮಾರ್ ಕೃಷಿ ಮೇಲ್ವಿಚಾರಕರು ಬೆಳ್ತಂಗಡಿ, ಗಣೇಶ್ ಕನ್ನಾಜೆ ಭಜನಾ ಪರಿಷತ್ತಿನ ವಲಯ ಅಧ್ಯಕ್ಷರು ಬೆಳ್ತಂಗಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಜನ ಮಂಡಳಿಗಳ ಕಾರ್ಯಕ್ಷೇತ್ರವಾರು ವಿಮರ್ಶೆ ನಡೆಸಿದರು. ತಿಂಗಳಿಗೊಮ್ಮೆ ಪ್ರತಿ ಮಂಡಳಿಗಳಲ್ಲಿ ವಲಯ ಸಭೆ ಮಾಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಧರ್ಮಸ್ಥಳದಲ್ಲಿ ನಡೆಯುವ ಕಮ್ಮಟ ಭಜನೆಯ ಬಗ್ಗೆ ಒಂದು ಮಂಡಳಿಯಿಂದ ಎರಡು ಜನರಂತೆ, ತರಬೇತಿ ಕಳಿಸುವ ಬಗ್ಗೆ ಚರ್ಚಿಸಿ ಮುಂದಿನ ಸಭೆಯೊಳಗೆ ತರಬೇತಿಗೆ ಬರುವ ಸದಸ್ಯರ ಹೆಸರನ್ನು ಕೊಡುವಂತೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಜನಾರ್ಧನ ಗೌಡ, ಬೆಳ್ತಂಗಡಿ ವಲಯದ ಮೇಲ್ವಿಚಾರಕ ಜಿ ರವಿ, ಸೇವಾ ಪ್ರತಿನಿಧಿ ಜ್ಯೋತಿ, ಬೆಳ್ತಂಗಡಿ ವಲಯದ ಭಜನಾ ಪರಿಷತ್ ನ ಜೊತೆ ಕಾರ್ಯದರ್ಶಿ ರೋಹಿಣಿ ಮತ್ತು ವಲಯದ ಎಲ್ಲಾ ಭಜನಾ ಮಂಡಳಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Related posts

ಚೆಸ್ ಪಂದ್ಯಾಟದಲ್ಲಿ ಉಜಿರೆಯ ನ್ಯಾಚುರೋಪತಿ ಕಾಲೇಜಿಗೆ ಪ್ರಶಸ್ತಿ

Suddi Udaya

ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

Suddi Udaya

ಜೂ.4 ಪಕ್ಷಗಳ ವಿಜಯೋತ್ಸವಕ್ಕೆ ರಾತ್ರಿ 12 ರವರೆಗೆ ನಿ‍ಷೇಧ: ದ.ಕ. ಜಿಲ್ಲಾಧಿಕಾರಿ ಆದೇಶ

Suddi Udaya

ಗುರುವಾಯನಕೆರೆ ಬಳಿ ಡಿವೈಡರ್‌ಗೆ ಬೈಕ್ ಡಿಕ್ಕಿ: ಯುವಕ ಸ್ಥಳದಲ್ಲಿ ಸಾವು

Suddi Udaya

ಹತ್ಯಡ್ಕ: ತುಂಬೆತಡ್ಕ ರಾಣಿಯಾರ್ ಸಮಾಜ ಸೇವಾ ಸಂಘದಿಂದ “ಸ್ವಚ್ಛ ಭಾರತ ಅಭಿಯಾನ ” ಪ್ರಯುಕ್ತ ಸ್ವಚ್ಛತಾ ಕಾರ್ಯ

Suddi Udaya

ನಡ ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya
error: Content is protected !!