September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾಲಾಡಿಯಲ್ಲಿ ಮಲ್ಲಿಗೆ ಕೃಷಿ, ತರಕಾರಿ ಕೃಷಿ, ಸಾವಯವ ಕೃಷಿ ತರಬೇತಿ ಕಾರ್ಯಕ್ರಮ

ಮಾಲಾಡಿ: ದ. ಕ ಜಿಲ್ಲಾ ಪಂಚಾಯತ್, ಜಿಲ್ಲಾ ಸಂಜೀವಿನಿ ಅಭಿಯಾನ ಘಟಕ ತಾಲ್ಲೂಕು ಪಂಚಾಯತ್ ಬೆಳ್ತಂಗಡಿ, ತಾಲೂಕು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ, ಗ್ರಾಮ ಪಂಚಾಯತ್ ಮಾಲಾಡಿ ಅಮೃತ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಇವುಗಳ ಆಶ್ರಯದಲ್ಲಿ ಮಲ್ಲಿಗೆ ಕೃಷಿ, ತರಕಾರಿ ಕೃಷಿ, ಸಾವಯವ ಕೃಷಿ ತರಬೇತಿ ಕಾರ್ಯಕ್ರಮವು ಜು.30 ರಂದು ಮಾಲಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ರೂಪಾ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳೆಯರು ಕೃಷಿ ಇಲಾಖೆಯ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಪ್ರಭಾಕರ ಮಯ್ಯ ಅವರು ಆಧುನಿಕ ಕೃಷಿ ಪದ್ಧತಿಗಳು, ಸಾವಯವ ಕೃಷಿ ಮೌಲ್ಯವರ್ಧನೆ, ತರಕಾರಿ ಕೃಷಿ ಹಾಗೂ ಕೃಷಿ ಆಧಾರಿತ ಸ್ವಯಂ ಉದ್ಯೋಗಗಳ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಬೆಳ್ತಂಗಡಿಯ ನಿರ್ದೇಶಕರಾದ ರಮೇಶ್, ತಾಂತ್ರಿಕ ವ್ಯವಸ್ಥಾಪ ಕರಾದ ನವನೀತ, ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಗಾಯತ್ರಿ, ಒಕ್ಕೂಟದ ಕಾರ್ಯದರ್ಶಿ ಸುನೀತಾ ಐತಾಳ್, ಪಂಚಾಯತ್ ಕಾರ್ಯದರ್ಶಿ ನಾರಾಯಣ್ ನಾಯಕ್ , ಅಮೃತ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದು ಕೊಂಡರು. ನಂತರ ಸಂಪನ್ಮೂಲ ವ್ಯಕ್ತಿಯಾದ ಪ್ರಭಾಕರ ಮಯ್ಯ ರವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು. ಎಮ್.ಬಿ.ಕೆ ಶಾರದಾ ಸ್ವಾಗತಿಸಿ, ತುಳಸಿ. ಬಿ ಯವರು ಕಾರ್ಯಕ್ರಮ ನಿರೂಪಿಸಿ, ಕೃಷಿ ಸಖಿ ಪಲ್ಲವಿ ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ನೊಚ್ಚ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ,

Suddi Udaya

ಉಜಿರೆಯ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಸಿನರ್ಜಿ” ವಿಭಾಗ ವಿದ್ಯಾರ್ಥಿ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ

Suddi Udaya

ಮೂಡುಕೋಡಿಯಲ್ಲಿ ವನಮಹೋತ್ಸವ ಆಚರಣೆ ಹಾಗೂ ಪ. ಜಾತಿ ಪ. ಪಂಗಡಗಳ ಮನೆಯವರಿಗೆ ಗೃಹೋಪಯೋಗಿ ವಸ್ತುಗಳ ವಿತರಣೆ

Suddi Udaya

ಗುರಿಪಳ್ಳ: ರಸ್ತೆಯ ಬದಿಯ ಚರಂಡಿಗೆ ಬಿದ್ದ ಬೈಕ್

Suddi Udaya

ಇಂದಬೆಟ್ಟು ಗ್ರಾ.ಪಂ. ಅಧ್ಯಕ್ಷರಾಗಿ ಆಶಾಲತಾ ಉಪಾಧ್ಯಕ್ಷರಾಗಿ ಪ್ರೇಮ ಅವಿರೋಧ ಆಯ್ಕೆ

Suddi Udaya

ಉಜಿರೆ: ಎಸ್.ಡಿ.ಎಂ.ವಸತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪ.ಪೂ. ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!