26.5 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬದನಾಜೆ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ

ಉಜಿರೆ: “ಜೀವನದಲ್ಲಿ ಶಿಸ್ತು, ಮೌಲ್ಯಗಳು, ಉತ್ತಮ ಸಂಸ್ಕಾರ, ಸದ್ವಿದ್ಯೆ, ಸಮಾಜಸೇವೆ ಹಾಗೂ ಪರಹಿತ ಚಿಂತನೆ ಮೊದಲಾದ ಆದರ್ಶ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.” ಸ್ವಾರ್ಥಕ್ಕಿಂತ ಸೇವೆಯೇ ಶ್ರೇಷ್ಠ’ ಎಂಬ ತತ್ತ್ವದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಇಂಟರಾಕ್ಟ್ ಕ್ಲಬ್ ಮಹತ್ತರ ಕೊಡುಗೆ ನೀಡುತ್ತಿದೆ” ಎಂದು ಬೆಳ್ತಂಗಡಿ ತಾಲೂಕು ರೋಟರಿ ಕ್ಲಬ್ ಅಧ್ಯಕ್ಷರಾದ ರೊ. ಶ್ರೀಧರ ಕೆ.ವಿ. ಅಭಿಪ್ರಾಯಪಟ್ಟರು.


ಅವರು ಸರ್ಕಾರಿ ಪ್ರೌಢಶಾಲೆ ಬದನಾಜೆಯಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ನೇತೃತ್ವದಲ್ಲಿ ನಡೆದ ಎಸ್.ಪಿ.ಎಸ್. ಬದನಾಜೆ ಇಂಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು.

ಇಂಟರಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ 9ನೇ ತರಗತಿಯ ದೇಕರ ಹಾಗೂ ಕಾರ್ಯದರ್ಶಿಯಾಗಿ ಕು. ವಂಶಿ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಮುನಾ ನೂತನ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಕಳೆದ ಶೈಕ್ಷಣಿಕ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ, ರೋಟರಿ ಜಿಲ್ಲಾ ಯೋಜನೆ “ವನ ಸಂಜೀವಿನಿ”ಅಭಿಯಾನದ ಅಂಗವಾಗಿ ರೋಟರಿ ಕ್ಲಬ್ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿದರು.


ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರಾದ ರೊ. ಸೋಮಶೇಖರ ಶೆಟ್ಟಿ, ರೊ. ವಿದ್ಯಾಕುಮಾರ ಕಾಂಚೋಡು ಹಾಗೂ ಶಾಲೆಯ ಸಹ ಶಿಕ್ಷಕರು ಉಪಸ್ಥಿತರಿದ್ದರು.

Related posts

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಡಾ. ಯು.ಸಿ. ಪೌಲೋಸ್ ಅವರಿಗೆ ‘ಕೀರ್ತಿಶೇಷ ಜಿ.ಎನ್. ಭಿಡೆ’ ಪ್ರಶಸ್ತಿ

Suddi Udaya

ಕ್ಯಾಂಟಿನ್‌ನಲ್ಲಿ ವೇಶ್ಯಾವಟಿಕೆ ಪ್ರಕರಣ: ಆರೋಪಿ ಸುಂದರ್ ಶೆಟ್ಟಿಗೆ ಜಾಮೀನು ಮಂಜೂರು

Suddi Udaya

ವೈಬ್ರೆಂಟ್ ಕಾಲೇಜಿನಲ್ಲಿ ವಿವೇಕ ಜಾಗೃತಿ ಕಾರ್ಯಕ್ರಮ

Suddi Udaya

ಏ.23-24: ಇಚ್ಚಿಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ-ಗುರುಮಂದಿರ ಲೋಕಾರ್ಪಣೆ

Suddi Udaya

ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ ಮಾಸಿಕ ಸಭೆ

Suddi Udaya

ನಾವೂರು: ರಸ್ತೆ ಅವಘಡದಲ್ಲಿ ಮೃತಪಟ್ಟ ಚಂದ್ರಹಾಸ್ ಮನೆಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

Suddi Udaya
error: Content is protected !!