28.1 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿರಾಜಕೀಯ

ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ – ವೈಯಕ್ತಿಕ ನೆಲೆಯಲ್ಲಿ ಆಥಿ೯ಕ ಸಹಾಯ ಹಸ್ತಾಂತರ

ಬೆಳ್ತಂಗಡಿ : ಕಳೆದ ಎರಡು ದಿನಗಳ ಹಿಂದೆ ಧಾರಕಾರ ಮಳೆಯಿಂದಾಗಿ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೆ, ಸಂಕಷ್ಟ ಎದುರಿಸುತ್ತಿರುವ ಕುಟುಂಬಸ್ಥರಿಗೆ ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ನೆರವು ನೀಡಿದರು.ಗ್ರಾಮದ ಗಾಣದಕೊಟ್ಟಿಗೆ ನಿವಾಸಿ ಗಂಗಾಧರ ಗೌಡ ಎಂಬವರ ಮನೆ ಬಳಿಯ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿತ್ತು. ಮುಂಡಾಜೆ ಗ್ರಾಮದ ನಿವಾಸಿ ಚೋಮು ನಲಿಕೆ ಎಂಬವರ ಮನೆ ಭಾರಿ ಮಳೆಗೆ ಕುಸಿದು ಬಿದ್ದಿತ್ತು. ಸತ್ಯನಪಲ್ಕೆ ನಿವಾಸಿ ಯಮುನಾ ಎಂಬವರ ಮನೆಯೂ ಹಾನಿಯಾಗಿತ್ತು.

ಧರ್ಮಸ್ಥಳ ಗ್ರಾಮ ಕಟ್ಟದ ಬೈಲು ನಾರಾಯಣ ಗೌಡ, ಅನಂತ ಶೆಟ್ಟಿಗಾರ್ ಮನೆಯ ಹಿಂಬದಿಯ ಗುಡ್ಡ ಕುಸಿದು, ಸಮಸ್ಯೆ ಎದುರಾಗಿತ್ತು. ಮಾಹಿತಿ ಪಡೆದ ಶಾಸಕರು ಹಾನಿಗೊಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಧರ್ಮಸ್ಥಳ ಗ್ರಾಮದ ಎರಡು ಕುಟುಂಬಗಳಿಗೆ ಆರ್ಥಿಕ ನೆರವಿಗಾಗಿ ಚೆಕ್‌ ವಿತರಿಸಿದರು.ಮನೆಯವರೊಂದಿಗೆ ಮಾತನಾಡಿದ ಅವರು, ತಕ್ಷಣವೇ ಮಳೆ ಹಾನಿ ಪರಿಹಾರವನ್ನು ನೀಡುವ ಭರವಸೆಯನ್ನೂ ನೀಡಿದರು.

Related posts

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ: 17 ನೇ ಪಾಯಿಂಟ್ ನಲ್ಲಿ ಕಾರ್ಯಾಚರಣೆ ಆರಂಭ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಕೆನರಾ ಬ್ಯಾಂಕಿನ ಡಿಜಿಎಮ್ , ಮಂಗಳೂರು ರೀಜಿನಲ್ ಮೆನೇಜರ್ ಹಾಗೂ ರುಡ್ ಸೆಟ್ ಅಧಿಕಾರಿಗಳು ಭೇಟಿ: ದೇವರಿಗೆ ರಂಗಪೂಜೆ ಸೇವೆ

Suddi Udaya

ಬೆಳ್ತಂಗಡಿ: ಹೈಟೆನ್ಶನ್ ಜಂಪರ್ ತುಂಡಾಗಿ ಬಿದ್ದು ಬೆಂಕಿ ಅವಘಡ

Suddi Udaya

ದ.ಕ ಜಿಲ್ಲೆಗೆ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳು ಶೇ.50, 90ರ ಸಹಾಯಧನ ಲಭ್ಯ: ವಿವಿಧ ಬಗೆಯ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ : ರಾಜ್ಯಮಟ್ಟದ 44ನೇ ವಷ೯ದ ವಸ್ತುಪ್ರದರ್ಶನ ಉದ್ಘಾಟನೆ

Suddi Udaya

ಮೇ 4: ನಡ ನರಸಿಂಹಗಡ ಕ್ಷೇತ್ರದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ, ಆಮಂತ್ರಣ ಪತ್ರಿಕೆ ವಿತರಣೆ

Suddi Udaya
error: Content is protected !!