ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಲಾಯಿಲ: ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಲಾಯಿಲ ಬಳಿ ಕಾರು ಚಾಲಕ ಹಿಂದಿನಿಂದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂಗೊಂಡು ರಿಕ್ಷಾ ಚಾಲಕ ಹಾಗೂ ರಿಕ್ಷಾದಲ್ಲಿದ್ದ ಮಗುವಿಗೆ ಗಾಯಗಳಾಗಿದ್ದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಫೆ,1 ರಂದು ನಡೆದಿದೆ.

ಬೆಳ್ತಂಗಡಿ ಕಸಬಾ ಗ್ರಾಮದ ನಿವಾಸಿ ಅರಿಸ್ (35) ಎಂಬವರ ದೂರಿನಂತೆ, ಫೆ. 01 ರಂದು ಮಧ್ಯಾಹ್ನ ಅರಿಸ್ ಅವರ ಬಾಬ್ತು KA 70-6618 ನೇ ಆಟೋ ರಿಕ್ಷಾದಲ್ಲಿ ಬಾಡಿಗೆಗೆ ಪ್ರಯಾಣಿಕರಾದ ಅನ್ನತ್‌, ಸನ್ವಝ್‌ ಬಾನು, ಸಫಿಯಾ, ಮಗು ಮಹಮ್ಮದ್‌ ಶಾಝ್‌, ಮಗು ಫಾತಿಮಾ ನಹ್ಲಾ ಎಂಬವರನ್ನು ಸಹ ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು, ಬೆಳ್ತಂಗಡಿ ಲಾಯಿಲ ಅಪೂರ್ವ ಹೋಟೇಲ್‌ ಬಳಿ ತಲುಪುತ್ತಿದ್ದಂತೆ, KA 19 MN 5456 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಆಟೋ ರಿಕ್ಷಾಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂಗೊಂಡು ಅರಿಸ್ ಹಾಗೂ ರಿಕ್ಷಾದಲ್ಲಿದ್ದ ಮಗು ಫಾತಿಮಾ ನಹ್ಲಾ ಎಂಬವರಿಗೆ ಗಾಯಗಳಾಗಿದ್ದು, ಗಾಯಾಳುಗಳು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ‌ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 11/2024 ಕಲಂ: 279,337 ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ರಾಷ್ಟ್ರೀಯ ಹೆದ್ದಾರಿ ಬದಿ ತ್ಯಾಜ್ಯ

Suddi Udaya

ಪೆರಿಂಜೆ ನಿವಾಸಿ ರಾಘು ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಮಗು ಸಾವು: ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ ವಸಂತ ಬಂಗೇರ ಸೂಕ್ತ ತನಿಖೆಗೆ ಒತ್ತಾಯ

Suddi Udaya

ಅಪರ ಸರಕಾರಿ ವಕೀಲ ಮನೋಹರ್ ಕುಮಾರ್ ಅವರ ನೂತನ ಕಚೇರಿ ಉದ್ಘಾಟನೆ

Suddi Udaya

ರೆಖ್ಯ: ಸಾರ್ವಜನಿಕ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣಾ ಸಮಿತಿ ರಚನೆ

Suddi Udaya

ಕೇಳ್ತಾಜೆ ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸದಲ್ಲಿ ಈದುಲ್ ಫಿತರ್ ಆಚರಣೆ

Suddi Udaya
error: Content is protected !!