32.3 C
ಪುತ್ತೂರು, ಬೆಳ್ತಂಗಡಿ
September 19, 2026
ಅಪರಾಧ ಸುದ್ದಿ

ಫರಂಗಿಪೇಟೆಮಹಮ್ಮದ್ ರಿಯಾಜ್ ಗೆ6 ತಿಂಗಳ ಜೈಲು ಶಿಕ್ಷೆ‌ ಹಾಗೂ ರೂ .10, ಸಾವಿರ ದಂಡ

ಬೆಳ್ತಂಗಡಿ:
2015 ಜು.23ರಂದು ಬೆಳ್ತಂಗಡಿ ತಾಲೂಕು ಕಛೇರಿ ಬಳಿ, ಪಾಪ್ಯುಲ್ಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವಲಯ ಎಂಬ ಸಂಘಟನೆಯ ವತಿಯಿಂದ ನಡೆಯುತ್ತಿದ್ದ ಪ್ರತಿಭಟನಾ ಸಭೆಯಲ್ಲಿ, ಧಾರ್ಮಿಕ ಭಾವನೆಗೆ ಧಕ್ಕೆಯಾಗುವಂತೆ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ, ಮಹಮ್ಮದ್ ರಿಯಾಜ್ ಫರಂಗಿಪೇಟೆ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 315/2015, ಕಲಂ: 153(A)295(A) ಭಾ.ದಂ.ಸಂ (IPC)ರಂತೆ ಪ್ರಕರಣ ದಾಖಲಾಗಿತ್ತು.

ಸದ್ರಿ ಪ್ರಕರಣದ ತನಿಖೆ ನಡೆಸಿದ ಅಂದಿನ ಬೆಳ್ತಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕರು ಹಾಗೂ ಸದ್ರಿ ಪ್ರಕರಣದ ತನಿಖಾಧಿಕಾರಿಗಳಾಗಿದ್ದ ರವಿ ಬಿ.ಎಸ್ ರವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಬೆಳ್ತಂಗಡಿಗೆ ಪ್ರಿನ್ಸಿಪಲ್ ಸಿ ಜೆ & ಜೆ ಎಮ್ ಎಫ್
ನ್ಯಾಯಾಲಯಕ್ಕೆ ದೊಷಾರೊಪಣಾ ಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆರೋಪಿತನ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ರಾಮಲಿಂಗಪ್ಪರವರು
ಕಲಂ : 153(A) ಅಡಿಯಲ್ಲಿ 6 ತಿಂಗಳ ಸಾದಾ ಕಾರಗೃಹ ವಾಸ ಮತ್ತು 10,000 ದಂಡ ವಿಧಿಸಿ ಅದೇಶಿಸಿರುತ್ತಾರೆ.
ಸರಕಾರಿ ಅಭಿಯೋಜಕರಾದ ಶ್ರೀಮತಿ ಆಶೀತರವರು ಸಮರ್ಥವಾಗಿ ವಾದಮಂಡನೆ ನಡೆಸಿದ್ದರು.

Related posts

ಉಜಿರೆ: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ಆರೋಪಿ ಸಯ್ಯದ್ ಬಂಧನ; ಪೋಕ್ಸೋ ಪ್ರಕರಣ ದಾಖಲು

Suddi Udaya

ಶಿಬಾಜೆ: ರಸ್ತೆಗೆ ಅಡ್ಡಲಾಗಿ ಇಟ್ಟಿಗೆ ಇಟ್ಟ ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕನಿಗೆ ಗಾಯ ಆರೋಪಿ ವಿರುದ್ಧ ಪ್ರಕರಣ ದಾಖಲು

Suddi Udaya

ಚೆಕ್ ಬೌನ್ಸ್ ಪ್ರಕರಣ: ನ್ಯಾಯಾಲಯಕ್ಕೆ ಐದು ವರ್ಷ ಹಾಜರಾಗದ ಆರೋಪಿಯ ಬಂಧನ

Suddi Udaya

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಆರೋಪಿ ಪುದುವೆಟ್ಟುವಿನ ಯುವಕನ ಬಂಧನ

Suddi Udaya

ಧರ್ಮಸ್ಥಳ ಪ್ರಕರಣ: ಮಹೇಶ್ ಶೆಟ್ಟಿ ತಿಮರೋಡಿ ಸೇರಿ ನಾಲ್ವರ ವಿರುದ್ದ ಎಫ್.ಐ.ಆರ್ ಗೆ ಹೈಕೋರ್ಟ್ ಮಧ್ಯಂತರ ತಡೆ

Suddi Udaya

ಅಕ್ರಮ ದಾಸ್ತಾನು ಡಿಸೇಲ್ ಪತ್ತೆ ಪ್ರಕರಣ:ಡಿಸೇಲ್ ಹರಾಜು ಮಾಡಿದ ಕಂದಾಯ ಇಲಾಖೆ

Suddi Udaya
error: Content is protected !!