23.8 C
ಪುತ್ತೂರು, ಬೆಳ್ತಂಗಡಿ
September 28, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಆಹಾರ ಇಲಾಖೆಯಿಂದ ಸೂಚನೆ

ಬೆಳ್ತಂಗಡಿ: ತಾಲೂಕಿನಲ್ಲಿ ಎಲ್ಲ ಪಡಿತರ ಚೀಟಿಯಲ್ಲಿನ ಸದಸ್ಯರ ಇ-ಕೆವೈಸಿ ಮಾಡಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದಂತೆ ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರೈಸಿದ ಒಟ್ಟು 37,532 ಪಡಿತರ ಚೀಟಿಯಲ್ಲಿನ 1,11,798 ಫಲಾನುಭವಿಗಳ ಇ-ಕೆವೈಸಿ ಬಾಕಿಯಿದೆ.

ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ಆಯಾ ತಾಲ್ಲೂಕಿನ ನ್ಯಾಯಬೆಲೆ ಅಂಗಡಿ ಡೀಲರ್‌ಗಳಿಗೆ ನೀಡಲಾಗಿದೆ. ಫಲಾನುಭವಿಗಳು ತಮಗೆ ಜೋಡಣೆಯಾದ ನ್ಯಾಯಬೆಲೆ ಅಂಗಡಿಗೆ ಖುದ್ದು ಭೇಟಿ ನೀಡಿ ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಸುವಂತೆ ತಿಳಿಸಿದೆ.

ಇ-ಕೆವೈಸಿ ಪ್ರಕ್ರಿಯೆಯು ಉಚಿತವಾಗಿದ್ದು, ಇದಕ್ಕೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಒಂದು ವೇಳೆ ಫಲಾನುಭವಿಗಳು ಇ-ಕೆವೈಸಿ ಮಾಡಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪಡಿತರ ಚೀಟಿಯಲ್ಲಿ ಅಂತಹ ಫಲಾನುಭವಿಗಳ ಹೆಸರನ್ನು ತೆಗೆಯಲು ಕ್ರಮವಹಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾ ಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related posts

ಮೈಸೂರಿನ ಎಸ್.ಡಿ.ಎಂ.ಐ.ಎಂ.ಡಿ.ಯ ಪಿ.ಜಿ.ಡಿ.ಎಂ. ಕೋರ್ಸಿಗೆ ಎರಡನೆ ಬಾರಿ ಇ.ಎಫ್.ಎಂ.ಡಿ. ಮಾನ್ಯತೆ ನವೀಕರಣ: ಡಾ| ಡಿ. ಹೆಗ್ಗಡೆಯವರಿಂದ ಜಾಗತಿಕ ಮಾನ್ಯತೆ ನವೀಕರಣ ಪ್ರಮಾಣಪತ್ರ ಸ್ವೀಕಾರ

Suddi Udaya

ತೆಂಕಕಾರಂದೂರು: ಶಾಲಾ ಆವರಣದಲ್ಲಿ ಹೂವಿನ ಕುಂಡಗಳನ್ನು ಪುಡಿಗೊಳಿಸಿದ ಕಿಡಿಗೇಡಿಗಳು

Suddi Udaya

ಉಜಿರೆ : ಅರ್ಜುನ ಪ್ರಶಸ್ತಿ ಪುರಸ್ಕೃತೆ ಪೂವಮ್ಮ ಅವರಿಂದ ಎಸ್.ಡಿ.ಎಂ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

Suddi Udaya

ಜೆಸಿಐ ಮಡಂತ್ಯಾರು ಆತಿಥ್ಯದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ “ಮೃದಿನಿ” ಸಮ್ಮೇಳನ

Suddi Udaya

ಬಾಯ೯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭಕ್ತರಿಂದ ಭಜನಾ ಸಂಕೀರ್ತನೆ

Suddi Udaya

ಮೊಗ್ರು: ನೆಕ್ಕರಾಜೆ ನಿವಾಸಿ ಲಕ್ಷ್ಮೀ ನಿಧನ

Suddi Udaya
error: Content is protected !!