23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನರರೋಗ ಶಸ್ತ್ರಚಿಕಿತ್ಸಾ ತಜ್ಞರಿಂದ ಮೆದುಳಿನ ರಕ್ತಸ್ರಾವಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ

ಉಜಿರೆ : ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಹಲವಾರು ಯಶಸ್ವಿ ಶಸ್ತ್ರ ಚಿಕಿತ್ಸೆಗಳಿಂದ ಜನಪ್ರಿಯವಾಗುತ್ತಿದೆ. ಇದೀಗ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರಿಂದ ನರಗಳ ಸಾಮಾನ್ಯ ಶಸ್ತ್ರ ಚಿಕಿತ್ಸೆ ಸೇರಿದಂತೆ ಮೆದುಳಿನ ಶಸ್ತ್ರ ಚಿಕಿತ್ಸೆ, ಬೆನ್ನುಹುರಿಯ ಶಸ್ತ್ರ ಚಿಕಿತ್ಸೆಗಳಂತಹ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಇದರಿಂದಾಗಿ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗೆ ಗ್ರಾಮೀಣ ಜನತೆ ದೂರದ ಮಂಗಳೂರಿಗೆ ಅಲೆದಾಡುವ ಕಷ್ಟ ನಿವಾರಣೆಯಾಗುತ್ತಿದೆ.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಖ್ಯಾತ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ| ಅರುಣ್ ಕುಮಾರ್ ಪ್ರತಿದಿನ ಲಭ್ಯವಿದ್ದು, ಇವರು ಮತ್ತು ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ಧನ್ ಇವರು ಡಾ. ಡಿ. ವೀರೇಂದ್ರ ಹೆಗ್ಗಡೆಯವರಲ್ಲಿ ನ್ಯೂರೋ ಸರ್ಜರಿಗೆ ಬೇಕಾದ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿನಂತಿಸಿಕೊಂಡಾಗ ತಕ್ಷಣವೇ ಸ್ಪಂಧಿಸಿದ ಪೂಜ್ಯರು ಇದಕ್ಕಾಗಿ 1.23 ಕೋಟಿ ರೂಪಾಯಿಯನ್ನು ಖರ್ಚು ಮಾಡಿರುತ್ತಾರೆ. ಪೂಜ್ಯರು ಕಲ್ಪಿಸಿಕೊಟ್ಟ ಈ ಸೌಲಭ್ಯಗಳಿಂದ ಕಳೆದ ಒಂದು ತಿಂಗಳಲ್ಲಿ ನರರೋಗಕ್ಕೆ ಸಂಬಂಧಿಸಿದ ಸಾಮಾನ್ಯ ಶಸ್ತçಚಿಕಿತ್ಸೆಗಳಲ್ಲದೆ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಗಳಾದ 8 ಮೆದುಳಿನ ಶಸ್ತ್ರ ಚಿಕಿತ್ಸೆ ಮತ್ತು ಒಂದು ಬೆನ್ನುಹುರಿಯ ಶಸ್ತçಚಿಕಿತ್ಸೆಗಳನ್ನು ಇಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.


ಮೆದುಳಿನ ರಕ್ತಸ್ರಾವಕ್ಕೆ ಶಸ್ತ್ರ ಚಿಕಿತ್ಸೆ: 58 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಕೆಲವು ದಿನಗಳಿಂದ ತಲೆ ತಿರುಗುವಿಕೆ, ಮೈಕೈಯಲ್ಲಿ ಸಾಮಾನ್ಯ ದೌರ್ಬಲ್ಯ, ವಾಂತಿ ಮತ್ತು ತೊದಲು ಮಾತು. ಎಡಗಾಲಿನ ದೌರ್ಬಲ್ಯದೊಂದಿಗೆ ಉಜಿರೆ ಎಸ್.ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇಲ್ಲಿನ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ| ಅರುಣ್.ಎಸ್ ಇವರು ರೋಗಿಯನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಮೆದುಳಿನ ಒಳಗೆ ದ್ರವ ತುಂಬಿದ ಜಾಗದಲ್ಲಿ ರಕ್ತಸ್ರಾವವಾಗುತ್ತಿದ್ದು, ಮೆದುಳಿನ ನೀರು ಹರಿಯುವಿಕೆಗೆ ಅಡಚಣೆಯಾಗಿರುವುದು ಕಂಡು ಬಂದಿತ್ತು. ಇದರಿಂದ ರೋಗಿಯ ಪ್ರಜ್ಞೆ ಕಡಿಮೆ ಆಗುತ್ತಿದ್ದು, ಸ್ಥಿತಿ ಗಂಭೀರವಾಗುತ್ತಿದುದರಿAದÀ ತಕ್ಷಣವೇ ಶಸ್ತçಚಿಕಿತ್ಸೆಗೆ ಒಳಪಡಿಸಲಾಯಿತು.


ಓಮಯಾ ರಿಸರ್ವಾಯರ್ ಎಂಬ ಸಣ್ಣ ಉಪಕರಣವನ್ನು ಬಳಸಿ ಯಶಸ್ವಿಯಾಗಿ ಮೆದುಳಿನಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ದ್ರವ ಮತ್ತು ರಕ್ತವನ್ನು ತೆಗೆಯಲಾಯಿತು. ರೋಗಿಯ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದ್ದು, ರಕ್ತದೊತ್ತಡ ಮತ್ತು ಇತರ ದೈಹಿಕ ತೊಂದರೆಗಳು ನಿಯಂತ್ರಣಕ್ಕೆ ಬಂದ ಬಳಿಕ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಯಿತು, ಪ್ರಸ್ತುತ ರೋಗಿಯು ಆರೋಗ್ಯವಂತರಾಗಿದ್ದಾರೆ ಎಂದು ಇಲ್ಲಿನ ನ್ಯೂರೋ ಸರ್ಜನ್ ಡಾ| ಅರುಣ್.ಎಸ್ ತಿಳಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನ್ಯೂರೋ ಪರೀಕ್ಷೆಗಾಗಿ ಸಿಟಿ ಸ್ಕ್ಯಾನ್ ವ್ಯವಸ್ಥೆ ಇದ್ದು, ಅತ್ಯಾಧುನಿಕ ಎಐ ಆಧಾರಿತ ಸೀಮೆನ್ಸ್ ಎಂ.ಆರ್.ಐ ಸ್ಕ್ಯಾನ್ ಕೂಡ ಇತ್ತೀಚೆಗೆ ಅಳವಡಿಸಲಾಗಿದೆ. ಇದಲ್ಲದೆ ನ್ಯೂರೋ ಸರ್ಜರಿಗಾಗಿ ಮಾಡ್ಯುಲರ್ ಓಟಿ, ಶಸ್ತ್ರ ಚಿಕಿತ್ಸೆಗೆ ಅವಶ್ಯಕವಾದ ಅತ್ಯಾಧುನಿಕ ಮೈಕ್ರೋಸ್ಕೋಪಿ, ಕ್ಯೂಸಾ ಯಂತ್ರ ಮತ್ತು ಡ್ರಿಲ್ ಯಂತ್ರಗಳಿವೆ. ನ್ಯೂರೋ ತಜ್ಞ ವೈದ್ಯರು, ಅನುಭವಿ ಅರೆವಳಿಕೆ ತಜ್ಞರು ಮತ್ತು ಓಟಿ, ಐಸಿಯು ತಂತ್ರಜ್ಞರು ಹಾಗೂ ನುರಿತ ದಾದಿಯರ ತಂಡವನ್ನು ಹೊಂದಿದೆ. ಇದರಿಂದ ಬಹಳ ಮುಖ್ಯವಾದ ನ್ಯೂರೋ ಸರ್ಜರಿ ನಡೆಸಲು ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಈ ಆಸ್ಪತ್ರೆ ಹೊಂದಿದೆ. ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ ಹಲವಾರು ಯಶಸ್ವಿ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.
ವರದಿ: ನಾರಾಯಣ. ಬಿ

Related posts

ಸೌಜನ್ಯಳಿಗೆ ನ್ಯಾಯ ಸಿಗಲೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಶಾಸಕ ಹರೀಶ್ ಪೂಂಜರಿಂದ ಕುತ್ಯಾರು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಶಿಶಿಲ -ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಕಾರೆಗುಡ್ಡೆಯಲ್ಲಿ ರಸ್ತೆ ದುರಸ್ತಿ

Suddi Udaya

ಸೋಣ0ದೂರು ನಿವಾಸಿ ಅಶೋಕ್ ಶೆಟ್ಟಿ ನಿಧನ

Suddi Udaya

ಬೆಳ್ತಂಗಡಿ: ನಿತ್ಯಾನಂದ ನಾವರರವರು ಒಂದೇ ದಿನದಲ್ಲಿ112 ಜೀವ ವಿಮಾ ಪಾಲಿಸಿ ಮಾಡಿ ಒನ್ ಡೇ ಸೆಂಚುರಿಯನ್ ಸಾಧನೆ

Suddi Udaya

ಧರ್ಮಸ್ಥಳ ಮೇಳದ ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತದಿಂದ ನಿಧನ

Suddi Udaya

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ : ರೂ. 1 ಕೋಟಿ ಲಾಭ, ಶೇ. 12 ಡಿವಿಡೆಂಡ್

Suddi Udaya
error: Content is protected !!