23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಲ್.ಸಿ.ಆರ್. ವಿದ್ಯಾಸಂಸ್ಥೆಯಲ್ಲಿ “ಕೆಸರು ಗದ್ದೆ- ಗ್ರಾಮ್ಯ ಗಮ್ಮತ್ತು” ಕಾರ್ಯಕ್ರಮ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್ (ರಿ). ನಿಂದ ನಡೆಸಲ್ಪಡುವ ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆ, ಕಕ್ಯಪದವು ಇಲ್ಲಿನ ಎಲ್.ಸಿ.ಆರ್.ಇಂಡಿಯನ್ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕೆಸರು ಗದ್ದೆ – ಗ್ರಾಮ್ಯ-ಗಮ್ಮತ್ತು ಕಾರ್ಯಕ್ರಮವನ್ನು ಆ.13ರಂದು ಪ್ರಗತಿಪರ ಕೃಷಿಕ ವಿಠಲ ಭಂಡಾರಿ ಪುಣ್ಕೆದಡಿ , ಕಕ್ಯಪದವು ಇವರ ಗದ್ದೆಯಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಊರ್ದೊಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಚೇತನ್ ಉದ್ಘಾಟಿಸಿ , ತುಳುವ ಮಣ್ಣಿನ ಸಂಸ್ಕೃತಿಯನ್ನು ಉಳಿಸುವ ಗ್ರಾಮ್ಯ ಸೊಗಡು ಇಂತಹ ಕೆಸರುಗದ್ದೆಯ ಕೂಟದಲ್ಲಿ ವಿದ್ಯಾರ್ಥಿಗಳಲ್ಲಿ ಅರಳಲು ಸಾಧ್ಯ ಹಾಗೂ ಕೃಷಿ ಸಂಸ್ಕೃತಿಯನ್ನು ಉಳಿಸಬೇಕು ಎಂದರು.

ಗೌರವ ಉಪಸ್ಥಿತರಿದ್ದ ಸಿತಾರ್ ಆರ್.ಭಂಡಾರಿ ಇವರು ಮಾತನಾಡಿ ತುಳುನಾಡಿನ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ದಾಗ ತುಳು ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿಯ ಅರಿವು ಮೂಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿಠಲ ಭಂಡಾರಿ, ರಾಮಯ್ಯ ಭಂಡಾರಿ, ಗೋಪಾಲ ಭಂಡಾರಿ, ಲಕ್ಷ್ಮಣ ಭಂಡಾರಿ ಪ್ರಗತಿಪರ ಕೃಷಿಕರು ಪುಣ್ಕೆದಡಿ ,ಅಕ್ಬರ್ ಆಲಿ ಸಹಶಿಕ್ಷಕರು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಉಳಿಬೈಲು ಉಪಸ್ಥಿತರಿದ್ದರು.

ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಬಬಿತಾ ಆರ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿಗಳಾದ ಶಿವಾನಿ ಆರ್ ನಾಥ್ ಘನ ಉಪಸ್ಥಿತರಿದ್ದರು. ಸಂಸ್ಥೆಯ ಸಂಯೋಜಕ ಯಶವಂತ ಜಿ.ನಾಯಕ್, ಮುಖ್ಯೋಪಾಧ್ಯಾಯಿನಿ ವಿಜಯಾ.ಕೆ ವೇದಿಕೆಯನ್ನು ಅಲಂಕರಿಸಿದ್ದರು.


ಪ್ರಾಂಶುಪಾಲರಾದ ಜೋಸ್ಟನ್ ಲೋಬೊ ಅಧ್ಯಕ್ಷೀಯ ಮಾತುಗಳನ್ನಾಡಿ ಶುಭಹಾರೈಸಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ವಿಂದ್ಯಾಶ್ರೀ. ಎ ಸ್ವಾಗತಿಸಿ, ವಾಣಿಜ್ಯ ಉಪನ್ಯಾಸಕ ಮನೋಜ್ ವಂದಿಸಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಪೃಥ್ವಿ ರಾಜ್ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉತ್ಸಾಹದಿಂದ ಭಾಗವಹಿಸಿ ಕೆಸರಿನ ಆಟಗಳು ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಪಾಲ್ಗೊಂಡರು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸಹಕಾರ, ಸ್ನೇಹ, ಕ್ರೀಡಾಸ್ಫೂರ್ತಿ ಹಾಗೂ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಮನರಂಜನೆಯ ಜೊತೆಗೆ ಗ್ರಾಮೀಣ ಜೀವನಶೈಲಿ ಮತ್ತು ಕೃಷಿ ಸಂಸ್ಕೃತಿಯ ಮಹತ್ವವನ್ನು ಪರಿಚಯಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಹಾಗೂ ಸಂತಸವನ್ನು ಮೂಡಿಸಿತು.

Related posts

ಅಳದಂಗಡಿಯಲ್ಲಿ ಕಟ್ಟೂರು ಕಾಂಕ್ರೀಟ್ ಉತ್ಪನ್ನಗಳ ತಯಾರಿಕ ಘಟಕ ಶುಭಾರಂಭ:ಅತ್ಯುತ್ತಮ ಗುಣಮಟ್ಟದ ಸಾಲಿಡ್ ಬ್ಲಾಕ್-ಕಾಂಕ್ರೀಟ್ ಕಂಪೌಂಡ್ ವಾಲ್‌, ಕಾಳುಮೆಣಸು ಬೇಲಿ ಕಂಬ ಲಭ್ಯ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya

ಜ್ಯೋತಿ ಆಸ್ಪತ್ರೆ ಆಶ್ರಯದಲ್ಲಿ ಜೀವ ರಕ್ಷಕದ ಮಾಹಿತಿ ಕಾರ್ಯಕ್ರಮ

Suddi Udaya

ಕುಕ್ಕೇಡಿ: ಸುಡುಮದ್ದು ಸ್ಫೋಟ ಪ್ರಕರಣ: ಮತ್ತೋರ್ವ ಆರೋಪಿ ಬಂಧನ: ಬಂಧಿತ ಮೂವರಿಗೂ ಫೆ.17ರವರೆಗೆ ನ್ಯಾಯಾಂಗ ಬಂಧನ

Suddi Udaya

ಗುರುವಾಯನಕೆರೆಯಲ್ಲಿ ವಾಹದ ಟಯರೊಂದು ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆ :ಜನರಲ್ಲಿ ಆತಂಕ ಸೃಷ್ಟಿ.

Suddi Udaya

ಅಶೋಕ್ ಜೈನ್ ರವರಿಗೆ ಬೆಳ್ತಂಗಡಿ ಜೈನ್ ಮಿಲನ್ ವತಿಯಿಂದ ಸನ್ಮಾನ

Suddi Udaya
error: Content is protected !!