31.9 C
ಪುತ್ತೂರು, ಬೆಳ್ತಂಗಡಿ
September 30, 2026
Uncategorized

ಕುತ್ಲುರು ಸರಕಾರಿ ಉನ್ನತಿಕರಿಸೀದ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಭೇಟಿ:ವಿದ್ಯಾರ್ಥಿಗಳೊಂದಿಗೆ ಸಂವಾದ

ಮಂಗಳೂರು,ಬೆಳ್ತಂಗಡಿ ತಾಲೂಕಿನ ಕುತ್ಲುರು ಸರಕಾರಿ ಉನ್ನತಿಕರಿಸೀದ ಪ್ರಾಥಮಿಕ ಶಾಲೆಗೆ ದಕ್ಷಿಣ ಕನ್ನಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್ ಭೂಮ ರಡ್ಡಿ ಭೇಟಿ ನೀಡಿದದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪೊಸ್ಕೊ ಸೇರಿದಂತೆ ವಿವಿಧ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ಗಳು ಉತ್ತಮ ಕಲಿಕೆಯೊಂದಿಗೆ ಉತ್ತಮ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿನಿ ಯೊಬ್ಬರು ಪೊಲೀಸ್ ಆಗಬೇಕಾದರೆ ಏನು ಮಾಡಬೇಕು ಎಂದು ಕೇಳಿದ ಪ್ರಶ್ನೆಗೆ ಚೆನ್ನಾಗಿ ಕಲಿಯಬೇಕು ಎಂದು ಉತ್ತರಿಸಿದರು. ವಿದ್ಯಾರ್ಥಿಗಳು ವೇಣೂರು ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ಅಹ್ವಾನ ನೀಡಿದರು.ಶಾಲೆಯಲ್ಲಿ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಆವರಣದಲ್ಲಿ ನಿರ್ಮಿಸಿರುವ ಫ್ರೂಟ್ಸ್ ಪಾರ್ಕ್ ನಲ್ಲಿ ಹಣ್ಣಿನ ಗಿಡ ನೆಟ್ಟರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕನಕ ವರ್ಮ ಜೈನ್, ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಸದಸ್ಯ ಸಂತೋಷ್, ಶಾಲಾ ಮುಖ್ಯ ಗುರು ಫ್ಲೆವಿಯಾ ಡಿ ಸೋಜಾ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಇಡೀ ರಾಜ್ಯದಲ್ಲಿ ಹಗರಣಗಳ ಸರಮಾಲೆ ಮುಂದುವರಿಯುತಿದ್ದು ಅದರೊಂದಿಗೆ ವಕ್ಫ್ ಭೂಸ್ವಾದೀನದ ಮೂಲಕ ಹಿಂದೂ ಸಮಾಜಕ್ಕೆ ಅನ್ಯಾಯ ವೆಸಗುತ್ತಿದೆ: ಕಿಶೋರ್ ಕುಮಾರ್

Suddi Udaya

ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಇದರ ಕ್ಯೂಆರ್ ಕೋಡ್ ಮತ್ತು ಲೋಗೋ ಬಿಡುಗಡೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ವತಿಯಿಂದ ‘ಯೋಗ ರತ್ನ ಪ್ರಶಸ್ತಿ’ಗೆ ಚಿನ್ಮಯಿ ಎ. ಬೆಂಗಳೂರು ಆಯ್ಕೆ

Suddi Udaya

ಉಜಿರೆ: ಮಾಚಾರಿನಲ್ಲಿ ಶ್ರೀ.ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ವಾತ್ಸಲ್ಯ ಮನೆಗೆ ಕೆಸರು ಕಲ್ಲು ಹಾಕಿ ಮನೆ ನಿರ್ಮಾಣಕ್ಕೆ ಚಾಲನೆ

Suddi Udaya

ಗುರುವಾಯನಕೆರೆ 30 ನೇ ವರ್ಷದ ಸಾರ್ವಜನಿಕ‌ ಶ್ರೀ ಗಣೇಶೋತ್ಸವ: ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿಯವರಿಂದ ಗಣಪತಿಗೆ ಬೆಳ್ಳಿ ಕಿರೀಟ ಸಮರ್ಪಣೆ

Suddi Udaya

ಬಂದಾರು ಗ್ರಾಮದ ಮೈರೋಳ್ತಡ್ಕ,ಶಿವನಗರ – ಪೆರ್ಲಬೈಪಾಡಿ ಸಂಪರ್ಕಿಸುವ ಮುಖ್ಯ ರಸ್ತೆಯ ಬೋಲೋಡಿ ಎಂಬಲ್ಲಿನ ಸೇತುವೆ ಪಕ್ಕದ ಗುಡ್ಡ ಕುಸಿತ ರಸ್ತೆ ಸಂಚಾರ ಬಂದ್

Suddi Udaya
error: Content is protected !!