31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ, ನಾಲ್ಕೂರು ಗ್ರಾಮಸ್ಥರ ಸಮಾಲೋಚನ ಸಭೆ

ಬೆಳ್ತಂಗಡಿ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ನಾಲ್ಕೂರು ಸಮಿತಿಯ ಸಮಾಲೋಚನಾ ಸಭೆಯು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಆ 13ರಂದು ನಡೆಯಿತು.

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿರವರು ಕಸ್ತೂರಿ ರಂಗನ್ ವರದಿ ಮತ್ತು 7 ನೇ ಕರಡು ಅಧಿಸೂಚನೆಯ ಪರಿಸರ ಸೂಕ್ಷ್ಮ ವಲಯ ಯೋಜನೆಯಿಂದ ಎದುರಗುವ ಸಮಸ್ಯೆಗಳು ಮತ್ತು ಬೇಡಿಕೆಯನ್ನು ಕಾರ್ಯಕರ್ತರಿಗೆ ತಿಳಿಸಿದರು. ವೈಯಕ್ತಿಕ ಮತ್ತು ಸಂಘ ಸಂಸ್ಥೆ ಗಳ ಮೂಲಕ ಗ್ರಾಮ ಪಂಚಾಯತ್ ಗಳಿಗೆ ಆಕ್ಷೇಪನೆಪತ್ರ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು . ಆ. 20 ರಂದು ಹೋರಾಟದ ರೂಪುರೆಷೆಯ ಸಭೆ ಸುಬ್ರಮಣ್ಯದಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಜಿಲ್ಲಾ ಪ್ರಮುಖರಾದ ದಾಮೋಧರ್ ಗುಂಡ್ಯ, ಮಿಲನ್ ಬಾಳಿಕಳ, ಮಾಧವ ಶಿರ್ಲಾಲು, ಉಮೇಶ್ ಸುವರ್ಣ, ರವಿ ಪೂಜಾರಿ ಸುಲ್ಕೇರಿ, ವಿಜಯ್ ಕುಮಾರ್ ನಾವರ ಹಾಗೂ ನಾಲ್ಕೂರಿನ ಗ್ರಾಮಸ್ಥರು, ಮತ್ತು ಜಿಲ್ಲಾ ಪ್ರಮುಖರು, ರೈತ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ರಚಿಸಲಾಗಿದ್ದು ಸಂಚಾಲಕರಾಗಿ ಕರುಣಾಕರ ಹೆಗ್ಡೆ, ಉಪ ಸಂಚಾಲಕರಾಗಿ ದಿನೇಶ್ ಪಿಕೆ ಮತ್ತು ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.

Related posts

ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ವತಿಯಿಂದ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅವರಿಗೆ ಸನ್ಮಾನ

Suddi Udaya

ನಾವೂರು ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

Suddi Udaya

ಕಕ್ಯಪದವು ಎಲ್‌ಸಿಆರ್ ವಿದ್ಯಾಸಂಸ್ಥೆ: ಕಾಲೇಜು ವಿಭಾಗದಲ್ಲಿ ವಾಣಿಜ್ಯ ಚಟುವಟಕೆ

Suddi Udaya

ವೇಣೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ: ನೂತನ ಪ್ರವೇಶ ದ್ವಾರದ ಉದ್ಘಾಟನೆ ಹಾಗೂ ದ್ವಜಸ್ತಂಭದ ಲೋಕಾರ್ಪಣೆ

Suddi Udaya

ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯಿಂದ ಅಂಗಾಂಗ ದಾನ ನೋಂದಣಿ ಪ್ರಕ್ರಿಯೆ ಜೂ.9 ಬೆಳಿಗ್ಗೆಯಿಂದ ಅಂಗಾಂಗ ದಾನ ನೋಂದಣಿ, ರಕ್ತದಾನ ಶಿಬಿರ, ವೈದ್ಯಕೀಯ ತಪಾಸಣಾ ಶಿಬಿರ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಂಘಟನೆಯ ಅಧ್ಯಕ್ಷ ದೇವದಾಸ್ ಕೆ ಸಾಲಿಯಾನ್ ಹೇಳಿಕೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭೇಟಿ

Suddi Udaya
error: Content is protected !!