23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ರುಕ್ಮಯ್ಯ ಮೂಲ್ಯ ವಹಿಸಿದ್ದರು.

ಧ್ವಜಾರೋಹಣ ಕಾರ್ಯಕ್ರಮವನ್ನು ಲಕ್ಷ್ಮಣ ನಾಯಕ್ ಭಾರತೀಯ ಅರೆಸೇನಾ ಪಡೆಗಳ ನಿವೃತ್ತ ಯೋಧರು ನೆರವೇರಿಸಿದರು.

ಮುಖ್ಯ ಅತಿಥಿ ತಾಲೂಕು ಘಟಕದ ಅಧ್ಯಕ್ಷರು ನಿವೃತ್ತ ಸೈನಿಕರು ಚಿತ್ತರಂಜನ್ ರೈ, ವೀರಪ್ಪ ಪೂಜಾರಿ ಜಿಲ್ಲಾ ನಿರ್ದೇಶಕರು ನಿವೃತ್ತ ಸೈನಿಕರು, ಸೀತಾರಾಮ್ ಶೆಟ್ಟಿ ತಾಲೂಕು ಕೋಶಾಧಿಕಾರಿ ನಿವೃತ್ತ ಸೈನಿಕರು, ಸೀನಪ್ಪ ಆಳ್ವ ಸಂಘಟನಾ ಕಾರ್ಯದರ್ಶಿ ನಿವೃತ್ತ ಸೈನಿಕರು ಭಾಗವಹಿಸಿದ್ದರು.

ಅತಿಥಿಗಳಾಗಿ ನಿವೃತ್ತ ಸೈನಿಕರಾದ ಜಯರಾಮ ಶೆಟ್ಟಿ, ಮಾಧವ ನಾಯಕ್, ಮಂಜಪ್ಪ, ಮೋಹನ್ ಕುಲಾಲ್ , ಅದನಿ, ನಾರಾಯಣ ಪೂಜಾರಿ, ಮೋನಪ್ಪ ಗೌಡ, ಪ್ರಸಾದ್ ಗೌಡ, ಸುವರ್ಣ, ಹಾಗೂ ರೋಬರ್ಟ್ ಸಿಕ್ವೆರಾ ,ಒಟ್ಟು 15 ಮಂದಿ ನಿವೃತ್ತ ಯೋಧರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಸೇನೆಗೆ ಸೇರುವುದರಿಂದ ಆಗುವ ಪ್ರಯೋಜನಗಳು ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಮಾಧವ ಶೆಟ್ಟಿ ಶಿಕ್ಷಣ ತಜ್ಞರು ಎಸ್ ಡಿ ಎಂ ಸಿ, ಹಾಗೂ ಸರ್ವ ಸದಸ್ಯರು, ಪಂಚಾಯತ್ ಮಾಜಿ ಸದಸ್ಯರು, ಶಿಕ್ಷಕ ವೃಂದ, ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸುಭಾಶ್ಚಂದ್ರ ಪಿ ಪೂಜಾರಿ ದೈ. ಶಿ ನಿರ್ವಹಿಸಿದರು ಮುಖ್ಯ ಶಿಕ್ಷಕ ಎಸ್ ಪ್ರಕಾಶ ನಾಯ್ಕ್ ಪ್ರಸ್ತಾವಿಸಿ ಸ್ವಾಗತ ಮಾಡಿದರು. ವೆಂಕಪ್ಪ ಬಿ ಸಮಾಜ ವಿಜ್ಞಾನ ಶಿಕ್ಷಕರು ಮುಖ್ಯ ಭಾಷಣಕಾರರಾಗಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ ಮಾಡಿದರು. ಅವಿನಾಶ್ ಕನ್ನಡ ಭಾಷಾ ಶಿಕ್ಷಕರು ಅಭಿನಂದಿಸಿದರು.

Related posts

ಬೆಳ್ತಂಗಡಿಯಲ್ಲಿ ಎಸ್.ಡಿ.ಪಿ.ಐ ಪಕ್ಷದ ವತಿಯಿಂದ ಲೀಡರ್ಸ್ ಮೀಟ್ ಕಾರ್ಯಕ್ರಮ

Suddi Udaya

ನ್ಯಾಯತರ್ಪು: ಜಾರಿಗೆಬೈಲು ಮಸೀದಿ ಬಳಿ ತಂಡಗಳ ನಡುವೆ ಹಲ್ಲೆ: ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಅ.26-27: ಬೆಳ್ತಂಗಡಿಯಲ್ಲಿ ಕೋಲ್ಕತ್ತ ಸಾರಿ ಮೇಳ

Suddi Udaya

ಬೆಳ್ತಂಗಡಿ ಪಿ ಎಂ ಶ್ರೀ ಮಾದರಿ ಶಾಲೆಯಲ್ಲಿ ನಾಗರಿಕ ಹಕ್ಕುಗಳು ಮತ್ತು ಕರ್ತವ್ಯಗಳ ಮಾಹಿತಿ ಕಾರ್ಯಾಗಾರ

Suddi Udaya

ಬಂದಾರು ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪ್ರಶಸ್ತಿ ಸ್ವೀಕಾರ

Suddi Udaya

ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Suddi Udaya
error: Content is protected !!