23.9 C
ಪುತ್ತೂರು, ಬೆಳ್ತಂಗಡಿ
September 30, 2026
Uncategorized

ಶ್ರೀ ಧಾಮ ಮಾಣಿಲದಲ್ಲಿಮಹಾಲಕ್ಷ್ಮೀ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ:ಬೆಳ್ತಂಗಡಿ ತಾಲೂಕಿನಿಂದ ಹೊರಕಾಣಿಕೆ ಸಲ್ಲಿಸಲು ಅವಕಾಶ: ಹರೀಶ್ ಕಾರಿಂಜ

ಬೆಳ್ತಂಗಡಿ : ಮಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಯವರ ಮಾರ್ಗದರ್ಶನ ಮತ್ತು ಶುಭಶೀರ್ವಾದಗಳೊಂದಿಗೆ 27ನೇ ವರ್ಷದ ಶ್ರೀ ಮಹಾಲಕ್ಷ್ಮೀ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಕಾರ್ಯಕ್ರಮವು ಸುದೀರ್ಘ 48 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಆಗಸ್ಟ್ 28 ರಂದು ಸಂಪನ್ನಗೊಳ್ಳಲಿದೆ . ಸ್ವಾಮೀಜಿಗಳ ಆಶಯದಂತೆ ಬೆಳ್ತಂಗಡಿ ತಾಲೂಕಿನಿಂದ ಹೊರೆಕಾಣಿಕೆಯನ್ನು ಸಮರ್ಪಣೆ ಮಾಡಲಿದ್ದು, ಹೊರೆಕಾಣಿಯನ್ನು ಸಮರ್ಪಣೆ ಮಾಡುವ ಭಕ್ತರು ಇದೇ ತಿಂಗಳ ದಿನಾಂಕ 16 ರಿಂದ 19ರ ಒಳಗಡೆ ತಮ್ಮ ಹೊರೆ ಕಾಣಿಕೆಯನ್ನು ಕುಲಾಲ ಮಂದಿರದಲ್ಲಿ ತಂದು ಒಪ್ಪಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಭಾರ ಅಧ್ಯಕ್ಷರಾದ ಯಾದವ ಮುಂಡೂರು, ಕಾರ್ಯದರ್ಶಿ ಸುಧೀರ್ ಕೆ. ಎನ್ ಸದಸ್ಯರುಗಳಾದ ಯತೀಶ್ ಸಿರಿಮಜಲ್, ಲೋಕೇಶ್ ಕುಲಾಲ್, ಅವಿನಾಶ್ ಮಾಣೂರು, ತಿಲಕ್ ರಾಜ್ ಕುಲಾಲ್, ಉಮೇಶ್ ಕುಲಾಲ್, ದಿನೇಶ್ ಕೊಂಡೆಮಾರ್, ಗಂಗಾಧರ ಕುಲಾಲ್, ತಾರಾನಾಥ ಕುಲಾಲ್ ಹನೈನಡೆ ಹಾಗೂ ಸಂಘದ ಮೆನೇಜರ್ ಮುಖೇಶ್ ಕುಲಾಲ್ ಇವರನ್ನು ಸಂಪರ್ಕಿಸಲು ತಾಲೂಕು ಸಂಘದ ಗೌರವ ಅಧ್ಯಕ್ಷ ಹರೀಶ್ ಕಾರಿಂಜ ವಿನಂತಿಸಿದ್ದಾರೆ.

Related posts

ಶೈಖುನಾ ಶಂಸುಲ್ ಉಲಮಾ 8ನೇ ವರ್ಷದ ಉರೂಸ್ ಹಾಗೂ ವಾರ್ಷಿಕ ಮಜ್ಲಿಸುನ್ನೂರ್ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ.) , ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಪ್ರಥಮ ತಾಲೂಕು ಅಧಿವೇಶನ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ಅಧಿಕಾರಿಗಳ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ : ಸದಸ್ಯರಿಗೆ ಶೇಕಡಾ 20 ರಷ್ಟು ಲಾಭಾಂಶವನ್ನು ಘೋಷಿಸಿದ ಅಧ್ಯಕ್ಷ ಜಯಕೀತಿ೯ ಜೈನ್

Suddi Udaya

ಅರಣ್ಯ ಇಲಾಖೆ ವತಿಯಿಂದ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ: ಸಾರ್ವಜನಿಕರಿಗೆ ಕೊಕ್ಕಡ ಗ್ರಾ.ಪಂ. ಹಾಗೂ ಅರಣ್ಯ ಇಲಾಖೆಯ ವತಿಯಿಂದ ಎಚ್ಚರಿಕೆಯ ಸಂದೇಶ

Suddi Udaya

ಎಕ್ಸೆಲ್ ಟೆಕ್ನೋ ಶಾಲೆಯಲ್ಲಿ ಫನ್ಪಿನಿಟಿ ಚಿಣ್ಣರ ಪ್ಲೇ ಪಾರ್ಕ್ ಉದ್ಘಾಟನೆ, ಪೋಷಕರಿಗೆ ಆಟೋಟ ಸ್ಪರ್ಧೆ

Suddi Udaya

ಬಿಜೆಪಿ ರಾಜ್ಯಧ್ಯಕ್ಷರಾದ ಬಿ ವೈ ವಿಜಯೇಂದ್ರರವರಿಂದ ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶವಂತ್ ಡೆಚ್ಚಾರ್ ರವರಿಗೆ ಪೋನ್ ಕರೆ

Suddi Udaya
error: Content is protected !!