23.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಬೆಳ್ತಂಗಡಿ: ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ಸಂಜಯ್ ನಗರ ಜಂಕ್ಷನ್ ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ದ್ವಜಾರೋಹಣವನ್ನು ಅಧ್ಯಕ್ಷರಾದ ರಿಯಾಝ್ ಐ.ಬಿ ಅವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ನವಾಝ್ ಮಾಸ್ಟರ್, ಮೆಹಬೂಬ್ ಸಂಜಯ ನಗರ ಆಗಮಿಸಿದ್ದರು.

2026 ನೇ ಸಾಲಿನ SSLC, ದ್ವಿತೀಯ PUC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.

ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಹಿರಿಯರಾದ ಹಕೀಮ್ ಸಿ.ಎಂ ಮತ್ತು ಬೆಳ್ತಂಗಡಿ ತಾಲೂಕಿನ ಆಪತ್ಬಾಂಧವ, ಈಜು ಪರಿಣಿತ ಇಸ್ಮಾಯಿಲ್ ಸಂಜಯನಗರ ಇವರ ಸೇವೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ಇದರ ಪ್ರಧಾನ ಕಾರ್ಯದರ್ಶಿ ಶಬೀರ್ ಸಂಜಯನಗರ, ಜೊತೆ ಕಾರ್ಯದರ್ಶಿ ಅಶ್ರಫ್ ಕಟ್ಟೆ, ಉಪಾಧ್ಯಕ್ಷರಾದ ಶೈರೋಝ್ ಉದಯನಗರ, ಕೋಶಾಧಿಕಾರಿಯಾದ ರಿಜ್ವಾನ್ ಬಿ.ಕೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಇಸ್ಮಾಲಿ ಐ.ಬಿ, ಅಬ್ಬಾಸ್ ಸಂಜಯನಗರ, ಹನೀಫ್ ವರ್ಷಾ, ಖಾದರ್ ಕುದ್ರಡ್ಕ, ಹಕೀಮ್ ಸುದೇಮುಗೇರು, ಶರೀಫ್ ವೆಲ್ಕಮ್, ಊರಿನ ಹಿರಿಯರು ನಾಗರೀಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ರಶೀದ್ ಬೆಳ್ತಂಗಡಿ ಮಾಡಿದರು. ಕಾರ್ಯದರ್ಶಿಗಳಾದ ಶಬೀರ್ ಸಂಜಯನಗರ ಸ್ವಾಗತಿಸಿ, ಹನೀಫ್ ವರ್ಷಾ ಧನ್ಯವಾದಗೈದರು.

Related posts

ಎಕ್ಸೆಲ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಉಚಿತ ಎಕ್ಸೆಲ್ ಕನೆಕ್ಟ್ ಕ್ಲಾಸ್

Suddi Udaya

ಮೈರೋಳ್ತಡ್ಕ: ಗುಂಡಿ ಬಿದ್ದ ರಸ್ತೆಗೆ ಪಂಚಾಯತ್ ವತಿಯಿಂದ ಸುಗಮ ಸಂಚಾರಕ್ಕೆ ವ್ಯವಸ್ಥೆ

Suddi Udaya

ರಾಜ್ಯದ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ದ ಕಳಿಯ ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಮುಗೇರಡ್ಕ: ಸ್ಪಂದನ ಚಾರಿಟೇಬಲ್ ಟ್ರಸ್ಟ್ , ಬೆಂಗಳೂರು ಮತ್ತು ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಇದರ ಆಶ್ರಯದಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ವಿದ್ವತ್ ಪಿಯು ಕಾಲೇಜಿಗೆ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ತನುಶ್ರೀ ಶೇ.98.83

Suddi Udaya

ಶಿಶಿಲ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ: ಲೋಕಕಲ್ಯಾಣಕ್ಕಾಗಿ ಚವ್ವಿಶ ತೀರ್ಥಂಕರರ ಆರಾಧನೆ

Suddi Udaya
error: Content is protected !!