31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಾರಾವಿ ಸಂತ ಅಂತೋನಿ ಶಿಕ್ಷಣ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಆಚರಣೆ

ನಾರಾವಿ : ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಜಂಟಿಯಾಗಿ 80ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ನಾರಾವಿ ಗ್ರಾಮ ಆಡಳಿತಾಧಿಕಾರಿ ಅಕ್ಷತ್ ಸುವರ್ಣ ಧ್ವಜಾರೋಹಣಗೈದು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಯಾವ ಸಂದರ್ಭದಲ್ಲಿಯೂ ಕಡಿಮೆಯಾಗಬಾರದು ಎಂದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರು ಹಾಗೂ ಜೊತೆ ಕಾರ್ಯದರ್ಶಿಗಳಾದ ವಂ.ಸ್ವಾಮಿ ಜೆರೋಮ್ ಡಿಸೋಜ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ವೀರರನ್ನು ಸ್ಮರಿಸಿ ಅವರ ಬಲಿದಾನದ ಸಾರ್ಥಕತೆಗೆ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಸಂದೇಶ ನೀಡಿದರು.


ವೇದಿಕೆಯಲ್ಲಿ ನಾರಾವಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಮಿರಾಂದ, ಕಾರ್ಯದರ್ಶಿ ಶ್ರೀಮತಿ ಸಮಿತಾ ಡಿಸೋಜ ಸಂತ ಅಂತೋನಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕರಾದ ವಂ ಸ್ವಾಮಿ ರೂಪೇಶ್ ತಾವ್ರೊ, ನಾರಾವಿ ಪ್ರೌಢಶಾಲೆ ನಾರಾವಿ ಇಲ್ಲಿನ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ತುಳುಪುಳೆ, ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಸೋಫಿಯಾ ಪೆರ್ನಾoಡಿಸ್, ಸಂತ ಪೌಲರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ರಿಚರ್ಡ್ ಮೋರಸ್,ಜಿರೋಸಾ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಪ್ರೆಸಿಲ್ಲ ಅಂದ್ರಾದೆ ಉಪಸ್ಥಿತರಿದ್ದರು.

ನಾರಾವಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಲ್ದಾನ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಮಹೇಶ್ ಧನ್ಯವಾದ ಸಲ್ಲಿಸಿದರು. ನಾರಾವಿ ಪ್ರೌಢ ಶಾಲೆ ನಾರಾವಿಯ ಅಧ್ಯಾಪಕಿ ಶ್ರೀಮತಿ ಸ್ನೇಹಲತಾ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಲೋಕಸಭೆಯಲ್ಲಿ ಸೇವಾ ನಿವೃತ್ತ ಯೋಧರ ಪರ ಧ್ವನಿಯೆತ್ತಿದ ಸಂಸದ ಕ್ಯಾ. ಚೌಟ: ನಿವೃತ್ತ ಸೈನಿಕರಿಗೆ ECHS ಯೋಜನೆಯಡಿ ಚಿಕಿತ್ಸೆ ಪಡೆಯಲು ಎದುರಾಗಿರುವ ಅಡೆ-ತಡೆಗಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ

Suddi Udaya

ಡಿ.2 : ಕಾಪಿನಡ್ಕದಲ್ಲಿ 65 ಕೆಜಿ ವಿಭಾಗದ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಸ.ಕಿ.ಪ್ರಾ.ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ಇದರ 25 ನೇ ವರ್ಷದ ರಜತ ಮಹೋತ್ಸವ ಸಂಭ್ರಮ

Suddi Udaya

ರೂ. 2.00 ಕೋಟಿ ಅನುದಾನದಲ್ಲಿ ಬೆಳ್ತಂಗಡಿ ನಗರದ ಕೆ.ಇ.ಬಿ ರಸ್ತೆ- ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕಿಸುವ ರಸ್ತೆಯ ಅಗಲೀಕರಣ ಡಾಂಬರೀಕರಣ ಮತ್ತು ಒಳಚರಂಡಿ ನಿರ್ಮಾಣಕ್ಕೆ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಶಿಲಾನ್ಯಾಸ, ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ

Suddi Udaya

ಲಕ್ಷ್ಮೀ ಇಂಡಸ್ಟ್ರೀಸ್ “ಕನಸಿನ ಮನೆ” ವಾಮದಪದವು ಶಾಖೆ ಶುಭಾರಂಭ

Suddi Udaya

ಮಾಲಾಡಿ: ಕೊಲ್ಪೆದಬೈಲು ಶಕ್ತಿನಗರ ನಿವಾಸಿ ಕುಂಞಿಮೋಣು ನಿಧನ

Suddi Udaya
error: Content is protected !!