28.1 C
ಪುತ್ತೂರು, ಬೆಳ್ತಂಗಡಿ
September 30, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ದಿಡುಪೆ ಫಾಲ್ಸ್‌ನಲ್ಲಿ ನಿಯಮ ಉಲ್ಲಂಘನೆ; ಹೋಂಸ್ಟೇ ಮಾಲೀಕರಿಗೆ ದಂಡ

ಬೆಳ್ತಂಗಡಿ : ತಾಲೂಕಿನ ಜಲಪಾತ ತಾಣಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿದ್ದ ನಡುವೆಯೂ ಅರಣ್ಯ ಇಲಾಖೆಯ ಕಣ್ಣುತಪ್ಪಿಸಿ ಕರೆದುಕೊಂಡು ಹೋಗಿದ್ದ ದಿಡುಪೆಯ ನವಗ್ರಹ ಹೋಮ್ ಸ್ಟೇ ಮಾಲೀಕರಿಗೆ ಕುದುರೆಮುಖ ವನ್ಯಜೀವಿ ವಿಭಾಗ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಠಾ ದಂಡ ವಿಧಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಜು.20 ರಿಂದ ದಿಡುಪೆ ಫಾಲ್ಸ್ ( ಕಡಮಗುಂಡಿ) ಜಲ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಸುರಕ್ಷತೆಯ ಸಲುವಾಗಿ ಮುಂದಿನ ಆದೇಶದವರೆಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಆದರೆ ಇದರ ನಡುವೆ ದಿಡುಪೆಯ ನವಗ್ರಹ ಹೋಮ್ ಸ್ಟೇ 45 ಮಂದಿ ಪ್ರವಾಸಿಗರನ್ನು ಇಲಾಖೆಯ ಯಾವುದೇ ಅನುಮತಿ ಪಡೆಯದೆ, ನಿಯಮವಾಳಿಗಳನ್ನು ಗಾಳಿಗೆ ತೂರಿ ಆಕ್ರಮ ಪ್ರವೇಶಾತಿ ಮಾಡಿದ ಬಗ್ಗೆ ಆರ್ ಎಫ್ ಓಗೆ ಖಚಿತ ಮಾಹಿತಿ ಬಂದ ಹಿನ್ನಲೆ ಸಿಬಂದಿಗಳೊಂದಿಗೆದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ. ನಿಯಮ ಉಲ್ಲಘಿಂಸಿದ ಅವರಿಗೆ ಆ.16ರಂದು ರೂ.22,500/- ದಂಡ ವಿಧಿಸಲಾಗಿದೆ ಎಂದು ಬೆಳ್ತಂಗಡಿ ವನ್ಯಜೀವಿ ವಲಯ ತಿಳಿಸಿದೆ .

Related posts

ಮುಂಡಾಜೆ ದಿನೇಶ್ ಆಚಾರ್ಯ ರವರಿಗೆ “ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ” ಪ್ರದಾನ

Suddi Udaya

ಶ್ರೀ ವಿಶ್ವಕರ್ಮ ಸೇವಾ ಸಂಘದ ಮಹಾಸಭೆ ಹಾಗೂ ವಿಶ್ವಕರ್ಮ ಪೂಜೆ

Suddi Udaya

ಉಜಿರೆ: ಪಾಕತಜ್ಞ ಕೃಷ್ಣಮೂರ್ತಿ ರಾವ್ ನಿಧನ

Suddi Udaya

ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮೂಲಕ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದ ಕುರಿತು ಮಾಹಿತಿ ಶಿಬಿರ

Suddi Udaya

ಕರ್ನಾಟಕ ಸಾವಯವ ಕೃಷಿ ಯೋಜನೆ-ಜಿಲ್ಲಾಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿಗೆ ತಾಲೂಕಿನ 22 ಮಂದಿ ಪ್ರಗತಿಪರ ಕೃಷಿಕರು ಆಯ್ಕೆ

Suddi Udaya

ವೇಣೂರು ಸಿಎ ಬ್ಯಾಂಕ್ ನ ಮಾಜಿ ನಿರ್ದೇಶಕ ರತ್ನವರ್ಮ ಮುದ್ಯ ನಿಧನ

Suddi Udaya
error: Content is protected !!