27.1 C
ಪುತ್ತೂರು, ಬೆಳ್ತಂಗಡಿ
August 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಿಶಿಲ ಶಾಲೆಯಲ್ಲಿ ಅದ್ದೂರಿಯಾಗಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

ಶಿಶಿಲ: ಶಿಶಿಲದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಡಗರ, ಸಂಭ್ರಮ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಧ್ವಜಾರೋಹಣದ ಬಳಿಕ ಊರಿನ ಮುಖ್ಯರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳ ಭಾಗವಹಿಸುವಿಕೆಯಲ್ಲಿ ಪ್ರಭಾತ್ ಫೇರಿ ಮೆರವಣಿಗೆ ವೈಭವಪೂರ್ಣವಾಗಿ ನಡೆಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು ಹಾಗೂ ನೃತ್ಯಗಳನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಇದೇ ಸಂದರ್ಭದಲ್ಲಿ 1991ರ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಶ್ರೀ ಶಿವರಾಮ ಶಿಶಿಲ ಅವರ ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಕಲಾ ಕ್ಷೇತ್ರದ ಸೇವೆ ಮತ್ತು ಸಾಧನೆಗಳನ್ನು ದಾಖಲಿಸಿರುವ **‘ಶ್ರೀ ಶಿವರಾಮ ಶಿಶಿಲ ಗೌರವ ಸಂಪುಟ’**ವನ್ನು ಪ್ರಕಟಿಸಿ ಗುರುಗಳಿಗೆ ಅರ್ಪಿಸಲಾಯಿತು. ಇದರೊಂದಿಗೆ ಶಿಶಿಲ ಶಾಲೆಯ ನೂತನ ಕಟ್ಟಡ ನಿರ್ಮಾಣ ಹಾಗೂ ಉದ್ಘಾಟನೆಯ ಸ್ಮರಣಾರ್ಥವಾಗಿ ಪ್ರಕಟಿಸಲಾದ ‘ನೆನಪಿನ ಸಂಚಿಕೆ’ಯನ್ನೂ ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಶಿವರಾಮ ಶಿಶಿಲ ಅವರೊಂದಿಗೆ ಮುಖ್ಯ ಅತಿಥಿಗಳಾಗಿ ಪ್ರಭಾಕರ ಶಿಶಿಲ, ರಾಘವೇಂದ್ರ ನಾಯಕ್ ಹಾಗೂ ಜಿತು ನಿಡ್ಲೆ ಉಪಸ್ಥಿತರಿದ್ದರು. ಗೌರವ ಸಂಪುಟ ಹಾಗೂ ನೆನಪಿನ ಸಂಚಿಕೆಯ ಸಂಪಾದಕರಾದ ಮನೋಹರ ಗೋಖಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಟ್ಟಡ ನಿರ್ಮಾಣ ಸಮಿತಿಯ ಕರುಣಾಕರ ಶಿಶಿಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್ ಗೌಡ, ಸುಧಿನ್, ಶಾಲೆಯ ಮುಖ್ಯ ಅಧ್ಯಾಪಕಿ ಶ್ರೀಮತಿ ಸರಸ್ವತಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲೆಯ ಅಧ್ಯಾಪಕಿ ಶ್ರೀಮತಿ ಆಶಾ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಊರಿನ ವಿದ್ಯಾಭಿಮಾನಿಗಳು, ಶಾಲೆಯ ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

ಅಧ್ಯಾಪಕ ದೇವಿದಾಸ ಧನ್ಯವಾದ ಅರ್ಪಿಸಿದರು.

Related posts

ಬಳಂಜ, ನಿಟ್ಟಡ್ಕ ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya

ಸುಲ್ಕೇರಿ ಸೇತುವೆ ಬಳಿ ಸ್ಕಿಡ್ ಆಗಿ ಬಿದ್ದ ಬೈಕ್: ರಸ್ತೆಗೆ ಬಿದ್ದು ‌ಸವಾರ ಜಂಶಾದ್‌ ಎಂಬಾತನಿಗೆ ಗಂಭೀರ ಗಾಯ

Suddi Udaya

ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಪ್ರಭು ರವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಅಧಿಕಾರ ಹಸ್ತಾಂತರ

Suddi Udaya

ಜೋಷ್ಮಾ ಲೀರಾ ಮೋನಿಸ್ ಕಾನೂನು ಪದವಿಯಲ್ಲಿ 3ನೇ ‌ರ್‍ಯಾಂಕ್

Suddi Udaya

ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸ. ಹಿ. ಪ್ರಾ. ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

Suddi Udaya

ಸೌತಡ್ಕ ಮಹಾಗಣಪತಿ ದೇವಸ್ಥಾನ: ವ್ಯವಸ್ಥಾಪನಾ ಸಮಿತಿಯ 9 ಸದಸ್ಯ ಸ್ಥಾನಕ್ಕೆ 28 ಮಂದಿ ಅರ್ಜಿ

Suddi Udaya
error: Content is protected !!