32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾ.ಪಂ. , ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಡಿ. ದೇವರಾಜ ಅರಸುರವರ 111ನೇ ಜನ್ಮ ದಿನಾಚರಣೆ

ಬೆಳ್ತಂಗಡಿ: ತಾಲೂಕು ಆಡಳಿತ, ತಾಲೂಕು ಪಂಚಾಯತು, ಬೆಳ್ತಂಗಡಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಳ್ತಂಗಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ 111ನೇ ಜನ್ಮ ದಿನಾಚರಣೆಯು ಆ.20ರಂದು ತಾಲೂಕು ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಜರಗಿತು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ಪದ್ಮನಾಭ ಸಾಲ್ಯಾನ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳ್ತಂಗಡಿ ಇದರ ಕಲ್ಯಾಣಧಿಕಾರಿ ಜೋಸೆಫ್ ಪಿ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮೀ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ರಾಜೇಶ್, ಪ್ರಧಾನ ಭಾಷಣಗಾರರಾದ ಪ್ರೀಯಾ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಕೆಡಿಪಿ ಸದಸ್ಯರುಗಳು, ತಾಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ನಿಲಯ ಪಾಲಕ ಚಂದ್ರಪ್ಪ ವಂದಿಸಿದರು.

Related posts

ಆ.30: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 12 ತೆಂಗಿನಕಾಯಿ ಗಣಹೋಮ ಮತ್ತು ಚಂಡಿಕಾ ಹೋಮ

Suddi Udaya

ನ್ಯಾಯವಾದಿಯಾಗಿ 25 ವರ್ಷ ಪೂರೈಸಿದ ಬಿ.ಕೆ. ಧನಂಜಯ ರಾವ್ ರವರಿಗೆ ಶಿಷ್ಯ ವೃಂದದಿಂದ ಸನ್ಮಾನ

Suddi Udaya

ಗುರುವಾಯನಕೆರೆ : ವೈಟ್‌ಹೌಸ್ ನಿವಾಸಿ ನಾರಾಯಣ ಪೂಜಾರಿ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಣಿ-ವಿಕಸಿತ ಭಾರತ ಸಂಕಲ್ಪ ಸಭೆ

Suddi Udaya

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಉಜಿರೆ ಮಂದಾರ ಕಲಾವಿದರ ತಂಡದ ವತಿಯಿಂದ ದಿ| ಜಯರಾಮ್ ಕೆ ನಾಯರ್ ರವರಿಗೆ ನುಡಿ ನಮನ

Suddi Udaya
error: Content is protected !!