28.1 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ ಪ.ಪೂ. ಕಾಲೇಜಿನ ಎನ್.ಎಸ್.ಎಸ್ ವಿಭಾಗ ಹಾಗೂ ಸರಸ್ವತಿ ಪ್ರೌಢಶಾಲೆ ಸಹಯೋಗದಲ್ಲಿ “ಕೆಸರ್ದ ಗೊಬ್ಬು

ಮುಂಡಾಜೆ: ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ವಿಭಾಗ ಹಾಗೂ ಸರಸ್ವತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಂಡಾಜೆ ಇವರ ಸಹಯೋಗದಲ್ಲಿ ಮುಂಡಾಜೆಯ ಅಗರಿ ಗದ್ದೆಯಲ್ಲಿ “ಕೆಸರ್ದ ಗೊಬ್ಬು” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ನಾರಾಯಣಶೆಟ್ಟಿ ಅಗರಿ ಉದ್ಘಾಟಿಸಿದರು. ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ ಮಾತನಾಡಿ, ‘ಗ್ರಾಮೀಣ ಬದುಕಿನ ಸಂಸ್ಕೃತಿ-ಸೊಗಡನ್ನು ಉಳಿಸಿ ಬೆಳೆಸಬೇಕು. ಇಂದಿನ ಜನಾಂಗಕ್ಕೆ ಗ್ರಾಮೀಣ ಬದುಕಿನ ಅರಿವಾಗಬೇಕು’ ಎಂದರು. ಕಾರ್ಯಕ್ರಮದಲ್ಲಿ ಊರಿನ ಪ್ರಮುಖರಾದ ದಾಮೋದರ್ ಶೆಟ್ಟಿ ಅಗರಿ, ಕಾಲೇಜಿನ ಪ್ರಾಂಶುಪಾಲೆ ಗೀತಾ, ಸರಸ್ವತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಚಂದ್ರಮತಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ನಮಿತಾ ಕೆ ಆರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೇಜಿ ನಾಟಿಯ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ ಕೆಸರಿನ ಗದ್ದೆಯಲ್ಲಿ ವಿವಿಧ ಆಟೋಟಗಳನ್ನು ಏರ್ಪಡಿಸಿ, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕರಾದ ಪುರುಷೋತ್ತಮ ಶೆಟ್ಟಿ ನಿರೂಪಿಸಿ, ನಮಿತಾ ಕೆ ಆರ್ ವಂದಿಸಿದರು.

Related posts

ಅರಸಿನಮಕ್ಕಿ: ಅರಿಕೆಗುಡ್ಡೆ ವನದುರ್ಗ ದೇವಿ ಕ್ಷೇತ್ರದಲ್ಲಿ ನವರಾತ್ರಿ ಪೂರ್ವಭಾವಿ ಸಭೆ

Suddi Udaya

ಹಜ್ ಯಾತ್ರಿಗೆ ಪೆರಾಲ್ದರಕಟ್ಟೆ ಜುಮಾ ಮಸ್ಜಿದ್ ಕಮಿಟಿಯಿಂದ ಬೀಳ್ಕೊಡುಗೆ

Suddi Udaya

ಶ್ರೀ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪ್ರಶಾಂತ್ ಪಕ್ಕಲಾ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಭೇಟಿ

Suddi Udaya

ಬೆಳ್ತಂಗಡಿ: ಪಿ. ಎಂ. ಶ್ರೀ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಪಕ್ವಾಡದ ಜಾಗೃತಿ ಜಾಥಾ ಮತ್ತು ಮಾಹಿತಿ ಕಾರ್ಯಾಗಾರ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ಕೃಷಿ ಮಾಹಿತಿ ಕಾರ್ಯ ಕ್ರಮ

Suddi Udaya

ಮಡಂತ್ಯಾರುನಲ್ಲಿ ಚರಂಡಿಗೆ ಬಿದ್ದ ಕಾರು

Suddi Udaya
error: Content is protected !!