September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ ನೀತಿಯನ್ನು ಖಂಡಿಸಿ ಕಾನೂನು ಹೋರಾಟ : ಜಯಾನಂದ ಕಲ್ಲಾಪು

ಬೆಳ್ತಂಗಡಿ: ಪ್ರಾಕೃತಿಕ ವಿಕೋಪ ಹಾಗೂ ವಿವಿಧ ರೀತಿಯ ರೋಗ ಬಾಧೆಗಳಿಂದ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳು ವಿಪರೀತ ನಾಶವಾಗಿದ್ದು ರೈತರು ಕಂಗೆಟಿದ್ದಾರೆ. ಈ ವರ್ಷ ರೈತರು ಹವಾಮಾನ ಆಧಾರಿತ ಫಸಲು ಬೆಲೆ ವಿಮೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನೀರಿಕ್ಷಿಸುತ್ತಿದ್ದರೂ, ಈ ವರ್ಷ ಬಹಳಷ್ಟು ಕಡಿಮೆ ಪ್ರಮಾಣದಲ್ಲಿ ವಿಮೆ ಮೊತ್ತ ರೈತರ ಖಾತೆಗೆ ಜಮಾಗೊಂಡಿದ್ದು, ನಮ್ಮ ಸಂಘ ವ್ಯಾಪ್ತಿಯ ಉರುವಾಲು ಗ್ರಾಮದ ರೈತರ ಖಾತೆಗೆ ಇನ್ನೂ ಕೂಡ ವಿಮೆ ಹಣ ಜಮಾ ಆಗದೆ ರೈತರು ಸಂಕಷ್ಟದಲ್ಲಿದ್ದಾರೆ.

ನಮ್ಮ ಸಂಘದ ವ್ಯಾಪ್ತಿಯ ಕರಾಯ, ಹಾಗೂ ತಣ್ಣೀರುಪoತ ಗ್ರಾಮದ ರೈತರಿಗೆ ಈ ವರ್ಷ ಕಳೆದ ವರ್ಷಗಳಿಗಿಂತಲೂ ತುಂಬಾ ಕಡಿಮೆ ಮೊತ್ತ ರೈತರಿಗೆ ಜಮಾವಣೆಯಾಗಿದ್ದು, ಈ ಬಗ್ಗೆ ಡಿಸೆಂಬರ್ 12 ರಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಭೆ ಕರೆದಿದ್ದು ಈ ಬಗ್ಗೆ ಎಲ್ಲಾ ಸಹಕಾರಿ ಸಂಘಗಳೂ ಕೂಡ ಕಾನೂನು ಹೋರಾಟ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಈ ತಾರತಮ್ಯ ನೀತಿಯಿಂದ ಬಯಲು ಸೀಮೆಯ ರೈತರಂತೆ ನಮ್ಮ ಜಿಲ್ಲೆಯ ರೈತರು ತುಂಬಾ ಶೋಚನಿಯ ಪರಿಸ್ಥಿತಿ ಜೀವನ ನಡೆಸಬಹುದು. ಈ ಬಗ್ಗೆ ಸರ್ಕಾರ ಎಚ್ಚೆತ್ತುಗೊಂಡು ಸಮಸ್ಯೆ ಪರಿಹರಿಸದಿದ್ದಲ್ಲಿ ಕಾನೂನು ಹೋರಾಟ ನಡೆಸಲು ಸಿದ್ದರಾಗಿದ್ದೇವೆoದು ತಣ್ಣೀರುಪoತ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಾನಂದ ಕಲ್ಲಾಪು ತಿಳಿಸಿದ್ದಾರೆ.

Related posts

ಬಳಂಜ: ನೆಕ್ಕಿಲ ನಿವಾಸಿ ಅಪ್ಪಿ ಶೆಟ್ಟಿ ನಿಧನ

Suddi Udaya

ಮೇ 5: ‘ನನ್ನ ಬೂತ್ ನನ್ನ ಜವಾಬ್ದಾರಿ’ ಎಂಬ ಧ್ಯೇಯದೊಂದಿಗೆ ಪ್ರಚಾರ ಕಾರ್ಯ ಮಾಡುವಂತೆ ಕರೆ ನೀಡಿದ ಮಾಜಿ ಶಾಸಕ ವಸಂತ ಬಂಗೇರ

Suddi Udaya

ಗುರುವಾಯನಕೆರೆ ‌: ಬೈಕ್ ಗಳೇರಡರ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಗಂಭೀರ ಗಾಯ

Suddi Udaya

ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರಿಗೆ ದ.ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದಿಂದ ಗೌರವಾರ್ಪಣೆ

Suddi Udaya

ಉಜಿರೆ ಎಸ್ ಡಿ ಎಮ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ

Suddi Udaya

ಪಾರೆoಕಿ ಗ್ರಾಮದ ಹಾರಬೆ ಶ್ರೀ ದುಗಲಾಯ ಮತ್ತು ಗುಳಿಗ ದೈವಗಳ ವಾರ್ಷಿಕ ನೇಮೋತ್ಸವ

Suddi Udaya
error: Content is protected !!