28.1 C
ಪುತ್ತೂರು, ಬೆಳ್ತಂಗಡಿ
October 9, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ನಿಡಿಗಲ್ ಬದ್ರಿಯಾ ಜುಮ್ಮಾ ಮಸ್ಜಿದ್ ವತಿಯಿಂದ ಮೀಲಾದ್ ಕಾರ್ಯಕ್ರಮ

ಬೆಳ್ತಂಗಡಿ: ಬದ್ರಿಯಾ ಜುಮ್ಮಾ ಮಸ್ಜಿದ್ ನಿಡಿಗಲ್ ಕಲ್ಮಂಜ ಇದರ ವತಿಯಿಂದ ಮೀಲಾದ್ ಪ್ರಯುಕ್ತ ಸಂದೇಶ ಜಾಥಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಆಡಳಿತ ಮಂಡಳಿ ಅಧ್ಯಕ್ಷ ಇಸ್ಮಾಯಿಲ್ ಷಾ ಧ್ವಜಾರೋಹಣ ನೆರವೇರಿಸಿದರು. ಧರ್ಮಗುರುಗಳಾದ ಮುಸ್ತಫಾ ಸ‌ಅದಿ ಅಲ್ ಫುರ್ಕಾನಿ ಕಕ್ಕಿಂಜೆ ಮತ್ತು ನಾಸಿರ್ ಸ‌ಅದಿ ಪೆರ್ದಾಡಿ, ಹನೀಫ್ ಮುಸ್ಲಿಯಾರ್, ಅಬ್ದುರ್ರಝಾಕ್ ಮುಸ್ಲಿಯಾರ್, ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಮುಜೀಬ್ ಸಾಹೇಬ್, ಕಾರ್ಯದರ್ಶಿ ಮುಹಮ್ಮದ್ ರಫೀಕ್, ಉಪಾಧ್ಯಕ್ಷ ಹಮೀದ್ ಬಿ.ಎನ್, ಕೋಶಾಧಿಕಾರಿ ಪಿ.ಹೆಚ್ ಹನೀಫ್, ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಸಲೀಂ, ಕಾರ್ಯದರ್ಶಿ ಹಫೀಝ್, ಕೋಶಾಧಿಕಾರಿ ಮಿರ್ಶಾದ್ ಷಾ ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ಜಮಾಅತ್ ಬಾಂಧವರು, ಮದರಸ ವಿದ್ಯಾರ್ಥಿಗಳು, ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಾಸ್ಜಿದ್ ಪದಾಧಿಕಾರಿಗಳು ಜಾಥಾದಲ್ಲಿ ಭಾಗವಹಿಸಿದರು.

ಸೋಮವಾರ ರಾತ್ರಿ ಮಕ್ಕಳ ಪ್ರತಿಭಾ ಸಂಗಮ ನಡೆಯಿತು. ವಿವಿಧ ಸ್ಪರ್ಧೆಗಳನ್ನು ಕೈಗೊಂಡು ಬಹುಮಾನ ವಿತರಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಜಾಥಾದ ಬಳಿಕ ಮಸೀದಿಯಲ್ಲಿ ಮೌಲೀದ್ ಪಾರಾಯಣ ನಡೆಯಿತು.

Related posts

ಅಳದಂಗಡಿಯಲ್ಲಿ ಬಿಜೆಪಿ ಬೃಹತ್ ಪ್ರಚಾರ ಸಭೆ: ಸಿಂಗಂ ಖ್ಯಾತಿಯ ಅಣ್ಣಾಮಲೈಯಿಂದ ಹರೀಶ್ ಪೂಂಜರ ಪರ ಮತ ಪ್ರಚಾರ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಪ್ರೊ. ಪದ್ಮನಾಭ ಕೆ. ಅಧಿಕಾರ ಸ್ವೀಕಾರ

Suddi Udaya

ಕೊಯ್ಯೂರಿನ ಮಾವಿನಕಟ್ಟೆ ಪರಂಗಡಿ ನಾಗಬನದಲ್ಲಿ ನಾಗತಂಬಿಲ ಸೇವೆ

Suddi Udaya

ಕಳಿಯ:ಎರುಕಡಪ್ಪು ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ

Suddi Udaya

ಓಡಿಲ್ನಾಳ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರಥಮ ವರ್ಷದ ಶಾರದೋತ್ಸವ ವಿಸರ್ಜನಾ ಕಾರ್ಯಕ್ರಮ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ದಶಸಂಭ್ರಮದ ಪ್ರಯುಕ್ತ ಬಿಲ್ಲವ ಸಮಾಜ ಬಾಂಧವರಿಗಾಗಿ:8 ತಂಡಗಳ ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ,ಹಲವು ತಂಡಗಳು ಭಾಗಿ: ಮಾನವೀಯ ಸೇವೆಯ ಯುವವಾಹಿನಿಗೆ ರಾಜಕೀಯ ನಂಟು ಬೇಡ: ಬಿನುತಾ ಬಂಗೇರ

Suddi Udaya
error: Content is protected !!