26.5 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನಿಡ್ಲೆ ಪ್ರೇರಣ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಾಸಭೆ

ನಿಡ್ಲೆ: ಪ್ರೇರಣ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ನಿಡ್ಲೆ ಇದರ ವಾರ್ಷಿಕ ಮಹಾಸಭೆಯನ್ನು ಶ್ರೀಮತಿ ಜಯಶ್ರೀ ರವರ ಅಧ್ಯಕ್ಷತೆಯಲ್ಲಿ ಧ್ಯಾನ ಮಂದಿರ ನಿಡ್ಲೆಯಲ್ಲಿ ನಡೆಯಿತು.

ಒಕ್ಕೂಟದ ಅಧ್ಯಕ್ಷರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 2025-26 ನೇ ಸಾಲಿನ ಒಕ್ಕೂಟದ ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನೆ ವರದಿಯನ್ನು ಭವಾನಿ ಸಭೆ ಯಲ್ಲಿ ಮಂಡಿಸಿ ಸಭೆಯಿಂದ ಅನುಮೋದನೆ ಪಡೆಯಲಾಯಿತು.

ನಂತರ ಸ್ತನ್ಯಪಾನ ಮತ್ತು ಮಾದಕ ವ್ಯಸನದ ಬಗ್ಗೆ ಸಂಕ್ತಿಪ್ತವಾಗಿ ಮಾಹಿತಿಯನ್ನು CHO ವಿನುತಾ ನೀಡಿದರು.
ನಂತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಸಂಕ್ತಿಪ್ತ ವರದಿ ನೀಡಿದ ಮೇಲೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕರಾದ ವೀಣಾಶ್ರೀ ನಡೆಸಿಕೊಟ್ಟರು.

9 ಜನ ಪದಾಧಿಕಾರಿಗಳನ್ನು ಒಕ್ಕೂಟದಲ್ಲಿ ಬದಲಾವಣೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಪಿಡಿಒ ದಿನೇಶ್ ಭಾಗವಹಿಸಿದ್ದರು. ಯುವ ಸಬಲೀಕರಣ ಭಾರತ್ ಜೋಡೋ ಮಾಹಿತಿ ಮಾಹಿತಿ ನೀಡಿದರು.
ಒಕ್ಕೂಟದ ಪದಾಧಿಕಾರಿ ಸೌಮ್ಯ ಪ್ರಾರ್ಥಿಸಿ, ಸುಮನಾ ಸ್ವಾಗತಿಸಿ, ವಲಯ ಮೇಲ್ವಿಚಾರಕರಾದ ವೀಣಾಶ್ರೀ NRLM ಯೋಜನೆಯ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಪಶು ಸಖಿ ಸುಜಾತಾ ಧನ್ಯವಾದ ನೀಡಿದರು. ಸಂಜೀವಿನಿ ಸದಸ್ಯೆ ಹೇಮಾವತಿ ನಿರೂಪಿಸಿದರು.

Related posts

ಉಜಿರೆಯಲ್ಲಿ ಪ್ರವೀಣ್ ರವರ ಮಾಲೀಕತ್ವದ ಶ್ರೀ ಗಣೇಶ್ ಮಲ್ಟಿ ಬ್ರಾಂಡ್ ಟಯರ್ & ಗ್ಯಾರೇಜ್ ಶುಭಾರಂಭ

Suddi Udaya

ಅಂಡಿಂಜೆ ಗ್ರಾ.ಪಂ. ನಿಸರ್ಗ ಸಂಜೀವಿನಿ ಒಕ್ಕೂಟದಿಂದ ವ್ಯಾಪಾರ ಅಭಿವೃದ್ಧಿ ಯೋಜನೆ ತರಬೇತಿ ಕಾರ್ಯಾಗಾರ

Suddi Udaya

ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿಗೆ ಕ್ರೀಡಾ ಪ್ರಶಸ್ತಿ

Suddi Udaya

ಕಾಶಿಪಟ್ಣ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಹರೀಶ್ ಕೆ. ಸಾಲ್ಯಾನ್ ಆಯ್ಕೆ

Suddi Udaya

ಬಿಜೆಪಿ ಓಡಿಲ್ನಾಳ ಶಕ್ತಿ ಕೇಂದ್ರ ಅಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ ಆಯ್ಕೆ

Suddi Udaya

ಗುಂಡೂರಿ ಹಾಲು ಉ.ಸ. ಸಂಘಕ್ಕೆ ತಾಲೂಕಿನ ದ್ವಿತೀಯ ಉತ್ತಮ ಸಂಘ ಪ್ರಶಸ್ತಿ

Suddi Udaya
error: Content is protected !!