September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಧರ್ಮಸ್ಥಳ: ದೊಂಡೋಲೆ ಪರಶುರಾಮ ದೇವಸ್ಥಾನಕ್ಕೆ ಮುಖ್ಯಮಂತ್ರಿಯವರ ಕಾರ್ಯದರ್ಶಿ ಗೋಪಾಲ್ ಪಿ. ಎ ಭೇಟಿ

ಧರ್ಮಸ್ಥಳ : ಇಲ್ಲಿಯ ದೊಂಡೋಲೆ ಎಂಬಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಪರಶುರಾಮ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ಏಕಹ ಭಜನಾ ಕಾರ್ಯಕ್ರಮದ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯ ಕಾರ್ಯದರ್ಶಿಯವರಾದ ಗೋಪಾಲ್ ಪಿ. ಎ ಕುಟುಂಬಸ್ಥರು ಭೇಟಿ ನೀಡಿದರು.

ಇವರು ಚಾಮರಾಜನಗರ, ಮೈಸೂರು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿ. ಇ. ಓ. ಹಾಗೂ ಮೈಸೂರು ದಸರಾ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ನೂತನ ದೇವಸ್ಥಾನದ ಕಾರ್ಯಕ್ರಮ ಹಾಗೂ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಜೊತೆಗೆ ಆರ್. ಡಿ. ಪಿ. ಆರ್. ನೌಕರ ಸಂಘದ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ ಉಪಸ್ಥಿತರಿದ್ದರು.

ಕಾರ್ಯದರ್ಶಿಯವರಿಗೆ ದೇವಸ್ಥಾನದ ವತಿಯಿಂದ ಅನಂತರಾಮ್ ರಾವ್ , ರವಿ ಭಟ್, ಸೂರ್ಯನಾರಾಯಣ್ ರಾವ್, ಶ್ರೀನಿವಾಸ ಭಟ್, ಕಿರಣ್ ಕುಮಾರ್, ಅಜಯ್ ದೊಂಡೋಲೆ, ದಾಮೋದರ್ ದೊಂಡೋಲೆ, ಪ್ರಕಾಶ್, ಗೌರವಿಸಿದರು.

Related posts

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ 80 ನೇ ಸ್ವಾತಂತ್ರ್ಯ ಸಂಭ್ರಮಾಚರಣೆ

Suddi Udaya

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಸ್ತಬ್ಧಚಿತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಬಹುಮಾನ

Suddi Udaya

ಗುರುವಾಯನಕೆರೆ: ಎಕ್ಸೆಲ್ ಕಾಲೇಜು ವತಿಯಿಂದ ಶತಾಯುಷಿ ಬಂಗಾಡಿ ರಾಜಮನೆತನದ ರವಿರಾಜ ಬಲ್ಲಾಳ್ ಅವರಿಗೆ ಗೌರವಾರ್ಪಣೆ

Suddi Udaya

ರೆಖ್ಯ: ನಾಪತ್ತೆಯಾಗಿದ್ದ ಉರ್ನಡ್ಕ ನಿವಾಸಿ ಲೋಕೇಶ್ ರವರ ಮೃತದೇಹ ಪತ್ತೆ

Suddi Udaya

ಉಜಿರೆ ಎಸ್.ಡಿ.ಎಮ್ ಸಿ.ಬಿ.ಎಸ್.ಇ ಶಾಲೆ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ದ ಕ ಜಿಲ್ಲಾ ಗೊಲ್ಲ (ಯಾದವ )ಸಂಘ ಬೆಳ್ತಂಗಡಿ ವಲಯದ ವತಿಯಿಂದ ಮನಿಷಾರಿಗೆ ಸನ್ಮಾನ

Suddi Udaya
error: Content is protected !!