23.7 C
ಪುತ್ತೂರು, ಬೆಳ್ತಂಗಡಿ
October 12, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: ಆರೋಪಿ ಶ್ರೀಕಾಂತ್ ನನ್ನು ಬಂಧಿಸಿದ ಧಮ೯ಸ್ಥಳ ಪೊಲೀಸರು

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪಿಶ್ರೀಕಾಂತ್ (21ವ) ಎಂಬಾತನನ್ನು ಧರ್ಮಸ್ಥಳ ಪೊಲೀಸರು ದೊಡ್ಡಬಳ್ಳಾಪುರದಲ್ಲಿ ಬಂಧಿಸಿದ್ದಾರೆ.

ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕಿಯ ಮೇಲೆ ಕಳೆದ ವರ್ಷ ಆರೋಪಿ ಶ್ರೀಕಾಂತ್ (21ವ) ಎಂಬಾತ ಲೈಂಗಿಕ ದೌರ್ಜನ್ಯ ನಡೆಸಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ. ಬಾಲಕಿ ಯಾರಿಗೂ ತಿಳಿಸದೆ ,ಗರ್ಭಿಣಿಯಾಗಿದ್ದು,ಆ.22 ರಂದು ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆ.23ರಂದು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪೋಕೋ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಲು ಯತ್ನಿಸಿದ್ದು, ಬೆಂಗಳೂರಿನ ದೊಡ್ಡಬಳ್ಳಾಪುರದಿಂದ ತನ್ನ ಸ್ವಗ್ರಾಮವಾದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ. ಆ.25 ರಂದು ಸಂಜೆ ವೇಳೆ ಪೊಲೀಸರು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.

ಆರೋಪಿ ಶ್ರೀಕಾಂತ್ ಮೂಲತಃ ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಹಿಂದೂಪುರ ನಿವಾಸಿಯಾಗಿದ್ದು, ಬೆಂಗಳೂರು ನಗರದ ಚೆನ್ನಸಂದ್ರದಲ್ಲಿ ಗೂಡ್ಸ್ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬಂಧಿತ ಆರೋಪಿಯನ್ನು ಆ.26ರಂದು ಮಂಗಳೂರಿನ ಪೋಕೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಧರ್ಮಸ್ಥಳ ಪೊಲೀಸ್‌ ಠಾಣೆಯ ಸಬ್ ಇನ್ಸ್‌ಪೆಕ್ಟ‌ರ್ ಸಮರ್ಥ್ ಆರ್. ಗಾಣಿಗೇರ ತಂಡದ ಸಿಬ್ಬಂದಿಗಳಾದ ವೃಷಭ, ಮಹೇಶ್‌ ಮತ್ತು ಚರಣ್‌ರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಭಜನಾ ಕಮ್ಮಟ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮ ; ಸಾಮರಸ್ಯದ  ಸಂಕೇತವೇ ಈ ಭಜನೆ : ಪ್ರೊ. ಪವನ್ ಕಿರಣಕೆರೆ

Suddi Udaya

ಲಾಯಿಲ ಗ್ರಾ.ಪಂ ಹಾಗೂ ನಡ ಗ್ರಾ.ಪಂ. ನಿಂದ “ಸ್ವಚತೆಯೇ ಸೇವೆ 2024” ಅಂದೋಲನದಡಿ ಬೃಹತ್ ಸ್ವಚ್ಚತಾ ಕಾರ್ಯಕ್ರಮ

Suddi Udaya

ನ.25: ಡಾ. ಡಿ ವೀರೇಂದ್ರ ಹೆಗ್ಗಡೆಯವರ 76 ನೇ ಜನ್ಮ ದಿನದ ಸಂಭ್ರಮಾಚರಣೆ ಪ್ರಯುಕ್ತ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

Suddi Udaya

ಉಜಿರೆ ಅನುಗ್ರಹ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಎಲ್ . ಸಿ ಆರ್ ವಿದ್ಯಾಸಂಸ್ಥೆಗೆ ಪ್ರಶಸ್ತಿ

Suddi Udaya

ನಾವೂರು ಬಡೆಕ್ಕಾವು ದೈವ ಕಂಬಳ ಮುಹೂರ್ತ

Suddi Udaya
error: Content is protected !!