23.7 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನೂರುಲ್ ಹುದಾ ಮದ್ರಸ ಕನ್ನಡಿಕಟ್ಟೆಯಲ್ಲಿ ವೈಭವದ ‘ಫೈಳಾನ್ 2026 ಮೀಲಾದ್ ಫೆಸ್ಟ್”: ಟೈಗ್ರಿಸ್ ತಂಡ ಚಾಂಪಿಯನ್

ಬೆಳ್ತಂಗಡಿ: ನೂರುಲ್ ಹುದಾ ಮದ್ರಸ ಕನ್ನಡಿಕಟ್ಟೆಯ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮವು ‘ಫೈಳಾನ್ 2026’ ಎಂಬ ಹೆಸರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಿತು.

ಪುಣ್ಯ ಪ್ರವಾದಿತವರ ಜನ್ಮ ಮಾಸದ ಸ್ಮರಣಾರ್ಥ ಆಯೋಜಿಸಲಾದ ಮೀಲಾದ್ ಫೆಸ್ಟ್‌ನಲ್ಲಿ ಮದ್ರಸ ವಿದ್ಯಾರ್ಥಿಗಳನ್ನು ‘ಟೈಗ್ರಿಸ್’ ಮತ್ತು ‘ಯೂಫ್ರಟೀಸ್’ ಎಂಬ ಎರಡು ತಂಡಗಳಾಗಿ ವಿಂಗಡಿಸಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಕಿಡ್ಡೀಸ್, ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಹಾಗೂ ಸೂಪರ್ ಸೀನಿಯರ್ ವಿಭಾಗಗಳಲ್ಲಿ ಸ್ಟೇಜ್ ಮತ್ತು ಸ್ಟೇಜೇತರ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಸ್ಪರ್ಧೆಗಳು, ಗಾಯನ, ಭಾಷಣ ಸೇರಿದಂತೆ ಹಲವು ವೈವಿಧ್ಯಮಯ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಅನಾವರಣಗೊಳಿಸಿದವು.

ಮೀಲಾದ್ ಫೆಸ್ಟ್‌ನ ಅಂಗವಾಗಿ ಆಗಸ್ಟ್ 22 ರಂದು ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ವಿದ್ಯಾರ್ಥಿನಿಯರ ‘ಶೀ ಫೆಸ್ಟ್’ ವಿಶೇಷ ಆಕರ್ಷಣೆಯಾಗಿತ್ತು. ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಹಾಗೂ ಕಲಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಆಗಸ್ಟ್ 23 ರಂದು ಆರಂಭಗೊಂಡ ಹಳೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಕಾರ್ಯಕ್ರಮವು ರಾತ್ರಿ ಪೂರ್ತಿ ನಡೆಯುವ ಮೂಲಕ ಮಾಜಿ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ನೆನಪುಗಳಿಗೆ ಸುಂದರ ವೇದಿಕೆಯನ್ನು ಒದಗಿಸಿತು.

ಆ. 25 ರಂದು ಸಂಜೆ ಆರಂಭಗೊಂಡ ಸಮಾರೋಪ ಕಾರ್ಯಕ್ರಮವು ವಿಶೇಷ ಮೆರುಗು ಪಡೆದುಕೊಂಡಿತು. ನಿರಂತರವಾಗಿ ನಡೆದ ಬಹುಮಾನ ವಿತರಣೆ, ಕ್ಯಾಶ್ ಅವಾರ್ಡ್‌ಗಳು, ದಾನಧರ್ಮಗಳು, ಪ್ರೋತ್ಸಾಹಧನ ಹಾಗೂ ವಿವಿಧ ಉಡುಗೊರೆಗಳು ಕಾರ್ಯಕ್ರಮದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು. ವೇದಿಕೆಯಲ್ಲಿ ಕ್ಷಣಕ್ಷಣಕ್ಕೂ ಮೂಡಿಬಂದ ಹೊಸ ಘೋಷಣೆಗಳು ಹಾಗೂ ಸನ್ಮಾನಗಳು ಪ್ರೇಕ್ಷಕರಲ್ಲಿ ಕುತೂಹಲ ಮತ್ತು ಆಕರ್ಷಣೆ ಮೂಡಿಸಿದವು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಬುರ್ದಾ, ಖವ್ವಾಲಿ, ದಫ್ ಹಾಗೂ ಸ್ಕೌಟ್ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆಯಿತು.

ಮುಈನುದ್ದೀನ್‌ಗೆ ಡಿ‌.ಡಿ ಗ್ರೂಪ್ ‘ಸೂಪರ್ ಗೇರ್ ಸೈಕಲ್’

ಈ ಶೈಕ್ಷಣಿಕ ವರ್ಷದಲ್ಲಿ ಮದ್ರಸ ವಿದ್ಯಾರ್ಥಿಗಳ ಪೈಕಿ ಶಿಸ್ತು, ಉತ್ತಮ ನಡತೆ, ಅಧ್ಯಯನ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡ ಅತ್ಯುತ್ತಮ ವಿದ್ಯಾರ್ಥಿಗೆ ಮೀಲಾದ್ ಕಾರ್ಯಕ್ರಮದ ರಾತ್ರಿ ಸೈಕಲ್ ನೀಡುವುದಾಗಿ ಮಸೀದಿ ಅಧ್ಯಕ್ಷ, ಡಿ.ಡಿ ಗ್ರೂಪ್ಸ್ ಮಾಲಕ ಅಬ್ದುಲ್ ರಝಾಕ್ ಹಾಜಿ ಘೋಷಿಸಿದ್ದರು. ಅದರಂತೆ ಕಾರ್ಯಕ್ರಮಕ್ಕೆ ಎರಡು ದಿನಗಳ ಮುಂಚಿತವಾಗಿಯೇ ಸೈಕಲ್ ಅನ್ನು ವೇದಿಕೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

, ಇಮ್ರಾನ್ ಪೊಯ್ಯೆಗುಡ್ಡೆ ಅವರ ಪುತ್ರ, ಆರನೇ ತರಗತಿಯ ವಿದ್ಯಾರ್ಥಿ ಮುಈನುದ್ದೀನ್ ‘ಸೂಪರ್ ಗೇರ್ ಸೈಕಲ್’ಗೆ ಭಾಜನರಾದರು.

ಟೈಗ್ರಿಸ್ ತಂಡಕ್ಕೆ ಚಾಂಪಿಯನ್ ಪಟ್ಟ

ಮೀಲಾದ್ ಫೆಸ್ಟ್‌ನಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ದಾಖಲಿಸಿದ ಟೈಗ್ರಿಸ್ ತಂಡವು ಈ ವರ್ಷದ ‘ಫೈಳಾನ್ 2026’ ಮೀಲಾದ್ ಫೆಸ್ಟ್‌ನ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಯೂಫ್ರಟೀಸ್ ತಂಡವು ಕೂಡ ಹಲವು ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಫೆಸ್ಟ್‌ಗೆ ಮತ್ತಷ್ಟು ಸ್ಪರ್ಧಾತ್ಮಕ ಮೆರುಗು ನೀಡಿತು.

ಅಧ್ಯಾಪಕರಿಗೆ ಸನ್ಮಾನ

ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಈ ಬೃಹತ್ ಮೀಲಾದ್ ಫೆಸ್ಟ್‌ನ ಸಕಲ ಸಿದ್ಧತೆ, ಸ್ಪರ್ಧೆಗಳ ನಿರ್ವಹಣೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ಮುನ್ನಡೆಸಿದ ಮದ್ರಸ ಅಧ್ಯಾಪಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಖತೀಬ್ ರಾಝಿಕ್ ಕೌಸರಿ ಪಡ್ಡಂದಡ್ಕ, ಮದ್ರಸ ಸದರ್ ಉಸ್ತಾದ್ ಅರ್ಷದ್ ಫೈಝಿ ಅಲ್-ಮಅ್‌ಬರಿ ಕಕ್ಕಿಂಜೆ, ಮುಅಝ್ಝಿನ್ ಮೂಸಾ ಮದನಿ ಬೆಳ್ತಂಗಡಿ, ಅಲೀ ಉಸ್ತಾದ್ ಪೆರಡಿ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ವರದಿ; ಅರ್ಷದ್ ಫೈಝಿ

Related posts

ಬಾರ್ಯ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸತೀಶ್ ರವರಿಗೆ ಮಾತೃವಿಯೋಗ

Suddi Udaya

ಬೆಳ್ತಂಗಡಿ: ತಾಲೂಕು ಬ್ಯೂಟಿಪಾರ್ಲರ್ ಅಸೋಶಿಯೇಶನ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹೈಡ್ರಾ ಫೇಶಿಯಲ್ ಸೆಮಿನಾರ್

Suddi Udaya

ಇಂದಬೆಟ್ಟು: ಗಂಗಾಧರ್ ಎಸ್. ರವರ ತೋಟದಲ್ಲಿ ಬೃಹತಾಕಾರದ ಹೆಬ್ಬಾವು ಪತ್ತೆ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ “ಜನ ವಿರೋಧಿ ನೀತಿ”ಗಳನ್ನು ಖಂಡಿಸಿ ನಾವೂರು ಗ್ರಾ.ಪಂ. ಎದುರು ಬಿಜೆಪಿ ಪ್ರತಿಭಟನೆ

Suddi Udaya

ಬೆಳಾಲು: ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ವಿಶ್ವನಾಥ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಭಾರೀ ಮಳೆ : ಪಟ್ರಮೆ ಶಾಂತಿಕಾಯದಲ್ಲಿ ಗುಡ್ಡ ಕುಸಿತ

Suddi Udaya
error: Content is protected !!