October 15, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಪುಂಜಾಲಕಟ್ಟೆ: ಶ್ರೀ ಜೈ ಹನುಮಾನ್ ಬಾಲಗೋಕುಲ ಉದ್ಘಾಟನೆ

ಪುಂಜಾಲಕಟ್ಟೆ: ಶ್ರೀ ಜೈ ಹನುಮಾನ್ ಬಾಲ ಗೋಕುಲ ಸಮಿತಿಯ ಉದ್ಘಾಟನಾ ಕಾರ್ಯಕ್ರಮ ಆ.30ರಂದು ಜೈ ಹನುಮಾನ್ ಭಜನಾ ಮಂದಿರದಲ್ಲಿ ನಡೆಯಿತು.

ಉದ್ಘಾಟನೆಯನ್ನು ಸ್ಥಳೀಯ ಪ್ರಗತಿಪರ ಕೃಷಿಕ ಶಿವಾಜಿ ಭಟ್ ರವರು ಉದ್ಘಾಟಿಸಿ ಮಕ್ಕಳಿಗೆ ಸಂಸ್ಕಾರ ಶಿಸ್ತಿನ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಸೇವಾ ಪ್ರಮುಖರಾದ ವಿಜಯ್ ಅರಳಿ ಇವರು ಬಾಲಗೋಕುಲದ ಬಗ್ಗೆ ಮಾಹಿತಿಯನ್ನು ನೀಡಿದರು. ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿದರು. ಮಕ್ಕಳಿಗೆ ಭೌತಿಕವನ್ನು ನೀಡಿದರು. ಜೈ ಹನುಮಾನ್ ಭಜನಾ ಮಂದಿರದ ಅಧ್ಯಕ್ಷ ಶರತ್ ಹಟ್ಟತೋಡಿ ಶುಭ ಹಾರೈಸಿದರು. ಜೈ ಹನುಮಾನ್ ಮಹಿಳಾದ ಜನ ಮಂಡಳಿಯ ಅಧ್ಯಕ್ಷ ಭಾರತಿ ಗಿರೀಶ್ ಶ್ರೀರಾಜರಾಮ್ ಪುರಿಯ ಇವರು ಉಪಸ್ಥಿತರಿದ್ದರು.

ಜೈ ಹನುಮಾನ್ ಭಜನಾ ಮಂಡಳಿಯ ಸದಸ್ಯರು ಮಕ್ಕಳ ಪೋಷಕರು, ಕುಕ್ಕಳದ ಮಾತಾಜಿಯವರಾದ ಅಮಿತ ಮತ್ತು ವಿದ್ಯಾ ಇವರು ಮಕ್ಕಳಿಗೆ ಓಂಕಾರ, ಪ್ರಾರ್ಥನೆ ಶ್ಲೋಕ ವನ್ನು ಹೇಳಿಕೊಟ್ಟರು. ಒಟ್ಟು 42 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜೈ ಹನುಮಾನ್ ಬಾಲ ಗೋಕುಲ ಸಮಿತಿಯ ಮಾತಾಜಿ ಉಮಾ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.

Related posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶ್ರೀ ರಾಘವೇಂದ್ರ ಮಠದ ಪರಿಸರ ಸ್ವಚ್ಛತಾ ಕಾರ್ಯ

Suddi Udaya

ಲಾಯಿಲ ದಯಾ ವಿಶೇಷ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋ. ಬಿಸಿ ಟ್ರಸ್ಟ್ ಗುರುವಾಯನಕೆರೆ-ಕಣಿಯೂರು ವಲಯ ಒಕ್ಕೂಟದ ಪದಗ್ರಹಣ ಸಮಾರಂಭ

Suddi Udaya

ಬೆಳ್ತಂಗಡಿ : ಲಾರಿ- ಬೈಕ್ ಅಪಘಾತದಲ್ಲಿ ಇಬ್ಬರು ಸಾವು ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದಿಂದ ಲಾರಿ ಚಾಲಕನಿಗೆ ದಂಡ ಹಾಗೂ ಜೈಲು ಶಿಕ್ಷೆ ಪ್ರಕಟ

Suddi Udaya

ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಡಾ. ಶಿವಪ್ರಸಾದ್ ಶೆಟ್ಟಿಆಯ್ಕೆ

Suddi Udaya

ರಕ್ತೇಶ್ವರಿಪದವು ಭಜನಾ ಮಂಡಳಿ ವತಿಯಿಂದ ನಗರ ಭಜನೆಗೆ ಚಾಲನೆ

Suddi Udaya
error: Content is protected !!