27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು ಸ.ಹಿ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಖೋ-ಖೋ ಪಂದ್ಯಾಟ

ಬೆಳ್ತಂಗಡಿ : ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2026ನೇ ಸಾಲಿನ ಬೆಳ್ತಂಗಡಿ ಮತ್ತು ಬಂಗಾಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕ–ಬಾಲಕಿಯರ ಖೋ-ಖೋ ಪಂದ್ಯಾಟವನ್ನು ಆ.28ರಂದು ಕೊಯ್ಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷರು ವಹಿಸಿದ್ದರು. ವೇದಿಕೆಯಲ್ಲಿ ಕೊಯ್ಯೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಕುಮಾರ್, ಪ್ರೌಢ ಶಿಕ್ಷಕರಾದ ಸುಧಾಕರ ಶೆಟ್ಟಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಕಸ್ತೂರಿ, ಕ್ರೀಡಾಕೂಟ ಸಂಘಟಕರಾದ ರವಿ, ನಡ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ಸುಜಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರವೀಣ್, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಂದ್ರಶೇಖರ ಸಾಲ್ಯಾನ್, ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಎಂ ಉಪಸ್ಥಿತಿಯಲ್ಲಿ ನೆರವೇರಿತು.

ಪಂದ್ಯಾಟದಲ್ಲಿ ಬೆಳ್ತಂಗಡಿ ಮತ್ತು ಬಂಗಾಡಿ ವಲಯ ವ್ಯಾಪ್ತಿಯ ವಿವಿಧ ಪ್ರಾಥಮಿಕ ಶಾಲೆಗಳ ಬಾಲಕ–ಬಾಲಕಿಯರ ತಂಡಗಳು ಭಾಗವಹಿಸಿ ಅತ್ಯುತ್ತಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದವು. ಪಂದ್ಯಾಟವು ಅತ್ಯಂತ ರೋಚಕವಾಗಿ ನಡೆಯಿತು.
ಪಂದ್ಯಾಟದ ಅಂತ್ಯದಲ್ಲಿ ಬಾಲಕರ ವಿಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು ಪ್ರಥಮ ಸ್ಥಾನ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರು ದ್ವಿತೀಯ ಸ್ಥಾನ, ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಸರ್ಕಾರಿ ಪ್ರೌಢಶಾಲೆ ಕೊಯ್ಯೂರು ಹಾಗೂ ದ್ವಿತೀಯ ಸ್ಥಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರು ಪಡೆದುಕೊಂಡಿತು.

ವಿಜೇತ ತಂಡಗಳಿಗೆ ಪ್ರಶಸ್ತಿ, ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮುಂದಿನ ಹಂತದ ಪಂದ್ಯಾಟಗಳಿಗೆ ಶುಭ ಹಾರೈಸಲಾಯಿತು.

Related posts

ಬೆಳ್ತಂಗಡಿ : ತಾಲೂಕು ಆಶಾ ಕಾರ್ಯಕರ್ತರ ಸಭೆ

Suddi Udaya

ಗಾಳಿ-ಮಳೆ: ಮುಂಡಾಜೆ ಸೀಟು ಬಳಿ ರಸ್ತೆಗೆ ಬಿದ್ದ ಮರ

Suddi Udaya

ಧರ್ಮಸ್ಥಳ : ಮಹಿಳೆಯ ರೂ. 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಇರಿಸಿದ್ದ ಪರ್ಸ್ ಕಳವು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

8 ವರ್ಷದ ಹಿಂದೆ ನಿಗೂಢವಾಗಿ ನಾಪತ್ತೆಯಾದ ಗುರುವಾಯನಕರೆಯ ಏಕನಾಥ ಶೆಟ್ಟಿ ಸಹಿತ 29 ಸೈನಿಕರಿದ್ದ ಭಾರತೀಯ ಏರ್ ಫೋರ್ಸ್ ವಿಮಾನದ ಕುರುಹು ಪತ್ತೆ ವರದಿ

Suddi Udaya

ಗುರುವಾಯನ ಕೆರೆ: ಶಕ್ತಿ ನಗರದ ನಿವಾಸಿ ಸುರೇಶ್ ಪೈ ಎಂ. ನಿಧನ

Suddi Udaya

ಸಾಮಾಜಿಕ ಜಾಲತಾಣಗಳಲ್ಲಿ ಯುವಕನ ಬಗ್ಗೆ ಸುಳ್ಳು ಸಂದೇಶ: ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!