27.6 C
ಪುತ್ತೂರು, ಬೆಳ್ತಂಗಡಿ
October 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಗೆ ಪಶು ವೈದ್ಯ ಇಲಾಖೆ ಮೈಸೂರಿನ ಸೂಪರಿಟೆಂಡೆಂಟ್ ಜೆಸಿಂತಾ ಮೋರಸ್, ಹಾಗೂ ಕೃಷಿ ಇಲಾಖೆಯ ರೊನಾಲ್ಡ್ ಭೇಟಿ

ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಗೆ ಪಶು ವೈದ್ಯ ಇಲಾಖೆ ಮೈಸೂರಿನ ಸೂಪರಿಟೆಂಡೆಂಟ್ ಜೆಸಿಂತಾ ಮೋರಸ್, ಹಾಗೂ ಕೃಷಿ ಇಲಾಖೆ ಮೈಸೂರಿನ ಸೂಪರಿಟೆಂಡೆಂಟಾದ ರೊನಾಲ್ಡ್, ಮತ್ತು ನಿಕಟ ಪೂರ್ವ ಎಮ್.ಸಿ.ಸಿ. ಬ್ಯಾಂಕಿನ ಅಧ್ಯಕ್ಷರು ಮತ್ತು ಖ್ಯಾತ ನ್ಯಾಯವಾದಿಯಾದ ವ್ಯಾಲಂಟೈನ್ ಡಿ’ಸಿಲ್ವಾ ಹಾಗೂ ಅವರ ಪತ್ನಿ ಸಂತ ಅಲೋಷಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾಗಿದ್ದ ಪ್ರೊಫೆಸರ್ ಶ್ರೀಮತಿ ಪ್ರೆಸಿಲ್ಲಾ ಮೋರಸ್ ರವರು ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ವಿಚಾರಗಳನ್ನು ತಿಳಿದು ಹರ್ಷಗೊಂಡರು.

ಕಷ್ಟ ಪಟ್ಟು ದುಡಿದರೆ ಇಷ್ಟಪಟ್ಟು ಕೆಲಸಮಾಡಿದರೆ ವೈಯಕ್ತಿಕ ನಷ್ಟವಾಗದು. ನಗುಮುಖದ ಸೇವೆ, ಪ್ರಾಮಾಣಿಕತೆ, ಸತ್ಯದ ಮಾತು, ಸಂಸ್ಥೆಯ ಬೆಳವಣಿಗೆಯ ಗುಟ್ಟು. ಸೋಜಾ ಸಂಸ್ಥೆಯು 31 ವರ್ಷಗಳ ಕಾಲ ಈ ಊರಿನಲ್ಲಿ ಬೆಳೆದು ಹೆಮ್ಮರವಾಗಿ ನಿಂತಿದೆ. ಇದಕ್ಕೆಲ್ಲಾ ಕಾರಣ ನಂಬಿಕಸ್ಥ ಗ್ರಾಹಕರೆಂದು ಸಂಸ್ಥೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ನಿಮಗೆಲ್ಲರಿಗೂ ಶುಭವಾಗಲಿ ಎಂದು ಹಾರೈಸಿ ಅಭಿನಂದಿಸಿದರು.

ಸಂಸ್ಥೆಯ ಮಾಲಕರಾದ ಅಲ್ಫೋನ್ಸ್ ಫ್ರಾಂಕೋರವರು ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು. ಸಿಬ್ಬಂದಿಗಳಾದ ಅಕ್ಷತಾ ಸ್ವಾಗತಿಸಿ, ಮೋಹಿನಿ ವಂದಿಸಿದರು.

Related posts

ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಶುಭಮಸ್ತು” ಕಾರ್ಯಕ್ರಮ

Suddi Udaya

ತೆಕ್ಕಾರು ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಬಳಂಜ: ಪುಣ್ಕೆದೊಟ್ಟು ನಿವಾಸಿ ಚಂದ್ರು ನಿಧನ

Suddi Udaya

ಉಜಿರೆ: ಮಿತ್ರ ಯುವಕ ಮಂಡಲ ಹಾಗೂ ಮಿತ್ರ ಮಹಿಳಾ ಮಂಡಳಿ ಜಂಟಿ ಆಶ್ರಯದಲ್ಲಿ ಪ್ರತಿಭಾ ಸಂಗಮ

Suddi Udaya

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ: ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶಾಸಕ ಹರೀಶ್ ಪೂಂಜ ರವರ ಸೇವಾರ್ಥದಲ್ಲಿ 108 ಸೀಯಾಳಭಿಷೇಕ

Suddi Udaya

ಚಿಬಿದ್ರೆಯಲ್ಲಿ ಆನೆ ಹಾವಳಿ: ತೋಟತ್ತಾಡಿಯಲ್ಲಿ ಸಾಕು ನಾಯಿಯ ಮೇಲೆ ಚಿರತೆ ದಾಳಿ

Suddi Udaya
error: Content is protected !!